Select Your Language

Notifications

webdunia
webdunia
webdunia
webdunia

ಸಂಜಯ್ ದತ್ ಅಭಿನಯದ 'ಲಗೇ ರಹೋ ಮುನ್ನಾಭಾಯ್' ಚಿತ್ರದಲ್ಲಿ ಅಭಿನಯಿಸಿದ್ದ ಹೇಮು ಅಧಿಕಾರಿ ಇನ್ನಿಲ್ಲ!

ಸಂಜಯ್ ದತ್ ಅಭಿನಯದ 'ಲಗೇ ರಹೋ ಮುನ್ನಾಭಾಯ್' ಚಿತ್ರದಲ್ಲಿ ಅಭಿನಯಿಸಿದ್ದ ಹೇಮು ಅಧಿಕಾರಿ ಇನ್ನಿಲ್ಲ!
ಮುಂಬೈ , ಬುಧವಾರ, 23 ಮೇ 2018 (06:21 IST)
ಮುಂಬೈ : ಸಂಜಯ್ ದತ್ ಅಭಿನಯದ 'ಲಗೇ ರಹೋ ಮುನ್ನಾಭಾಯ್' ಚಿತ್ರದಲ್ಲಿ ಅಭಿನಯಿಸಿದ್ದ ಹೇಮು ಅಧಿಕಾರಿ ಅವರು  ಅನಾರೋಗ್ಯದಿಂದ  ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


81 ವರ್ಷದ ಹೇಮು ಅಧಿಕಾರಿ ಅವರು ಹಲವು ದಿನಗಳಿಂದ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.

ಮರಾಠಿ ರಂಗಭೂಮಿಯಲ್ಲಿ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಹೇಮು ಅಧಿಕಾರಿ, 'ಲಗೇ ರಹೋ ಮುನ್ನಾಭಾಯ್', 'ಕಥಾ' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಇವರ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀದೇವಿ ಸಾವಿನ ಹಿಂದೆ ಯಾರ ಕೈವಾಡವಿದೆ ಗೊತ್ತಾ?