Select Your Language

Notifications

webdunia
webdunia
webdunia
webdunia

ಗೆಳತಿ ಅಂಕಿತಾಗೆ ಸುಶಾಂತ್ ಸಿಂಗ್ ರಜಪೂತ್ ನೀಡಿದ್ದ ನಾಯಿ ಸಾವು

Sushant Singh Rajput

Krishnaveni K

ಮುಂಬೈ , ಮಂಗಳವಾರ, 6 ಫೆಬ್ರವರಿ 2024 (10:58 IST)
Photo Courtesy: Twitter
ಮುಂಬೈ: ಬಾಲಿವುಡ್ ನ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಗೆಳತಿ ಅಂಕಿತಾ ಲೋಖಂಡೆಗೆ ಉಡುಗೊರೆಯಾಗಿ ನೀಡಿದ್ದ ನಾಯಿ ಸಾವನ್ನಪ್ಪಿದೆ.

ಈ ನಾಯಿಗೆ ಮುದ್ದಾಗಿ ಸ್ಕಾಚ್ ಎಂದು ಹೆಸರಿಡಲಾಗಿತ್ತು. ಇದೀಗ ಅಂಕಿತಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಸ್ಕಾಚ್ ಸಾವನ್ನಪ್ಪಿದ ಸುದ್ದಿ ಪ್ರಕಟಿಸಿದ್ದಾರೆ. ಇದು ಸುಶಾಂತ್ ಸಿಂಗ್ ಡೇಟಿಂಗ್ ಮಾಡುತ್ತಿದ್ದಾಗ ಉಡುಗೊರೆಯಾಗಿ ನೀಡಿದ ಶ್ವಾನವಾಗಿತ್ತು. ಹೀಗಾಗಿ ಸುಶಾಂತ್ ಅಭಿಮಾನಿಗಳೂ ಸ್ಕಾಚ್ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಸುಶಾಂತ್-ಅಂಕಿತಾ ರಿಲೇಷನ್ ಶಿಪ್
ಪವಿತ್ರ ರಿಷ್ತಾ ಧಾರವಾಹಿಯಲ್ಲಿ ಸುಶಾಂತ್ ಮತ್ತು ಅಂಕಿತಾ ಜೊತೆಯಾಗಿ ಕೆಲಸ ಮಾಡಿದ್ದರು. ಈ ವೇಳೆ ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಆಗಲೇ ಸುಶಾಂತ್ ಈ ನಾಯಿಯನ್ನು ಉಡುಗೊರೆಯಾಗಿ ನೀಡಿದ್ದರು. ಈ ಹಿಂದೆ ಸುಶಾಂತ್ ಬದುಕಿದ್ದಾಗ ಈ ನಾಯಿ ಮರಿ ಜೊತೆ ಆಡುವ ವಿಡಿಯೋ ಕೂಡಾ ವೈರಲ್ ಆಗಿತ್ತು. ಸುಶಾಂತ್ ತೀರಿಕೊಂಡ ಬಳಿಕವೂ ಅಂಕಿತಾ ಈ ನಾಯಿಯನ್ನು ತಮ್ಮ ಜೊತೆಗೇ ಇಟ್ಟುಕೊಂಡಿದ್ದರು. ಈಗ ಅದೇ ನಾಯಿ ಮೃತಪಟ್ಟಿದೆ.

ಅಂಕಿತಾ ಇತ್ತೀಚೆಗೆ ಬಿಗ್ ಬಾಸ್ ಹಿಂದಿ ಶೋನಲ್ಲಿ ಸ್ಪರ್ಧಿಯಾಗಿದ್ದರು. ಅವರ ಜೊತೆಗೆ ಪತಿ ವಿಕ್ಕಿ ಜೈನ್ ಕೂಡಾ ಮನೆಯೊಳಗಿದ್ದರು. ಆದರೆ ಇಬ್ಬರ ನಡುವೆ ಜಗಳದಿಂದಲೇ ಸುದ್ದಿಯಾಗಿದ್ದರು. ಬಳಿಕ ಶೋನಲ್ಲಿ ಫೈನಲ್ ತನಕ ಬಂದಿದ್ದ ಅಂಕಿತಾ ಟ್ರೋಫಿ ಗೆಲ್ಲಲಾಗದೇ ನಿರಾಸೆ ಅನುಭವಿಸಿದ್ದರು. ಇದೀಗ  ಮುದ್ದಿನ ನಾಯಿ ಕಳೆದುಕೊಂಡ ದುಃಖದಲ್ಲಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಬಹುಶಃ ಅವನು ಪ್ರಾಣ ಬಿಡಲು ನೀವು ಮನೆಗೆ ಹಿಂತಿರುಗುವುದನ್ನೇ ಕಾಯುತ್ತಿದ್ದ ಎನಿಸುತ್ತದೆ. ಯಾಕೋ ನಿಮ್ಮ ಟೈಂ ಸರಿ ಇಲ್ಲ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುಐ ಸಿನಿಮಾ ಅಪ್ ಡೇಟ್ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ