Select Your Language

Notifications

webdunia
webdunia
webdunia
webdunia

ಬೆಂಗಳೂರು ಹುಡುಗನಿಗೆ ವಂಚಿಸಿದ ಬಾಲಿವುಡ್ ನಟಿ ಭಂದಗೀ ಕಲ್ರಾರ್. ನಡೆದದ್ದೇನು ಗೊತ್ತಾ?

ಬೆಂಗಳೂರು ಹುಡುಗನಿಗೆ ವಂಚಿಸಿದ ಬಾಲಿವುಡ್ ನಟಿ ಭಂದಗೀ ಕಲ್ರಾರ್. ನಡೆದದ್ದೇನು ಗೊತ್ತಾ?
ಬೆಂಗಳೂರು , ಶನಿವಾರ, 21 ಜುಲೈ 2018 (15:44 IST)
ಬೆಂಗಳೂರು : ಐಫೋನ್ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯೊಬ್ಬರು ಬೆಂಗಳೂರು ಮೂಲದ ಯುವಕನಿಗೆ ವಂಚನೆ ಮಾಡಿರುವುದಾಗಿ ತಿಳಿದುಬಂದಿದೆ.


ಆ ನಟಿ ಬೇರೆ ಯಾರು ಅಲ್ಲ. ಬಿಗ್ ಬಾಸ್ ಸೀಝನ್ 11 ರ ಸ್ಪರ್ಧಿ , ನಟಿ ಭಂದಗೀ ಕಲ್ರಾರ್. ಇವರು ಬೆಂಗಳೂರು ಮೂಲದ ಯುವಕ ಯುವರಾಜ್ ಎಂಬಾತನಿಗೆ ನಕಲಿ ಮೊಬೈಲ್ ನೀಡಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.


ಇಷ್ಟಕ್ಕೂ ನಡೆದದ್ದೇನು ಗೊತ್ತಾ? ನಟಿ ಭಂದಗೀ ಕಲ್ರಾರ್ ಇನ್ ಸ್ಟಾಗ್ರಾಂನಲ್ಲಿ ಐ ಫೋನ್ ಎಕ್ಸ್ 1 ಲಕ್ಷದ ಮೊಬೈಲ್ ಅನ್ನು 68 ಸಾವಿರಕ್ಕೆ ಮಾರಾಟ ಮಾಡುವುದಾಗಿ ಜಾಹಿರಾತು ನೀಡಿದ್ದಳು. ಈ ಜಾಹಿರಾತು ನೋಡಿ ಬೆಂಗಳೂರಿನ ಯುವಕ ಯುವರಾಜ್ ನಟಿ ಭಂದಗೀ ಜೊತೆ ಚಾಟ್ ಮಾಡಿದ್ದನು.


ನಂತರ ಯುವರಾಜ್ ಐಫೋನ್ ಖರೀದಿಸಿ ನಟಿಗೆ ಅಡ್ವಾನ್ಸ್ ಆಗಿ 13 ಸಾವಿರ ರೂ. ಹಣವನ್ನು ನೀಡಿದ. ಉಳಿದ ಹಣ 48 ಸಾವಿರ ರೂ. ನಂತರ ನೀಡಿ ಐಫೋನ್ ಇರುವ ಕೊರಿಯರ್ ಪಡೆದುಕೊಂಡಿದ್ದನು. ಆದರೆ ಕೊರಿಯರ್ ಶಾಪ್ ಮುಂದೆಯೇ ಬಾಕ್ಸ್ ಓಪನ್ ಮಾಡಿದ ಯುವನಿಗೆ ಶಾಕ್ ಆಗಿದೆ ಕಾರಣ ಅಲ್ಲಿರುವುದು  ನಕಲಿ ಮೊಬೈಲ್.


ತಕ್ಷಣ ಆತ ನಟಿ ಭಂದಗೀ ಕಲ್ರಾ ಮತ್ತು ಬ್ಲೂ ಡಾರ್ಟ್ ವಿರುದ್ಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯುವೆಲ್ಲರಿ ಕಂಪೆನಿಗೆ ಈ ನಟಿ ಮಾಡಿದ ವಂಚನೆಯಾದರೂ ಏನು ಗೊತ್ತೇ?