Select Your Language

Notifications

webdunia
webdunia
webdunia
webdunia

ಬಾಲಿವುಡ್ ನ ಹಿರಿಯ ನಟ ಜಿತೇಂದ್ರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

ಬಾಲಿವುಡ್ ನ ಹಿರಿಯ ನಟ ಜಿತೇಂದ್ರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ
ನವದೆಹಲಿ , ಗುರುವಾರ, 8 ಫೆಬ್ರವರಿ 2018 (07:29 IST)
ನವದೆಹಲಿ : ಬಾಲಿವುಡ್ ನ ಖ್ಯಾತ ಹಿರಿಯ ನಟ ಜಿತೇಂದ್ರ ಅವರು ತಮ್ಮ ಸಂಬಂಧಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ  ಪ್ರಕರಣ ದಾಖಲಾಗಿದೆ.


ನಟ ಜಿತೇಂದ್ರ ಅವರು ತಮ್ಮ 28 ನೇ ವಯಸ್ಸಿನಲ್ಲಿ 18 ವರ್ಷ ವಯಸ್ಸಿನ  ತಮ್ಮ ಸಂಬಂಧಿಯೊಬ್ಬರನ್ನು ಆಕೆಯ ತಂದೆಯಿಂದ ಒಪ್ಪಿಗೆ ಪಡೆದು ಚಿತ್ರೀಕರಣ ಸ್ಥಳಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ.
ನಟ ಜಿತೇಂದ್ರರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿ ಯಾತನೆ ಅನುಭವಿಸಿದ್ದೇನೆ. ಇಷ್ಟು ವರ್ಷಗಳ ನಂತರವಾದರೂ ನನಗೆ ನ್ಯಾಯ ಸಿಗಲಿ ಎಂದು ಮಹಿಳೆ ದೂರು ನೀಡಿದ್ದು, ತಮ್ಮ ಹೆಸರನ್ನು ಕಾನೂನು ಪ್ರಕಾರ ಗೌಪ್ಯವಾಗಿಡುವಂತೆ ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಮದುವೆ ಸುದ್ದಿ ಬಗ್ಗೆ ಶ್ರೇಯಾ ಶರಣ್ ಏನು ಹೇಳಿದ್ದಾರೆ ಗೊತ್ತಾ...?