Select Your Language

Notifications

webdunia
webdunia
webdunia
webdunia

ಆಗಸ್ಟ್ 14 ರಂದು ದೊಡ್ಮನೆ ಹುಡ್ಗ ಸಿನಿಮಾದ ಆಡಿಯೋ ಲಾಂಚ್

ಆಗಸ್ಟ್ 14 ರಂದು ದೊಡ್ಮನೆ ಹುಡ್ಗ ಸಿನಿಮಾದ ಆಡಿಯೋ ಲಾಂಚ್
ಬೆಂಗಳೂರು , ಶನಿವಾರ, 6 ಆಗಸ್ಟ್ 2016 (09:15 IST)
ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾಗಳಲ್ಲಿ ಒಂದು ದೊಡ್ಮನೆ ಹುಡ್ಗ ಸಿನಿಮಾ. ಸಿನಿಮಾ ಸೆಟ್ಟೇರಿದಾಗಿನಿಂದ ದೊಡ್ಮನೆ ಹುಡ್ಗ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ,ಆಡಿಯೋ ಯಾವಾಗ ರಿಲೀಸ್ ಆಗುತ್ತೆ ಅಂತಾ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಇದೀಗ ಅವರ ಕುತೂಹಲಕ್ಕೆ ಒಂದು ಉತ್ತರ ಸಿಕ್ಕಿದೆ.

ಇದೇ ತಿಂಗಳ 14 ರಂದು ದೊಡ್ಮನೆ ಹುಡ್ಗ ಸಿನಿಮಾದ ಆಡಿಯೋ ರಿಲೀಸ್ ಆಗಲಿದೆ.ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸಿನಿಮಾದ ಆಡಿಯೋ ರಿಲೀಸ್ ಆಗಲಿದೆ ಎಂದು ಸಿನಿಮಾ ತಡದ ಮೂಲಗಳು ತಿಳಿಸಿವೆ. ಈ ಹಿಂದೆ ರಥಾವರ ಸಿನಿಮಾದ ಆಡಿಯೋ ಕೂಡ ಸಿದ್ಧಗಂಗಾ ಮಠದಲ್ಲೇ ರಿಲೀಸ್ ಆಗಿತ್ತು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.

ಇದೀಗ ದುನಿಯಾ ಸೂರಿ ತಮ್ಮ ಸಿನಿಮಾದ ಆಡಿಯೋವನ್ನು ಸಿದ್ಧಗಂಗಾ ಮಠದಲ್ಲೇ ಮಾಡಲು ನಿರ್ಧರಿಸಿದ್ದಾರಂತೆ.ಇನ್ನು ಮೊನ್ನೆ ತಾನೇ ಸಿನಿಮಾ ಹಾಡುಗಳನ್ನು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಚಿತ್ರೀಕರಣ ಮಾಡಿ ಸಿನಿಮಾ ತಂಡ ಸದ್ದು ಮಾಡಿತ್ತು.

ಅಂದ್ಹಾಗೆ ಈ ಸಿನಿಮಾವನ್ನು ದುನಿಯಾ ಸೂರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಹುಡುಗರು ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದ ರಾಧಿಕಾ ಪಂಡಿತ್ ಅವರು ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳುತ್ತಿದ್ದಾರೆ. ಶೀಘ್ರದಲ್ಲಿ ದೊಡ್ಮನೆ ಹುಡ್ಗ ಸಿನಿಮಾ ಪ್ರೇಕ್ಷಕರೆದುರಿಗೆ ಬರಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ಹಾಲಿಡೇಗಾಗಿ ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ ದೀಪಿಕಾ ಪಡುಕೋಣೆ