ತನ್ನದೇ ತದ್ರೂಪಿನ ಜೂಲಿಯಾ ಜತೆ ಚ್ಯಾಟ್ ಮಾಡಿದ ಅನುಷ್ಕಾ ಶರ್ಮಾ

ಗುರುವಾರ, 7 ಫೆಬ್ರವರಿ 2019 (09:30 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾರನ್ನೇ ಹೋಲುವ ಅಮೆರಿಕನ್ ಗಾಯಕಿ ಜೂಲಿಯಾ ಮೈಕಲ್ಸ್ ಫೋಟೋ ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗಿತ್ತು.


ಇದೀಗ ಅನುಷ್ಕಾ ಮತ್ತು ಜೂಲಿಯಾ ಆನ್ ಲೈನ್ ಮೂಲಕ ಚ್ಯಾಟಿಂಗ್ ಮಾಡಿದ್ದಾರೆ. ಮೊದಲು ಜೂಲಿಯಾ ಅನುಷ್ಕಾಗೆ ಟ್ವೀಟ್ ಮಾಡಿದ್ದು, ಹಾಯ್ ಅನುಷ್ಕಾ ನಾವಿಬ್ಬರೂ ಅವಳಿ ಜವಳಿ ಥರಾ ಇದ್ದೇವೆ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅನುಷ್ಕಾ ‘ಓ ಮೈ ಗಾಡ್! ಹೌದು.. ನಾನು ನಮ್ಮಂತಿರುವ ಉಳಿದ ಐದು ಮಂದಿಗಾಗಿ ಜೀವನ ಪೂರ್ತಿ ಕಾಯುತ್ತೇನೆ’ ಎಂದಿದ್ದಾರೆ. ಒಬ್ಬರಂತೆ ಲೋಕದಲ್ಲಿ ಏಳು ಮಂದಿ ಇರುತ್ತಾರೆ ಎಂಬ ನಂಬಿಕೆಯಿದೆ. ಈ ಹಿನ್ನಲೆಯಲ್ಲಿ ಅನುಷ್ಕಾ ಜೂಲಿಯಾಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING