Select Your Language

Notifications

webdunia
webdunia
webdunia
webdunia

ಮುಂದಿನ ಚಿತ್ರಕ್ಕಾಗಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಆಲಿಯಾ ಭಟ್

ಮುಂದಿನ ಚಿತ್ರಕ್ಕಾಗಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಆಲಿಯಾ ಭಟ್
ಮುಂಬೈ , ಗುರುವಾರ, 30 ಜೂನ್ 2016 (18:32 IST)
'ಉಡ್ತಾ ಪಂಜಾಬ್' ಚಿತ್ರದ ಯಶಸ್ಸಿನ ಬಳಿಕ ನಟಿ ಆಲಿಯಾ ಭಟ್ ಮುಂಬರುವ ಚಿತ್ರದಲ್ಲಿ ಬ್ಯೂಸಿ ಇದ್ದಾಳೆ. ಆಲಿಯಾ ಭಟ್ ಮುಂದಿನ ಚಿತ್ರಕ್ಕಾಗಿ ಈಗಾಗಲೇ ಜಿಮ್‌ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಾಳೆ. ಎಲ್ಲಾ ಟೈಮ್ ಫಿಟ್ ಆಂಡ್ ಫೈನ್ ಆಗಿರೋ ಆಲಿಯಾಗೆ ಜಿಮ್‌ನಲ್ಲಿ ಕಠಿಣವಾಗಿ ಶ್ರಮಪಡುತ್ತಿರುವ ಬಗ್ಗೆ ಟ್ರೈನರ್ ಫೊಟೋ ಶೇರ್ ಮಾಡಿದ್ದಾರೆ. 
ಆಲಿಯಾ ಜಿಮ್ ಮಾಡುತ್ತಿರುವ ವಿಡಿಯೋವನ್ನು ಟ್ರೈನರ್ ಯಾಸ್ಮಿನ್ ಕರ್ಚಿವಾಲಾ ಶೇರ್ ಮಾಡಿದ್ದಾರೆ. ಬಾಲಿವುಡ್ ಸ್ಟಾರ್ ಟ್ರೈನರ್ ಆಗಿರೋ ಯಾಸ್ಮಿನ್ ಹಲವು ಬಾಲಿವುಡ್ ಸ್ಟಾರ್‌ಗಳಿಗೆ ಟ್ರೈನಿಂಗ್ ನೀಡಿದ್ದಾರೆ. ಸ್ಲೈಡ್ ಮಶೀನ್‌ನಲ್ಲಿ ಆಲಿಯಾ ವರ್ಕೌಟ್‌ನಲ್ಲಿ ತೊಡಗಿರುವುದನ್ನು ಇಲ್ಲಿ ನೋಡಬಹುದು. 
 
ಇದಕ್ಕೂ ಮೊದಲು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಫೊಟೋವನ್ನು ಶೇರ್ ಮಾಡಿದ್ದರು. ಮಸಲ್ಸ್ ಬಗ್ಗೆ ಹೆಚ್ಚಿನ ಕೊಡುತ್ತಾಳಂತೆ ಆಲಿಯಾ ಭಟ್. 

ಈಗಾಗ್ಲೇ ಉಡ್ತಾ ಪಂಜಾಬ್ ಚಿತ್ರದಲ್ಲಿ ಅಮೋಘವಾಗಿ ಪ್ರದರ್ಶನ ನೀಡಿದ್ದ ಆಲಿಯಾ ಭಟ್, ಇವರು ಅಭಿನಯಕ್ಕಾಗಿ ಬಾಲಿವುಡ್ ದಿಗ್ಗಜರಿಂದ ಪ್ರಶಂಸೆ ವ್ಯಕ್ತವಾಗಿತ್ತು. ಆಲಿಯಾ ಭಟ್ , ಕರೀನಾ ಕಪೂರ್, ಶಾಹಿದ್ ಕಪೂರ್ ಅಭಿನಯದ 'ಉಡ್ತಾ ಪಂಜಾಬ್' ಉಡ್ತಾ ಪಂಜಾಬ್ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಆಲಿಯಾ ಭಟ್ ಪಕ್ಕಾ ಬಿಹಾರಿ ಹುಡುಗಿ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಳು. 
 
23 ವರ್ಷದ ಆಲಿಯಾ ಭಟ್ ನಂಬರ್ ಗೇಮ್‌ ಬಗ್ಗೆ ಯೋಚಿಸದೇ ಜೀವನವನ್ನು ಎಂಜಾಯ್ ಮಾಡುತ್ತೇನೆ ಎಂದು ಆಲಿಯಾ ತಿಳಿಸಿದ್ದಳು. ನನ್ನ ಕೆರಿಯರ್‌ನಲ್ಲಿ ಕಡಿಮೆ ಸಮಯದಲ್ಲೇ ಆಗಿದೆ. ಆದ್ರೆ ನನಗೆ ಈ ಬಗ್ಗೆ ಯಾವುದೇ ಭಯವಿಲ್ಲ. ನಾನು ಮಹಾನ್ ನಟರ ಜತೆಗೆ ಹಾಗೂ ನಿರ್ದೇಶಕರ ಜತೆಗೆ ಕೆಲಸ ಮಾಡಿರುವುದರ ಬಗ್ಗೆ ಅಭಾರಿಯಾಗಿದ್ದೇನೆ ಎಂದು ತಿಳಿಸಿದ್ದಳು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾತ್ರಕ್ಕಾಗಿ ಕಥಕ್ ನೃತ್ಯ ಕಲಿಯುತ್ತಿರುವ ನಟಿ ಡೈಸಿ ಶಾ