Select Your Language

Notifications

webdunia
webdunia
webdunia
webdunia

'ದಾದಾ ಸಾಹೇಬ ಫಾಲ್ಕೆ' ಪ್ರಶಸ್ತಿಗೆ ಪಾತ್ರರಾದ ನಟಿ ಅನುಷ್ಕಾ ಶರ್ಮಾ

'ದಾದಾ ಸಾಹೇಬ ಫಾಲ್ಕೆ' ಪ್ರಶಸ್ತಿಗೆ ಪಾತ್ರರಾದ ನಟಿ ಅನುಷ್ಕಾ ಶರ್ಮಾ
ಮುಂಬೈ , ಸೋಮವಾರ, 9 ಏಪ್ರಿಲ್ 2018 (07:06 IST)
ಮುಂಬೈ : ಬಾಲಿವುಡ್ ನ ಸ್ಟಾರ್ ನಟಿ ಅನುಷ್ಕಾ ಶರ್ಮಾ ಅವರು ಅಭಿನಯದಲ್ಲಿ ಮಾತ್ರವಲ್ಲದೇ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದು, ಅವರ ಚಿತ್ರ ನಿರ್ಮಾಣದ ಸಾಧನೆಯನ್ನು ಗುರುತಿಸಿ ಇದೀಗ ಅವರಿಗೆ 2018ರ ದಾದಾ ಸಾಹೇಬ ಫಾಲ್ಕೆ' ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.


ನಟಿ ಅನುಷ್ಕಾ ಅವರು ತಮ್ಮ ನಟನೆಯ ಮೂಲಕ ಉತ್ತಮ ಸಿನಿಮಾಗಳನ್ನು ನೀಡಿದ್ದಲ್ಲದೇ  ಜೊತೆಗೆ ತಮ್ಮದೇ ಸಂಸ್ಥೆಯೊಂದಿಗೆ ಚಿತ್ರಗಳ ನಿರ್ಮಾಣ ಮಾಡಲು ಶುರುಮಾಡಿದ್ದರು. ಇವರ ಬ್ಯಾನರ್ ಅಡಿಯಲ್ಲಿ 'ಎನ್‌ಎಚ್‌ 10', ‘ಪಿಲ್ಲೌರಿ’ ಹಾಗೂ ‘ಪರಿ’ ಎನ್ನುವ ಮೂರು ಚಿತ್ರಗಳು ಮೂಡಿಬಂದಿದ್ದು, ಇವು ಮೂರು ಸೂಪರ್ ಹಿಟ್ ಆಗಿವೆ. ಭಿನ್ನವಾದ ಪರಿಕಲ್ಪನೆಯನ್ನಿಟ್ಟುಕೊಂಡು ಚಿತ್ರ ನಿರ್ಮಾಣ ಮಾಡಿರುವ ಕಾರಣದಿಂದ ನಟಿ ಅನುಷ್ಕಾ ಅವರಿಗೆ ದಾದಾ ಸಾಹೇಬ ಫಾಲ್ಕೆ ಫೌಂಡೇಶನ್ ಈ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧಾರ ಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದ ಖ್ಯಾತ ನಿರ್ದೇಶಕ, ರಂಗಭೂಮಿ ಕಲಾವಿದ ಟಿ.ಎಸ್.ರಂಗಾ ಇನ್ನಿಲ್ಲ!