Select Your Language

Notifications

webdunia
webdunia
webdunia
webdunia

ಅಮಿತಾಬ್ ಬಚ್ಚನ್ -ಧನುಶ್ ಚಿತ್ರದಲ್ಲಿ ಶ್ರುತಿ ಹಾಸನ್ ಹಾಡು ?

ಅಮಿತಾಬ್ ಬಚ್ಚನ್ -ಧನುಶ್ ಚಿತ್ರದಲ್ಲಿ ಶ್ರುತಿ ಹಾಸನ್ ಹಾಡು ?
, ಗುರುವಾರ, 17 ಏಪ್ರಿಲ್ 2014 (09:21 IST)
PR
ಅಪ್ಪ ಕಮಲಾ ಹಾಸನ್ ಚಿತ್ರ ಪೊಟ್ರಿ ಪಾಡಡಿ ಪೊಣ್ಣೆ ಎನ್ನುವ ಚಿತ್ರದ ಮುಖಾಂತರ ಶ್ರುತಿ ಹಾಸನ್ ಹಾಡಿನ ಮುಖಾಂತರವೂ ಸಹ ತನ್ನ ಪ್ರತಿಭೆ ತೋರಿಸಿದ್ದಳು. ಆಕೆಯ ಕಂಠ ಇಳಯರಾಜ ಅವರ ಸಂಗೀತ ನಿರ್ದೇಶನದಿಂದ ಜಗತ್ತಿಗೆ ಗೊತ್ತಾಯಿತು.

ಅವರ ಕಂಪೋಸಿಶನ್ ಚಿತ್ರ ತೇವರ ಮಗನ್ ನಲ್ಲೂ ಸಹಿತ ಆಕೆ ಹಾಡಿದ್ದಳು. ಈಗ ಹಿಂದಿ ಚಿತ್ರದಲ್ಲಿ ಹಾಡಲು ಸಿದ್ಧತೆ ನಡಿಸಿದ್ದಾಳೆ ತನ್ನ ತಂಗಿ ಅಕ್ಷರಳ ಸಿನಿಮಾಕ್ಕೆಂದು!

ಈ ಚಿತ್ರಕ್ಕೆ ಇನ್ನು ಶೀರ್ಷಿಕೆ ಇಟ್ಟಿಲ್ಲ. ಧನುಶ್ ಮತ್ತು ಅಮಿತಾಬ್ ಬಚ್ಚನ್ ಅವರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಬಾಲ್ಕಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

webdunia
PR
ಇತ್ತೀಚೆಗಷ್ಟೇ ಶ್ರುತಿ ಚೆನ್ನೈ ಗೆ ತೆರಳಿ ರಾಜ ಸರ್ ಸ್ಟುಡಿಯೋ ದಲ್ಲಿ ಹಾಡಿನ ಚಿತ್ರೀಕರಣ ಮುಗಿಸಿ ಬಂದಿದ್ದಾಳೆ ಎನ್ನುವುದು ಸದ್ಯದ ಸುದ್ದಿ.ಆದರೆ ಈಕೆ ಸೋಲೋ ಹಾಡಿದ್ದಾಳಾ, ಇಲ್ಲವೇ ಡ್ಯುಯೆಟ್ ಅಥವಾ ತನ್ನ ತಂಗಿ ಅಕ್ಷರಳಿಗೆ ಧ್ವನಿ ನೀಡಿದ್ದಾಳೋ ಅಂತೂ ಯಾವುದರ ಬಗ್ಗೆ ಸರಿಯಾಗಿ ತಿಳಿದು ಬಂದಿಲ್ಲ.

ತನ್ನ ಹಾಡಿನ ಕೆರಿಯರ್ ಇಳೆಯರಾಜ ಅವರ ಸಂಗೀತ ನಿರ್ದೇಶನದಿಂದ ಆರಂಭಿಸಿದ ಕಾರಣ ಆಕೆ ಈ ಚಿತ್ರಕ್ಕೆ ವಿಶೇಷವಾದ ಹಾಡು ಹಾಡಿದ್ದಾಳೆ ಅಂತ ಹೇಳುತ್ತಿದ್ದಾರೆ ಒಂದಷ್ಟು ಜನ,... ವಿಷಯ ಏನೇ ಇರಲಿ ಶ್ರುತಿ ಹಾಡಿದ್ದಾಳೆ ಅನ್ನುವ ಸಂಗತಿ ಮಾತ್ರ ಆಕೆಯ ಅಭಿಮಾನಿಗಳಿಗೆ ಬೇಕಾಗಿರುವ ಸಂಗತಿ.

Share this Story:

Follow Webdunia kannada