Select Your Language

Notifications

webdunia
webdunia
webdunia
webdunia

ನೀವು ಅಂದದ ಮುಖದ ಒಡತಿಯಾಗಬೇಕಾದರೆ ಇಲ್ಲಿದೆ ನೋಡಿ ಸುಲಭ ಉಪಾಯ

ನೀವು ಅಂದದ ಮುಖದ ಒಡತಿಯಾಗಬೇಕಾದರೆ ಇಲ್ಲಿದೆ ನೋಡಿ ಸುಲಭ ಉಪಾಯ
ಬೆಂಗಳೂರು , ಬುಧವಾರ, 8 ಆಗಸ್ಟ್ 2018 (14:59 IST)
ಬೆಂಗಳೂರು: ಮುಖ ಸುಂದರವಾಗಿ ಕಾಣಬೇಕು ಎಂಬುದು ಎಲ್ಲಾ ಹೆಣ್ಣುಮಕ್ಕಳ ಸಹಜವಾದ ಆಸೆ. ಆದರೆ ಒಬ್ಬೊಬ್ಬರ ಮುಖ ಒಂದೊಂದು ರೀತಿ ಇರುತ್ತದೆ. ಕೆಲವರದ್ದು ಸೂಕ್ಷ್ಮ ತ್ವಚೆ, ಇನ್ನು ಕೆಲವರದ್ದು ಎಣ್ಣೆ, ಒಣ ಚರ್ಮ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಯುಕ್ತ ಕ್ರೀಮ್ ಬಳಸುವುದಕ್ಕಿಂತ ಇವುಗಳನ್ನು ಬಳಸಿ ಮುಖದ ಹೊಳಪು ಪಡೆದುಕೊಳ್ಳಿ.


ಕೇಸರಿ : ಕೇಸರಿ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಸೌಂದರ್ಯವನ್ನು ಇಮ್ಮಡಿಗೊಳಿಸುವ ಶಕ್ತಿ ಹೊಂದಿದೆ. ಶ್ರೀಗಂಧದ ಪುಡಿ ಜೊತೆ ಕೇಸರಿಯನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಮುಖ ಕಾಂತಿಯಿಂದ ಕೂಡಿರುತ್ತದೆ.

ಬಾದಾಮಿ : ಬಾದಾಮಿಯಿಂದ ನಿಮ್ಮ ಮುಖ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ನಾಲ್ಕರಿಂದ ಐದು ಬಾದಾಮಿಯನ್ನು ನೀರಿನಲ್ಲಿ ನೆನೆಸಿಡಬೇಕು. ನಂತ್ರ ಅದಕ್ಕೆ ಹಾಲು ಸೇರಿಸಿ ತರಿತರಿಯಾದ ಪೇಸ್ಟ್ ಮಾಡಿಕೊಳ್ಳಬೇಕು. ಅದನ್ನು ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಬೇಕು. ಹೀಗೆ ಮಾಡುವುದರಿಂದ ಡೆಡ್ ಸ್ಕಿನ್ ದೂರವಾಗುವುದಲ್ಲದೆ, ಚರ್ಮ ಕಾಂತಿ ಪಡೆಯುತ್ತದೆ.

ಸೌತೆಕಾಯಿ ಮತ್ತು ಓಟ್ಸ್: ಅರ್ಧ ಸೌತೆಕಾಯಿ ಪೇಸ್ಟ್‌ಗೆ ಚಿಟಕಿಯಷ್ಟು ಅರಿಶಿನ ಮತ್ತು ಓಟ್ಸನ್ನು ಸೇರಿಸಿ, ಮಿಶ್ರಗೊಳಿಸಿ. ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಸ್ವಲ್ಪ ಸಮಯ ಆರಲು ಬಿಡಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ. ಇದು ತ್ವಚೆಯ ಮೇಲೆ ಕಾಣಿಸಿಕೊಳ್ಳುವ ನಿರ್ಜೀವ ಕೋಶಗಳ ನಿವಾರಣೆಗೆ ಹಾಗೂ ಚರ್ಮದ ಆರೈಕೆಗೆ ಉತ್ತಮ ಚಿಕಿತ್ಸೆ ನೀಡುವುದು.

ಟೊಮೆಟೊ, ಸೌತೆಕಾಯಿ:  ಅರ್ಧ ಸೌತೆಕಾಯಿ ಪೇಸ್ಟ್ ಗೆ ಟೊಮೆಟೊ ಪೇಸ್ಟ್ ಸೇರಿಸಿ, ಮಿಶ್ರಗೊಳಿಸಿ. - ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಅನ್ವಯಿಸಿ. - ಸ್ವಲ್ಪ ಸಮಯದ ನಂತರ ಸ್ವಚ್ಛವಾದ ನೀರಿನಿಂದ ಶುದ್ಧಗೊಳಿಸಿ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆ ಕೊಬ್ಬು ಕರಗಿಸಿಕೊಳ್ಳಬೇಕೆ ಇಲ್ಲಿದೆ ನೋಡಿ ಟಿಪ್ಸ್