Select Your Language

Notifications

webdunia
webdunia
webdunia
webdunia

ಚಂದ್ರ ಗ್ರಹಣದ ಸಂದರ್ಭ ಏನು ಮಾಡಬೇಕು.. ದೋಷ ಕಳೆಯುವುದು ಹೇಗೆ..?

ಚಂದ್ರ ಗ್ರಹಣದ ಸಂದರ್ಭ ಏನು ಮಾಡಬೇಕು.. ದೋಷ ಕಳೆಯುವುದು ಹೇಗೆ..?
ಬೆಂಗಳೂರು , ಸೋಮವಾರ, 7 ಆಗಸ್ಟ್ 2017 (13:13 IST)

ಇವತ್ತು ಖಂಡಗ್ರಾಸ ಚಂದ್ರಗ್ರಹಣ. ಗ್ರಹಣ ಎಂದೊಡನೆ ಹಲವರಿಗೆ ಭಯವಾಗುತ್ತೆ. ಗ್ರಹಣದಿಂದ ಯಾವ ತೊಂದರೆಯಾಗುತ್ತೋ ಎಂಬ ಭಯ ಸಾಮಾನ್ಯವಾಗಿರುತ್ತೆ. ಗ್ರಹಣ ಮತ್ತು ಗ್ರಹಣ ದೋಷ ನಿವಾರಣೆಯ ವಿವರಣೆ ಇಲ್ಲಿದೆ.
 

ಸೋಮವಾರ ಪೂರ್ಣಿಮಾ "ಕೇತುಗ್ರಸ್ಥ" ಚಂದ್ರಗ್ರಹಣವಾಗಲಿದ್ದು, ರಾತ್ರಿ 10:22ಕ್ಕೆ ಗ್ರಹಣ ಸ್ಪರ್ಶವಾಗಲಿದ್ದು, ರಾತ್ರ 11.50ಕ್ಕೆ ಮಧ್ಯಕಾಲವಾಗಿದ್ದು, ಮಧ್ಯರಾತ್ರಿ 12:49 ಮೋಕ್ಷಕಾಲವಾಗಿದೆ.

ಗ್ರಹಣ ದಿನದ ನಿಯಮ: ಸೂರ್ಯೋದಯಾದಿ 12:28 ರೊಳಗೆ ಆಹಾರ ಸೇವಿಸಬಹುದು. ಇದಾದ ಬಳಿಕ ಾಹಾರ ಸೇವನೆ ಬೇಡ. ಗ್ರಹಣದ ಹೊತ್ತಿಗೆ ಸೇವಿಸಿದ ಆಹಾರವೂ ಜೀರ್ಣವಾಗಿರಬೇಕು, ಆದರೆ, ಮಕ್ಕಳು, ಅಶಕ್ತರು, ವೃದ್ಧರಿಗೆ ನಿಯಮ ಅನ್ವಯವಾಗುವುದಿಲ್ಲ. ಗ್ರಹಣಕ್ಕೂ ಮುನ್ನ ದರ್ಬೆ ತಂದು ಮನೆಯ ಮೂಲೆ ಮೂಲೆಯಲ್ಲೂ ಇಡಿ. ದರ್ಬೆಯನ್ನ ವಿಷ್ಣು ರೋಮ ಎನ್ನಲಾಗುವುದರಿಂದ ದೋಷ ಕಳೆಯುತ್ತದೆ.

ಶ್ರವಣ ನಕ್ಷತ್ರಕ್ಕೆ ಸ್ವಲ್ಪ ದೋಷವಿರುವುದರಿಂದ ಗ್ರಹಣ ಸ್ತೋತ್ರವನ್ನು ಬರೆದಿಟ್ಟುಕೊಂಡು, ಗ್ರಹಣ ಮುಗಿದ ನಂತರ ತಾಂಬೂಲದೊಡನೆ, ಸಂಬಂದಪಟ್ಟ ಧಾನ್ಯದೊಂದಿಗೆ ದಾನ ಮಾಡಿ..

ಗ್ರಹಣದ ಪೂರ್ಣ ಶ್ಲೋಕ :

"ಯೋ ಸೌ ವಜ್ರಧರೋದೇವಃ ಆದಿತ್ಯಾನಾಂ ಪ್ರಭುರ್ಮತಃ |
ಚಂದ್ರ ಗ್ರಹೋಪರಾಗೋತ್ಥಂ ಗ್ರಹಪೀಡಾಂ ವ್ಯಪೋಹತು ||

ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||

ಯೋ ಸೌ ಶೋಲಧರೋ ದೇವಃ ಪಿನಾಕೀ ವೃಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||

ಮುಖಂ ಯಃ ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿಃ |
ಚಂದ್ರೋ ಪರಾಗಸಂಭೂತ ಅಗ್ನಿಪೀಡಾಂ ವ್ಯಪೋಹತು ||

ಯಃ ಕರ್ಮಸಾಕ್ಷಿ ಲೋಕಾನಾಂ ಧರ್ಮೋ ಮಹಿಷವಾಹನಃ |
ಯಮಃ ಚಂದ್ರೋ ಪರಾಗೋತ್ಥಂ ಗ್ರಹಪೀಡಾಂ ವ್ಯಪೋಹತು ||

ಪ್ರಾಣರೂಪೋಹಿ ಲೋಕಾನಾಂ ಸದಾ ಕೃಷ್ಣಮೃಗಪ್ರಿಯಃ |
ವಾಯುಃ ಚಂದ್ರೋ ಪರಾಗೋತ್ಥಂ ಗ್ರಹಪೀಡಾಂ ವ್ಯಪೋಹತು ||

ಯೋ ಸೌ ನಿಧಿಪತಿರ್ದೇವಃ ಖಡ್ಗಶೂಲಾಗದಾಧರಃ|
ಚಂದ್ರೋ ಪರಾಗಕಲುಶಂ ಧನದೋ$ತ್ರ ವ್ಯಪೋಹತು ||

ಯೋ ಸೌವಿಂದು ಧುರೋ ದೇವಃ ಪಿನಾಕೀ ವೃಷವಾಹನಃ |
ಚಂದ್ರೋ ಪರಾಗ ಪಾಪಾನಿ ಸನಾಶಯತು ಶಂಕರಃ ||

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಕನ್ಯಾರಾಶಿಯಲ್ಲಿ ಜನಿಸಿದವರು ಹೇಗಿರ್ತಾರೆ ಗೊತ್ತಾ?