Select Your Language

Notifications

webdunia
webdunia
webdunia
webdunia

ಉತ್ತರ ದಿಕ್ಕಿನಲ್ಲಿ ತಲೆ ಇರಿಸಬೇಡಿ: ಇಲ್ಲದಿದ್ರೆ ಅನಾಹುತ ಖಚಿತ

ಉತ್ತರ ದಿಕ್ಕಿನಲ್ಲಿ ತಲೆ ಇರಿಸಬೇಡಿ: ಇಲ್ಲದಿದ್ರೆ ಅನಾಹುತ ಖಚಿತ
, ಗುರುವಾರ, 20 ಅಕ್ಟೋಬರ್ 2016 (16:35 IST)
1, ಅಡುಗೆ ಮಾಡುವಾಗ, ಆಹಾರ ಸೇವಿಸುವಾಗ ಅಥವಾ ಕುಡಿಯುವಾಗ ಉತ್ತರದಿಕ್ಕಿನಲ್ಲಿ ಕುಳಿತು ಕೊಳ್ಳಲೇಬಾರದು. ಆಹಾರವು ಸರಿಯಾಗಿ ಪಚನಗೊಂಡು ಉತ್ತಮ ಆರೋಗ್ಯ ಲಭಿಸಬೇಕಾದರೆ ಪೂರ್ವ ದಿಕ್ಕಿಗೆ ಮುಖಮಾಡಿ ಸೇವಿಸಬೇಕು.
2.ಆರೋಗ್ಯ ಮತ್ತು ಸಂತೋಷವನ್ನು ಗಳಿಸಲು ಕೊಠಡಿಯ ಗೋಡೆಗಳಿಗೆ ಬೇರೆ ಬೇರೆ ಬಣ್ಣಗಳನ್ನು ಹಚ್ಚಿರಿ.ಒಂದೇ ರೀತಿಯ ಬಣ್ಣಗಳನ್ನು ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ.
 
3.ಹಾಸಿಗೆಯ ಮುಂಭಾಗದಲ್ಲಿ ಕನ್ನಡಿಯನ್ನು ಇರಿಸುವುದು ಬೇಡ, ಅಥವಾ ಇದ್ದರೆ ಅವುಗಳನ್ನು ಮುಚ್ಚಿ ದುಸ್ವಪ್ನಗಳಿಂದ ಮುಕ್ತಿ ಪಡೆಯಿರಿ.
 
4.ಮಲಗುವಾಗ ತಲೆಯನ್ನು ಉತ್ತರ ದಿಕ್ಕಿನಲ್ಲಿ ಇರಿಸಲೇ ಬಾರದು. ಸುಖನಿದ್ದೆಗಾಗಿ ದಕ್ಷಿಣ ಅಥವಾ ಪೂರ್ವಭಾಗಗಳನ್ನು ಆರಿಸುವುದು ಉತ್ತಮ.
 
5.ತುಳಸಿಗಿಡವನ್ನು ಈಶಾನ್ಯ ಭಾಗದಲ್ಲಿ ನೆಡುವುದರಿಂದ ವಾಯು ಶುದ್ಧೀಕರಿಸಲು ಸಹಾಯಕವಾಗುತ್ತದೆ.
 
6.ಗರ್ಭಿಣಿಯರು ಈಶಾನ್ಯ ಭಾಗದಲ್ಲಿರುವ ಕೊಠಡಿಯನ್ನು ಮಲಗಲು ಉಪಯೋಗಿಸದಿರುವುದು ಒಳ್ಳೆಯದು, ಇದರಿಂದಾಗಿ ಗರ್ಭ ಸ್ರಾವ, ಗರ್ಭಛಿದ್ರ ಮೊದಲಾದ ಅಪಾಯಗಳಿಂದ ರಕ್ಷಣೆಯನ್ನು ಪಡೆಯಬಹುದು.
 
7.ಕಬ್ಬಿಣದಿಂದ ಅಥವಾ ಇನ್ನಾವುದೇ ಲೋಹದಿಂದ ಮಾಡಿದ ಹಾಸಿಗೆಯನ್ನು ಬಳಸದಿದ್ದರೆ ಉತ್ತಮ, ಯಾಕೆಂದರೆ ಇಂತವುಗಳು ಹೃದಯ ಮತ್ತು ಮೆದುಳು ಸಂಬಂಧಿ ಕಾಯಿಲೆಗಳಿಗೆ ಆಹ್ವಾನ ನೀಡುತ್ತವೆ.
 
8.ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕೆಲಸ ಮಾಡುವುದು ಅಥವಾ ಓದು ಬರಹವನ್ನು ಅಭ್ಯಸಿಸುತ್ತಿದ್ದರೆ ಕಾಂತೀಯ ಬಲವು ಇಲ್ಲಿ ಪ್ರಬಲವಾಗಿದ್ದು ಇದರಿಂದಾಗಿ ಉತ್ತಮ ಗ್ರಹಿಸುವಿಕೆ ದೊರೆತು ಮತ್ತು ಸ್ಮರಣ ಶಕ್ತಿ ಹೆಚ್ಚುವುದು.
 
9.ಮಲಗುವ ಕೋಣೆಯಲ್ಲಿರಿಸಿದ ಟಿ.ವಿ ಅಥವಾ ಕಂಪ್ಯೂಟರ್‌ನ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಇಂತಹ ಉಪಕರಣಗಳಿಂದ ಹೊರ ಸೂಸುವ ವಿಕಿರಣಗಳು ಕೋಣೆಯ ಚೈತನ್ಯವನ್ನು ಕಡಿಮೆ ಮಾಡಿ ಅಸ್ವಸ್ತತೆಗೆ ಎಡೆ ಮಾಡುವ ಸಾಧ್ಯತೆ ಕಂಡುಬರುತ್ತದೆ.
 
10. ಮನೆಯ ನೈಋತ್ಯ ಭಾಗದಲ್ಲಿರುವ ಕಿಟಕಿಗಳನ್ನು ತೆರೆದಿಡುವ ಬದಲಾಗಿ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿರುವ ಕಿಟಕಿಗಳನ್ನು ತೆರೆದಿಟ್ಟರೆ ಉತ್ತಮ ಆರೋಗ್ಯ ಮತ್ತು ಕುಟುಂಬದಲ್ಲಿ ಏಕತೆ ನೆಲೆಗೊಳ್ಳುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯನ ಪಥಸಂಚಲನದಿಂದ ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು? ಇಲ್ಲಿದೆ ಡಿಟೇಲ್ಸ್