Select Your Language

Notifications

webdunia
webdunia
webdunia
webdunia

ಜೈನ ಧರ್ಮದ ಪ್ರಸಾರ

ಜೈನ ಧರ್ಮದ ಪ್ರಸಾರ

ಇಳಯರಾಜ

WD
ಮಹಾವೀರನ ನಂತರ ಜೈನ ಧರ್ಮ ವ್ಯಾಪಕವಾಗಿ ಬೆಳೆಯಿತು. ಮಹಾವೀರನ ಕಾಲದಲ್ಲಿ ಲಿಗಾಂಧಾರಳಿರೆಂಬ 11 ಮಂದಿ ಅನುಯಾಯಿಗಳಿದ್ದರು.

ಇವರಲ್ಲಿ ಸುಧರ್ಮ ಎಂಬುವವನು ಮಹಾವೀರನ ನಂತರ ಜೈನ ಧರ್ಮದ ಪ್ರಚಾರದ ನೇತೃತ್ವ ವಹಿಸಿದ. ಇವನ ನಂತರ ಜೈನ ಧರ್ಮದ ಮುಖಂಡತ್ವವನ್ನು ಜಂಬೂ ಎಂಬುವವನು ವಹಿಸಿದನು.

ಅನಂತರ ಜೈನ ಸಂಘದ ಇತಿಹಾಸ ಅಸ್ಪಷ್ಟವಾಗಿದೆ. ನಂದರ ಆಳ್ವಿಕೆಯ ಕೊನೆಯಲ್ಲಿ ಭದ್ರಬಾಹು ಮತ್ತು ಶಂಭೂತ ವಿಜಯ ಎಂಬುವವರು ಮುಖ್ಯಸ್ಥರಾಗಿ ಕಂಡು ಬರುತ್ತಾರೆ. ನಂತರ ಸ್ಥೂಲ ಭದ್ರನೆಂಬುವವನು ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಜೈನ ಸಂಘದ ಮುಖ್ಯಸ್ಥನಾಗುತ್ತಾನೆ.

ಮಹಾವೀರನ ಜೀವಿತಾವಧಿಯಲ್ಲಿ ಗಂಗಾನದಿಯ ಪರಿಸರದ ಮಗಧ, ವಿದೇಹ, ಅಂಗ ರಾಜ್ಯಗಳಲ್ಲಿ ಪ್ರಚಾರ
ಮಾಡಿದ್ದನು. ಚಂಪಾ ಮಿಥಿಲಾ, ಶ್ರಾವಸ್ತಿ, ವೈಶಾಲಿ, ರಾಜಗೃಹ ಮುಂತಾದ ನಗರಗಳಲ್ಲಿ ಜೈನಧರ್ಮಕ್ಕೆ ಉತ್ತಮ ಪ್ರತಿಕ್ರಿಯೆಯಿತ್ತು. ಮಹಾವೀರನ ಅಂತ್ಯ ಕಾಲಕ್ಕೆ ಜೈನ ಧರ್ಮದ 14,000 ಸನ್ಯಾಸಿ ಸನ್ಯಾಸಿನಿಯರು ಹಾಗೂ 30,000 ಸಾಮಾನ್ಯ ಅನುಯಾಯಿಗಳಿದ್ದರೆಂದು ತಿಳಿದುಬರುತ್ತದೆ.

ದಕ್ಷಿಣ ಭಾರತದಲ್ಲಿ ಜೈನ ಧರ್ಮ ಪ್ರಸಾರಕ್ಕೆ ಮುಖ್ಯ ಕಾರಣನಾದವು ಭದ್ರಬಾಹು ಈತನು ಕ್ರಿ. ಪೂ. ನಾಲ್ಕನೆ ಶತಮಾನದ ಕೊನೆಗೆ ಮಗಧದಲ್ಲಿ ಭೀಕರ ಕ್ಷಾಮವು ಉಂಟಾಗಲು ತನ್ನ ಶಿಷ್ಯರೊಂದಿಗೆ ದಕ್ಷಿಣಕ್ಕೆ ಪ್ರಯಾಣ ಮಾಡಿ ಮೈಸೂರು ರಾಜ್ಯದ ಶ್ರವಣಬೆಳಗೊಳಕ್ಕೆ ಬಂದು ನೆಲೆಸಿದನು. ಭದ್ರಬಾಹುವಿನ ಪ್ರಭಾವದಿಂದಾಗಿ ಹಾಸನ ಜಿಲ್ಲೆಯ ಶ್ರವಣಬೆಳಗೊಳವು ಪ್ರಮುಖ ಜೈನ ಕ್ಷೇತ್ರವಾಗಿ ಹೆಸರಾಗಿದೆ. ಈತನ ಶಿಷ್ಯರಲ್ಲಿ ಚಂದ್ರಗುಪ್ತ ಮೌರ್ಯನೂ ಒಬ್ಬ.

ಭದ್ರಬಾಹುವಿನ ನಿಧನದ ನಂತರ ಆತನ ಶಿಷ್ಯರು ದಕ್ಷಿಣದಲ್ಲಿ ಚೋಳ, ಪಾಂಡ್ಯ ರಾಜ್ಯಗಳಲ್ಲಿ ಮತ ಪ್ರಸಾರ ಮಾಡಿದರು. ದಕ್ಷಿಣದಲ್ಲಿ ಗಂಗರು, ರಾಷ್ಟ್ತ್ರಕೂಟರು, ಕದಂಬರು, ಹೊಯ್ಸಳರು, ಚಾಲುಕ್ಯರು ಮುಂತಾದ ರಾಜಮನೆತನಗಳು ನೀಡಿದ ಪ್ರೌತ್ಸಾಹದಿಂದಾಗಿ ಜೈನ ಮತವು ಇಲ್ಲಿ ನೆಲೆಯೂರಿತು. ಇಂದಿಗೂ ಕರ್ನಾಟಕದ ಗೋಕರ್ಣ, ಶ್ರವಣ ಬೆಳಗೊಳಗಳು ಪ್ರಸಿದ್ಧ ಜೈನ ಯಾತ್ರಾ ಸ್ಥಳಗಳಾಗಿವೆ. ಕರ್ನಾಟಕದಲ್ಲಿ ಜೈನರು ಬಹುಸಂಖ್ಯೆಯಲ್ಲಿದ್ದಾರೆ.

Share this Story:

Follow Webdunia kannada