ಬಳಸಿದ ಚಹಾ ಪೌಡರ್ ನ ಉಪಯೋಗಗಳು

ಸಾಮಾನ್ಯವಾಗಿ ಚಹಾ ಮಾಡಿದ ಮೇಲೆ ಅದರ ಪುಡಿಯನ್ನು ಹಾಗೆಯೇ ಬಿಸಾಕಿ ಬಿಡುತ್ತೇವೆ. ಆದರೆ ಚಹಾ ಮಾಡಿದ ಮೇಲೆ ಪ್ರತ್ಯೇಕಿಸಿದಾಗ ಸಿಗುವ ಚಹಾ ಪೌಡರ್ ನಿಂದ ಸಾಕಷ್ಟು ಉಪಯೋಗಗಳಿವೆ. ಅವುಗಳು ಯಾವುವು ನೋಡೋಣ.

credit: social media

ಬಳಕೆ ಮಾಡಿದ ಬಳಿಕ ಚಹಾ ಪೌಡರ್ ನ್ನು ಬಿಸಾಕುವ ಬದಲು ಯೋಗ್ಯ ರೀತಿಯಲ್ಲಿ ಮರು ಬಳಕೆ ಮಾಡಬಹುದು

ಬಳಸಿದ ಚಹಾ ಪೌಡರ್ ನಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್ ಅಂಶವಿದ್ದು ಇದು ಚರ್ಮಕ್ಕೆ ಸೌಂದರ್ಯ ವರ್ಧಕವಾಗಬಹುದು

ಕಣ್ಣಿನ ಕೆಳಗೆ ಕಪ್ಪು ವರ್ತುಲ ಉಂಟಾಗಿದ್ದರೆ ಬಳಸಿ ಚಹಾ ಪೌಡರ್ ನ್ನು ಪೇಸ್ಟ್ ಮಾಡಿಕೊಂಡು ಹಚ್ಚಿ ನೋಡಿ

ಬಳಸಿದ ಚಹಾ ಪೌಡರ್ ಹಲ್ಲುಗಳಲ್ಲಿರುವ ಕಲೆ ನಿವಾರಿಸಬಹುದಾಗಿದ್ದು, ಇದರಿಂದ ಬಾಯಿ ಮುಕ್ಕಳಿಸಬಹುದು

ಟೆರೇಸ್ ಗಾರ್ಡನ್ ಮಾಡುವ ಹವ್ಯಾಸವಿದ್ದರೆ ಬಳಸಿ ಚಹಾ ಪೌಡರ್ ನ್ನು ಗೊಬ್ಬರವಾಗಿ ಬಳಕೆ ಮಾಡಬಹುದು

ಶೂ, ಸಾಕ್ಸ್ ಕೊಳೆಯಾಗಿದ್ದರೆ ಬಳಸಿದ ಚಹಾ ಪೌಡರ್ ಬಳಸಿ ಶುಚಿಗೊಳಿಸುವುದರಿಂದ ಕೆಟ್ಟ ವಾಸನೆ ಹೋಗುತ್ತದೆ

ಉಗುರಿನ ಕೊಳೆಯಿಂದ ಬರಬಹುದಾದ ಸಮಸ್ಯೆಗಳು

Follow Us on :-