ಚಿಲ್ಡ್ ಸಾಫ್ಟ್ ಡ್ರಿಂಕ್ ನ ಸೈಡ್ ಇಫೆಕ್ಟ್ ನೋಡಿ

ಬೇಸಿಗೆಯಲ್ಲಿ ವಿಪರೀತ ದಾಹವಾದಾಗ ಚಿಲ್ಡ್ ಸೋಡಾ ಮಿಶ್ರಿತ ಜ್ಯೂಸ್ ಗಳನ್ನು ಸೇವಿಸುವುದು ನಾಲಿಗೆಗೆ ಹಿತವೆನಿಸುತ್ತದೆ. ಕೆಲವರು ಬಾಟಲಿಗಟ್ಟಲೇ ಖರೀದಿಸಿ ನೀರಿನಂತೆ ಇಂತಹ ಚಿಲ್ಡ್ ಜ್ಯೂಸ್ ಸೇವಿಸುತ್ತಾರೆ. ಆದರೆ ಇದರ ಅಡ್ಡಪರಿಣಾಮವೇನು ಗೊತ್ತಾ?

credit: social media

ನಾಲಿಗೆಗೆ ಹಿತವಾಗುವ ಸೋಡಾ ಮಿಶ್ರಿತ ಚಿಲ್ಡ್ ಜ್ಯೂಸ್ ಗಳು ದೇಹಕ್ಕೆ ಒಳ್ಳೆಯದಲ್ಲ

ಸೋಡಾ ಮಿಶ್ರಿತ ಜ್ಯೂಸ್ ಗಳು ಒಮ್ಮೆಗೆ ದಾಹ ತಣಿಸಿದರೂ ನಂತರ ಹೆಚ್ಚು ದಾಹವಾಗುವಂತೆ ಮಾಡುತ್ತದೆ

ಚಿಲ್ಡ್, ಸೋಡಾ ಮಿಶ್ರಿತ ಜ್ಯೂಸ್ ಗಳನ್ನು ಸೇವಿಸಿದಾಗ ಗ್ಯಾಸ್ಟ್ರಿಕ್ ಅಂಶ ಮತ್ತಷ್ಟು ಹೆಚ್ಚಾಗಬಹುದು

ಇಂತಹ ಜ್ಯೂಸ್ ಗಳಲ್ಲಿ ಕೃತಕ ಸಕ್ಕರೆ ಅಥವಾ ಸಿಹಿ ಅಂಶ ಮಿಶ್ರಣ ಮಾಡಲಾಗುತ್ತದೆ, ಇದು ಒಳ್ಳೆಯದಲ್ಲ

ಅತಿಯಾಗಿ ಇಂತಹ ಚಿಲ್ಡ್, ಸೋಡಾ ಮಿಶ್ರಿತ ಕಲರ್ ಫುಲ್ ಜ್ಯೂಸ್ ಸೇವಿಸುವುದರಿಂದ ತೂಕ ಹೆಚ್ಚಳವಾಗಬಹುದು

ಅತಿಯಾಗಿ ಇಂತಹ ಕೃತಕ ಸಿಹಿ ಅಂಶ ದೇಹಕ್ಕೆ ಸೇರಿದಾಗ ಲಿವರ್ ನಲ್ಲಿ ಫ್ಯಾಟ್ ಬೆಳೆಯಬಹುದು

ಇಂತಹ ಸಾಫ್ಟ್ ಡ್ರಿಂಕ್ ಗಳಿಂದ ಹೊಟ್ಟೆಯ ಸುತ್ತ ಬೊಜ್ಜು ಬೆಳೆದು ಬೆಲ್ಲಿ ಫ್ಯಾಟ್ ಸೃಷ್ಟಿಯಾಗಬಹುದು

ರಕ್ತದೊತ್ತಡ ನಿಯಂತ್ರಿಸುವ ಆಯುರ್ವೇದಿಕ್ ಪಾನೀಯಗಳು

Follow Us on :-