Webdunia - Bharat's app for daily news and videos

Install App

ಬೆಂಡೆಕಾಯಿಯ ಉಪಯೋಗಗಳು

Webdunia
ಮಂಗಳವಾರ, 19 ಜೂನ್ 2018 (16:08 IST)
ಬೆಂಡೆಕಾಯಿ ಸಾಕಷ್ಟು ಔಷಧಿಯ ಗುಣಗಳನ್ನು ಹೊಂದಿದೆ. 30 ಕೆಲೊರಿಗಳಿರುವ ಪೌಷ್ಠಿಕ ತರಕಾರಿಯಾಗಿರುವ ಬೆಂಡೆಕಾಯಿಯಲ್ಲಿ 75 ಮಿಲಿಗ್ರಾಂ ಸಿ ಜೀವಸತ್ವವಿದೆ. ಒಂದು ತುಂಡು ಬೆಂಡೆ ತಿಂದರೆ ಒಂದು ಕಪ್ ಟೊಮೆಟೊದಲ್ಲಿರುವಷ್ಟು ಸಿ ಜೀವಸತ್ವ ಪ್ರಾಪ್ತವಾಗುತ್ತದೆ. ಶೇ. 7.6ರಷ್ಟು ಕಾರ್ಬೋಹೈಡ್ರೇಟ್ಸ್, ಶೇ. 3.2 ನಾರು, ಶೇ. 2 ಪ್ರೊಟೀನ್, 75 ಮಿಲಿಗ್ರಾಂ ಸುಣ್ಣ, ಮೆಗ್ನೀಶಿಯಂ, ಫೋಲೆಟ್‌ಗಳಿರುವ ಅದರಲ್ಲಿ 57 ಮಿಲಿಗ್ರಾಂ ಪ್ರಮಾಣದ ಎ ಜೀವಸತ್ವವೂ ಇದೆ.
* ಡಯಾಬಿಟಿಸ್‌ ಇರುವವರಿಗೆ ಬೆಂಡೆಕಾಯಿ ಸೇವನೆಯು ಉತ್ತಮ ಮದ್ದಾಗಿದೆ.
 
* ಬೆಂಡೆಕಾಯಿಯನ್ನು ಕ್ರಮವಾಗಿ ಆಹಾರದಲ್ಲಿ ಬಳಸಿದರೆ ದೇಹಕ್ಕೆ ತಂಪು, ಹೊಟ್ಟೆಯ ಉರಿ, ಗುದದ್ವಾರದ ಉರಿ ಶಾಂತವಾಗುತ್ತದೆ.
 
* ಬೆಂಡೆಕಾಯಿ ಮಧುಮೇಹ ಕಾಯಿಲೆಗೆ ಮಾತ್ರವಲ್ಲ ಕಿಡ್ನಿ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
 
* ಕರುಳಿನಲ್ಲಿ ಆಹಾರ ತಕ್ಷಣ ಜೀರ್ಣವಾಗಿ ಮಲಬದ್ಧತೆ ನಿವಾರಿಸಲು ಬೆಂಡೆಕಾಯಿ ಸಹಕಾರಿ.
 
* ಬೆಂಡೆಕಾಯಿಯನ್ನು ಕತ್ತರಿಸಿ ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಹತ್ತಿ ಬಟ್ಟೆಯ ಸಹಾಯದಿಂದ ಆ ನೀರನ್ನು ಮುಖಕ್ಕೆ ಹಚ್ಚಿಕೊಂಡು, ಅದು ಒಣಗಿದ ನಂತರ ಮುಖವನ್ನು ತೊಳೆಯಿರಿ. ಇದರಿಂದ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.
 
* ದೃಷ್ಟಿದೋಷ ನಿವಾರಿಸುವ ಎ ಜೀವಸತ್ವ ಬೆಂಡೆಯಲ್ಲಿದೆ.
 
* ಬೆಂಡೆಕಾಯಿ ನಿಮ್ಮ ದೇಹದಲ್ಲಿನ ಇಮ್ಯುನಿಟಿ ಪವರ್ ಹೆಚ್ಚು ಮಾಡುತ್ತದೆ.
 
* ಬೆಂಡೆಕಾಯಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
 
* ನಿಮ್ಮ ಊಟದಲ್ಲಿ ಒಕ್ರಾ / ಬೆಂಡೆಕಾಯಿಗಳನ್ನು ಸೇರಿಸುವುದರಿಂದ ಆಸ್ತಮಾವನ್ನು ಸಹ ಕಡಿಮೆ ಮಾಡಬಹುದು.
 
* ಎಳೆಯ ಬೆಂಡೆಕಾಯಿಯನ್ನು ಕತ್ತರಿಸಿ ಕಲ್ಲುಸಕ್ಕರೆಯೊಂದಿಗೆ ಸೇವಿಸಿ, ಹಾಲು ಕುಡಿಯಬೇಕು. ಇದರಿಂದ ಲೈಂಗಿಕ ಶಕ್ತಿ ವೃದ್ಧಿಸುತ್ತದೆ.
 
* ಇದರಲ್ಲಿರುವ ವಿಟಮಿನ್ ಎ ಚರ್ಮವನ್ನು ಸುಂದರವಾಗಿರಿಸುತ್ತದೆ.ಸುಕ್ಕು,ಮೊಡವೆ ಮುಂತಾದವುಗಳು ಸಂಭವಿಸದಂತೆ ತಡೆಯುತ್ತವೆ.
 
* ಫ್ರೀ ರಾಡಿಕಲ್ಸ್ ಅನ್ನು ಬೆಂಡೆಯಲ್ಲಿರುವ ಉತ್ಕರ್ಷಣ ಅಂಶ ಹಾನಿಗೊಳಗಾದ ಚರ್ಮವನ್ನು ಸರಿದೂಗಿಸಲು ಸಹಕರಿಸುತ್ತದೆ.
 
* ಕೀಲುರೋಗ ಮತ್ತು ಸಂಧಿವಾತ ತಡೆಯಲು ಶಕ್ತವಾದ ಮ್ಯಾಂಗನೀಸ್ ಮತ್ತು ಇ ಜೀವಸತ್ವವನ್ನು ಬೆಂಡೆ ಹೊಂದಿದೆ.
 
* ಬೆಂಡೆಕಾಯಿ ಸೇವಿಸುತ್ತಿದ್ದಲ್ಲಿ ನಿಮ್ಮ ಚರ್ಮವೂ ಹೆಚ್ಚು ಹೊಳಪಾಗುತ್ತದೆ.
 
* ನಿಮಗೆ ಸಿಲ್ಕ್‌ ಆ್ಯಂಡ್ ಶೈನ್ ಕೂದಲು ಬೇಕಾದ್ರೆ ನೀರಿನಲ್ಲಿ ಬೆಂಡೆಕಾಯಿ ಹಾಕಿ ಕುದಿಸಿ ಬಳಿಕ ಈ ಲೋಳೆಭರಿತ ನೀರಿನಿಂದ ಕೂದಲನ್ನು ತೊಳೆಯಿರಿ.
 
* ತಲೆ ಚರ್ಮದಲ್ಲಿ ತುರಿಕೆ ಇದ್ರೆ ಅಥವಾ ನಿಮ್ಮ ಕೂದಲು ಡ್ರೈ ಆಗಿದ್ರೆ ಬೆಂಡೆಕಾಯಿ ಬೇಯಿಸಿದ ನೀರಿನಿಂದ ತಲೆಗೆ ಚೆನ್ನಾಗಿ ಮಸಾಜ್ ಮಾಡಿ.
 
* ಇದು ನಿಮ್ಮ ತಲೆಯನ್ನ ಮೊಯ್ಶಿರೈಸ್‌ ಮಾಡುವುದರಿಂದ ಡ್ಯಾಂಡ್ರಫ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು
 
* ಬೆಂಡೆ ಗಿಡದ ಬೇರು ಯಕೃತ್ತಿನ ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುವ ಗುಣ ಹೊಂದಿದೆ.
 
* ರಸದ ಲೇಪನದಿಂದ ಚರ್ಮದ ತುರಿಕೆ ಗುಣವಾಗಿ ಕಾಂತಿ ಹೆಚ್ಚುತ್ತದೆ.
 
* ಹೃದಯದ ರಕ್ತನಾಳಗಳನ್ನು ಬಲಗೊಳಿಸಿ ಪಾರ್ಶ್ವವಾಯು, ಹೃದಯರೋಗಗಳಿಗೆ ಕಾರಣವಾಗುವ ಕೊಲೆಸ್ಟ್ರಾಲ್ ಏರಿಕೆಯನ್ನು ತಡೆಯುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಬೇಸಿಗೆಯಲ್ಲಿ ಪುನರ್ಪುಳಿ ಜ್ಯೂಸ್ ಕುಡಿಯಿರಿ

ವಿಶ್ವ ಲಿವರ್ ಆರೋಗ್ಯ ದಿನ: ಈ ಲಕ್ಷಣ ಕಂಡುಬಂದರೆ ಲಿವರ್ ಡ್ಯಾಮೇಜ್ ಆಗಿದೆ ಎಂದರ್ಥ

ಈ ಕಾಲದಲ್ಲಿ ಹೃದ್ರೋಗದ ಅಪಾಯ ಹೆಚ್ಚು ಯಾಕೆ ತಿಳಿಯಿರಿ

ಮುಂದಿನ ಸುದ್ದಿ