ಕಣ್ಮನ ಸೆಳೆಯುತ್ತಿರುವ ಕಲ್ಲತ್ತಗಿರಿ, ಹೆಬ್ಬೆ ಫಾಲ್ಸ್

Webdunia
ಸೋಮವಾರ, 23 ಜುಲೈ 2018 (13:39 IST)
ಪರ್ವತ ಶ್ರೇಣಿಗಳ ನಾಡಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಪರ್ವತ ಶ್ರೇಣಿಗಳಲ್ಲಿರುವ ಫಾಲ್ಸ್ ಗಳು ಎಂದಿಗಿಂತ ಹೆಚ್ಚಾಗಿ ಮೈದುಂಬಿಕೊಂಡು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆ ತರೀಕೆರೆ ತಾಲ್ಲೂಕಿನ ಪರ್ವತ ಶ್ರೇಣಿಗಳಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಕಲ್ಲತ್ತಗಿರಿ ಹಾಗೂ ಹೆಬ್ಬೆ ಫಾಲ್ಸ್ ಗಳಿಗೆ  ಹೆಚ್ಚಾಗಿ ಹರಿದು ಬರುತ್ತಿದೆ. ಮೇಲಿನಿಂದ ಧುಮ್ಮುಕ್ಕುತ್ತಿರುವ ನೀರಿನ ದೃಶ್ಯಾವಳಿ ನೋಡುಗರ ಗಮನ ಸೆಳೆಯುತ್ತಿವೆ. ಹಸಿರು ಬೆಟ್ಟಗಳ ನಡುವೆ ಕಣ್ಣಿಗೆ  ಕಾಣಸಿಗುವ ಹಾಲ್ನೊರೆಯಂತೆ  ಹರಿಯುತ್ತಿರುವ ನೀರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಹೆಬ್ಬೆ ಮತ್ತು ಕಲ್ಲತ್ತಗಿರಿ ಫಾಲ್ಸ್ ಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

ಕಲ್ಲತ್ತಗಿರಿ ಹಾಗೂ ಹೆಬ್ಬೆಯು ತುಂಬಿ ಹರಿಯುತ್ತಿದ್ದು ಪ್ರವಾಸಿಗರಲ್ಲಿ ಎಂದಿಗಿಂತ ಹೆಚ್ಚಾಗಿ ಮುದನೀಡುತ್ತಿವೆ. ಹಸಿರು ಬೆಟ್ಟಗಳ ನಡುವೆ ತಣ್ಣನೆಯ ಮೋಡ, ರಸ್ತೆ ತುಂಬೆಲ್ಲ ಜುಳು ಜುಳು ಝರಿಗಳ ನಾದ ಪ್ರವಾಸಿಗರಲ್ಲಿ ಹೊಸ ಉತ್ಸಾಹ ಮೂಡಿಸುತ್ತಿದೆ.


ನಿರ್ಮಾಪಕ ಸಾರಾ ಗೋವಿಂದ್ ಪುತ್ರ ಅನೂಪ್ ವಿರುದ್ಧ ದೂರು: ಕಾರಣವೇನು ಗೊತ್ತಾ?

ಮಗು ನೋಡುತ್ತಾ ಮೈಮರೆತ ರಾಕಿಂಗ್ ಸ್ಟಾರ್ ಯಶ್..!

ಬಾಲಿವುಡ್ ಹಾಟ್ ನಟಿ ಮಲ್ಲಿಕಾ ಶೆರಾವತ್ ಮೇಲೆ ಹಲ್ಲೆ

2019 ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಸುಷ್ಮಾ ಸ್ವರಾಜ್: ಕಾರಣವೇನು ಗೊತ್ತಾ?!

ರೈತ ಮಹಿಳೆ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರ ; ಸಿಎಂ ಕುಮಾರಸ್ವಾಮಿ ಹೇಳಿದ್ದೇನು?

ಸಂಬಂಧಿಸಿದ ಸುದ್ದಿ

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ತನ್ನ ತಲೆಗೆ ವೈನ್‍ಗ್ಲಾಸ್‍ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ - ವೈರಲ್ ವಿಡಿಯೋ

ಮುಂದಿನ ಸುದ್ದಿ