Webdunia - Bharat's app for daily news and videos

Install App

ಗೋವಾದಲ್ಲಿದೆ ನಿಗೂಢ ತಾಣ ನಿಮಗೆ ಗೊತ್ತೇ!

ಗುರುಮೂರ್ತಿ
ಬುಧವಾರ, 20 ಡಿಸೆಂಬರ್ 2017 (14:20 IST)
ಜಗತ್ತಿನ ಸೃಷ್ಟಿಯಲ್ಲಿ ಕತ್ತಲೆ ಎಂಬುದು ತರ್ಕಕ್ಕೆ ನಿಲುಕದ ವಿಷಯವಾಗಿದೆ. ಕತ್ತಲೆ ಎಂದರೆ ನಿಗೂಢ ಅಲ್ಲಿ ಎಲ್ಲವೂ ಇವೆ ಆದರೆ ಅವು ನಮ್ಮ ಅನುಭವಕ್ಕೆ ಬರಬೇಕಷ್ಟೇ. ಕತ್ತಲೆಯಲ್ಲಿ ನೆಡೆಯುವ ಚಿತ್ರ ವಿಚಿತ್ರಗಳು ಬೆಳಕಿನಲ್ಲಿರುವಾಗ ನಮಗೆ ಕಾಣಸಿಗುವುದಿಲ್ಲ. ಕತ್ತಲೆಯಲ್ಲಿನ ಕೆಲವು ಘಟನೆಗಳು ನಮಗರಿವಿಲ್ಲದಂತೆ ನಮ್ಮ ಸುತ್ತಲು ಭಯ, ವಿಸ್ಮಯ, ಚಕಿತಗಳನ್ನು ಉಂಟುಮಾಡುತ್ತದೆ.

ಆದರೆ ಕೆಲವೊಂದು ಪ್ರದೇಶದಲ್ಲಿ ಇದರ ಪ್ರಭಾವ ಸ್ವಲ್ಪ ಜಾಸ್ತಿ ಅಂತಾನೇ ಹೇಳಬಹುದು ಅಂತಹ ಪ್ರದೇಶಗಳಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಭಯಾನಕತೆಯ ವಾತಾವರಣ ನಿರ್ಮಾಣವಾಗಿ ಸುತ್ತಲ ಪ್ರದೇಶವನ್ನು ನಡುಕ ಹುಟ್ಟಿಸುವ ರೀತಿಯಲ್ಲಿ ಭೀತಿಯನ್ನುಂಟುಮಾಡುತ್ತದೆ. ಕೆಲವೊಮ್ಮೆ ಅದನ್ನು ನಾವು ಸುಳ್ಳು ಎಂದು ವಾದಿಸಬಹುದು ಆದರೆ ನಮ್ಮ ದೃಷ್ಟಿಗೂ ಮೀರಿ ಕೆಲವೊಂದು ಅಗೋಚರಗಳು ನಮ್ಮ ಸೃಷ್ಟಿಯಲ್ಲಿವೆ. ಅಂತಹುದೇ ಕೆಲವು ಪ್ರದೇಶಗಳು ನಮ್ಮ ಸುತ್ತಮುತ್ತಲೂ ಇದೆ. ಅದನ್ನು ತಿಳಿಯುವ ಕೂತುಹಲವೇ ಇಲ್ಲಿದೆ ಮಾಹಿತಿ.
 
ಇತ್ತೀಚಿನ ದಿನಗಳಲ್ಲಿ ಭೂತ ಪ್ರೇತದ ಕಾಟವನ್ನು ನಾವು ಟಿವಿ ಅಥವಾ ನಮ್ಮ ಅಕ್ಕ ಪಕ್ಕ ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಿರುತ್ತೇವೆ. ಕೆಲವರು ಅದನ್ನು ನಂಬುತ್ತಾರೆ ಇನ್ನು ಕೆಲವರು ಅದು ಇಲ್ಲವೆಂದೇ ಅಲ್ಲಗೆಳೆಯುತ್ತಾರೆ ಆದರೆ ಪ್ರೇತಗಳು ಇದೆ ಅಥವಾ ಇಲ್ಲ ಎನ್ನುವುದು ಅವರವರ ಅನುಭವಕ್ಕೆ ಬಿಟ್ಟ ವಿಚಾರ. ಈಗ ನಾವು ಹೇಳ ಹೊರಟಿರುವುದು ಪ್ರಪಂಚದಲ್ಲೇ ತನ್ನ ವಿಶೇಷವಾದ ಸಂಸ್ಕೃತಿ, ತಿನಿಸು, ಮಧ್ಯ ಹಾಗೂ ಬೀಜ್‌ಗಳಿಂದ ವಿದೇಶಿ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುವ ತಾಣ ಅದುವೇ ಗೋವಾ. ಜೀವನದಲ್ಲಿ ಒಮ್ಮೆ ಆದರೂ ಗೋವಾಗೆ ಹೋಗಲೇಬೇಕು ಎನ್ನುವವರ ಸಂಖ್ಯೆಯೇನು ಕಮ್ಮಿ ಇಲ್ಲ ಆದರೆ ಅದೇ ಗೋವಾ ತನ್ನಲ್ಲಿ ಕೆಲವು ನಿಗೂಢತೆಗಳು ಮತ್ತು ವಿಸ್ಮಯವನ್ನು ಹೊಂದಿದೆ ಎಂದರೆ ನೀವು ನಂಬುತ್ತೀರಾ!
 
ಹೌದು ಪ್ರವಾಸಿಗರ ಸ್ವರ್ಗ ಎಂದೆಲ್ಲಾ ಕರೆಸಿಕೊಳ್ಳುವ ಗೋವಾದ ಕೆಲವು ಪ್ರದೇಶದಲ್ಲಿ ರಾತ್ರಿ ಆದರೆ ಸಾಕು ಚಿತ್ರ ವಿಚಿತ್ರ ಘಟನೆಗಳು ಸಂಭವಿಸುತ್ತದೆ. ಅದು ಅಲ್ಲಿಗೆ ಬರುವ ಸಾಕಷ್ಟು ಪ್ರವಾಸಿಗರಿಗೆ ಅನುಭವ ಕೂಡಾ ಆಗಿದೆ. ಗೋವಾದಲ್ಲಿ ಮುಖ್ಯವಾಗಿ 8 ಸ್ಥಳವನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ರಾತ್ರಿಯಾದರೆ ಸಾಕು ಪ್ರೇತಗಳ ಹಾವಳಿ ಶುರುವಾಗುತ್ತದೆ, ಇಲ್ಲವೇ ಆಕ್ಸಿಡೆಂಟ್‌ನಂತಹ ತೊಂದರೆಗಳು ಉಂಟಾಗುತ್ತದೆ ಇದರಿಂದ ಸಾಕಷ್ಟು ಜನರು ಭಯ ಪಟ್ಟಿರುವ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಈ ಲೇಖನದಲ್ಲಿ ನಾವು ನಿಮಗೆ ಮುಖ್ಯವಾಗಿರುವ 8 ಸ್ಥಳದ ಮಾಹಿತಿಯನ್ನು ಕೊಡ್ತಿವಿ.
 
 
ಇಗೊರ್ಚೆಮ್ ಬಾಂದ್
ಇದು ಗೋವಾದಲ್ಲಿ ಕಂಡುಬರುವ ಪ್ರೇತ ಪ್ರದೇಶ. ಇಲ್ಲಿ ಕತ್ತಲೆ ಆದರೆ ಸಾಕು ಜನಸಂಚಾರ ತುಂಬಾ ವಿರಳ. ರೈಯಾ ರಸ್ತೆಗೆ ಹೊಂದಿಕೊಂಡಿರುವ ಈ ಪ್ರದೇಶವು ಒಂದು ಚರ್ಚ್‌ನ ಹಿಂಬದಿಯ್ಲಲಿದ್ದು ಮಧ್ಯಾನ 2 ಗಂಟೆಯಿಂದ 3 ಗಂಟೆಯ ನಡುವೆ ರಸ್ತೆಯ ಮೇಲೆ ನಿಮಗೆ ಪ್ರೇತಗಳು ಕಾಣಿಸಬಹುದು. ಸ್ಥಳೀಯ ಜನರ ಪ್ರಕಾರ ಆತ್ಮಗಳು ಸ್ವಯಂ ನಿಯಂತ್ರಣದೊಂದಿಗೆ ಮನುಷ್ಯರನ್ನು ಹುಡುಕುತ್ತವಂತೆ ಆ ಕ್ಷಣದಲ್ಲಿ ಭಾದಿತನಾದ ವ್ಯಕ್ತಿ ದೆವ್ವ ಹಿಡಿದವರಂತೆ ಮಾತನಾಡತೊಡಗುತ್ತಾನೆ. ಆ ವ್ಯಕ್ತಿಯ ಕಣ್ಣುಗಳು ಕೆಂಪು ಬಣ್ಣದಲ್ಲಿರುತ್ತದೆ ಹಾಗೂ ವ್ಯಕ್ತಿಯು ಹೊರಳಾಡುತ್ತಾನೆ. ಇದು ಹಗಲಲ್ಲೇ ಸಂಭವಿಸುವುದರಿಂದ ರಾತ್ರಿ ಇನ್ನು ಭಯಾನಕವಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ.
 
ಬೇತಖೋಲ್ ರಸ್ತೆ
ಧವಾಲಿ ಮತ್ತು ಬೋರಿ ನಡುವೆ ಬರುವ ರಸ್ತೆಯು ಸದಾ ತಂಪಾಗಿರುವ ಅನುಭವವನ್ನು ನೀಡುತ್ತದೆ. ಕೆಲವು ಜನರು ಹೇಳುವ ಪ್ರಕಾರ ಯಾರೋ ಒಬ್ಬ ಹುಡುಗಿ ರಸ್ತೆಯ ಮಧ್ಯೆ ನಿಂತು ಜೋರಾಗಿ ಕಿರುಚುತ್ತಾಳಂತೆ ಏನಾಗಿದೆ ಎಂದು ನೀವು ಅಂದುಕೊಳ್ಳುವಷ್ಟರಲ್ಲಿ ನಿಮಗೆ ಅಪಘಾತ ಸಂಭವಿಸಿರುತ್ತದೆ. ಇಂತಹ ಘಟನೆಗಳು ಈ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಘಟಿಸಿರುವುದಕ್ಕೆ ಸಾಕಷ್ಟು ದಾಖಲೆ ಪುರಾವೆಗಳಿವೆ. ಅದಕ್ಕೆ ಅವರು ಕೊಟ್ಟಿರುವ ಕಾರಣ ಮಾತ್ರ ಆತ್ಮಗಳು. ನೀವೇನಾದರೂ ಈ ರಸ್ತೆಯಲ್ಲಿ ಪ್ರಯಾಣಿಸುತ್ತೀರಿ ಎಂದಾದರೆ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
 
NH-17 ಮುಂಬೈ-ಗೋವಾ ಹೆದ್ದಾರಿ
NH-17 ಮುಂಬೈ-ಗೋವಾ ಹೆದ್ದಾರಿ ಇದು ಅತೀ ಹೆಚ್ಚು ಭಯಾನಕತೆಯನ್ನು ಸೃಷ್ಟಿಸಿರುವ ಸ್ಥಳ. ಮಾಟಗಾತಿಯ ರೂಪದಲ್ಲಿರುವ ಆತ್ಮವು ಸತ್ತ ಮಾಂಸದ ಹುಡುಕಾಟದಲ್ಲಿ ಈ ಪ್ರದೇಶದಲ್ಲಿ ಅಲೆಯುತ್ತಿರುತ್ತದಂತೆ. ಈ ಸ್ಥಳದಲ್ಲಿ ಮಧ್ಯಾಹ್ನ 12 ಗಂಟೆ ನಂತರ ಮಾಂಸ ಪದಾರ್ಥಗಳನ್ನು ಒಯ್ಯುವುದು ಸರಿಯಲ್ಲ ಒಂದು ವೇಳೆ ನಾವು ಮಾಂಸ ಆಹಾರವನ್ನು ತೆಗೆದುಕೊಂಡು ಆ ಸ್ಥಳದಲ್ಲಿ ಹೋದರೆ ಅಪಾಯ ತಪ್ಪಿದ್ದಲ್ಲ ಅಂತಾರೆ ಸ್ಥಳೀಯರು ಇದಕ್ಕೆ ಈ ಘಟನೆಯೊಂದು ಪುಷ್ಟಿ ನೀಡುತ್ತದೆ. ಒಮ್ಮೆ ಇದೇ ರಸ್ತೆಯಲ್ಲಿ ರಾತ್ರಿ ಹೊತ್ತು ದಂಪತಿಗಳು ತಮ್ಮ ಕಾರಿನಲ್ಲಿ ಪ್ರಯಾಣ ಮಾಡ್ತಾ ಇದ್ರು ಇದ್ದಕ್ಕಿದ್ದಂತೆ ಅವರು ಪ್ರಯಾಣಿಸ್ತಾ ಇದ್ದ ಕಾರು ನಿಂತಿತು. ಏನಾಯಿತು ಅಂದುಕೊಳ್ಳುವಷ್ಟರಲ್ಲಿ ಕಾರಿನ ಎರಡು ಲೈಟ್‌ಗಳು ಆಫ್ ಆದವು. ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಹೊರಗೆ ಬಂದಾಗ ಕಾರಿನ ಬಾಗಿಲು ಮುಚ್ಚಿಕೊಂಡವು ಎಷ್ಟು ಪ್ರಯತ್ನಪಟ್ಟರು ಕಾರಿನ ಬಾಗಿಲು ತೆರೆದುಕೊಳ್ಳಲಿಲ್ಲ ಅವನ ಪತ್ನಿ ಕಾರಿನಲ್ಲಿದ್ದಳು ಸ್ವಲ್ಪ ಸಮಯ ಬಿಟ್ಟು ಕಾರಿನ ಬಾಗಿಲು ತೆರೆದುಕೊಂಡಿತು ಅವನ ಪತ್ನಿಯ ಮುಖದ ಮೇಲೆ ಕುತ್ತಿಗೆಯ ಮೇಲೆ ಪರಚಿದ ಗಾಯಗಳಾಗಿದ್ದವು. ಸಣ್ಣ ಪುಟ್ಟ ಗಾಯಗಳಾಗಿದ್ದವು ಅದರ ಹೊರತು ಪ್ರಾಣಾಪಾಯವಾಗುವಂತ ಯಾವುದೇ ಹಾನಿ ಆಗಿರಲಿಲ್ಲ. ಏಕೆಂದರೆ ಅವರು ಯಾವುದೇ ಮಾಂಸ ಆಹಾರವನ್ನು ಒಯ್ಯುತ್ತಿರಲಿಲ್ಲ ಇಂತಹ ಹಲವು ಘಟನೆಗಳು ಈ ಪ್ರದೇಶದಲ್ಲಿ ಸಂಭವಿಸಿದೆ. ಆದ ಕಾರಣ ಇಲ್ಲಿನ ಸ್ಥಳೀಯರು ಆ ಈ ರಸ್ತೆಯಲ್ಲಿ ಮಾಂಸ ಪದಾರ್ಥವನ್ನು ಒಯ್ಯುಲು ಹೆದರುತ್ತಾರೆ.
 
ಡಿ ಮೆಲ್ಲೋ ಮನೆ
ಇದು ಗೋವಾದ ಸ್ಯಾಂಟೆಮೋಲ್‌ ಪ್ರದೇಶದಲ್ಲಿರುವ ಇರುವ ಹಳೆ ಮನೆಯಾಗಿದ್ದು ರಾತ್ರಿಯಾದ ಮೇಲೆ ಈ ಮನೆಯಿಂದ ಕಿರುಚಾಟ ಕಿಟಗಿ ಬಾಗಿಲು ಬಡಿಯುವ ಶಬ್ದದ ಜೊತೆಗೆ ಯಾರೋ ಚೀರಿದ ಶಬ್ದ ಕೇಳಿಬರುತ್ತದಂತೆ. ಕತ್ತಲೆಯಾದಂತೆ ಇಲ್ಲಿ ವಿಚಿತ್ರಗಳು ನೆಡೆಯುತ್ತವೆ ಹಾಗೇ ಯಾರೋ ವಸ್ತುಗಳನ್ನು ಎಸೆಯುವಂತೆ ಜೋರಾಗಿ ಕೂಗಿದಂತೆ ಶಬ್ದ ಬರುತ್ತವಂತೆ. ಮೂಲಗಳ ಪ್ರಕಾರ ಇಬ್ಬರು ಸಹೋದರರು ಈ ಮನೆಯಲ್ಲಿ ವಾಸಿಸುತ್ತಿದ್ದರು ಆಸ್ತಿಯ ಹಂಚಿಕೆಯ ವಿಚಾರ ವಿಕೋಪಕ್ಕೆ ತೆರಳಿ ಸಹೋದರರು ಮೃತಪಟ್ಟಿದ್ದು ತದನಂತರ ಈ ಭಯಾನಕತೆಗೆ ಸೃಷ್ಟಿಯಾಗಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಈ ಮನೆಯ ಸುತ್ತಮುತ್ತ ರಾತ್ರಿ ಹೊತ್ತು ಹೆಜ್ಜೆಯ ಸಪ್ಪಳ, ಗಾಜಿ ಬಿದ್ದು ಒಡೆಯುವ ಶಬ್ದ ವಿಕಾರವಾಗಿ ನಗುವ ಶಬ್ದ ಕೇಳಿಸುತ್ತದೆ ಅಂತೆ. ಈ ಮನೆಯನ್ನು ಮಾರಾಟ ಮಾಡಲು ತುಂಬಾ ಪ್ರಯತ್ನಿಸಿದರು ಅದು ಸಾಧ್ಯವಾಗಿಲ್ಲ ಅಲ್ಲದೇ ಯಾವುದೇ ಖರೀದಿದಾರರು ಇದನ್ನು ಕೊಳ್ಳಲು ಮುಂದೆ ಬಂದಿಲ್ಲ. ಈ ಪ್ರದೇಶದಲ್ಲಿ ತುಂಬಾ ಭಯ ಬೀಳಿಸುವಂತ ಘಟನೆಗಳು ನೆಡೆದಿರುವುದು ಪತ್ತೆಯಾಗಿದೆ.
 
ರಾಡ್ರಿಗಸ್ ಹೌಸ್
ಗೋವಾದ ವೆರ್ನಾದಲ್ಲಿರುವ ಈ ಮನೆಯು ನೋಡಲು ಸಾಮಾನ್ಯವಾಗಿರುವಂತೆ ಕಂಡು ಬಂದರು ಕತ್ತಲು ಆವರಿಸುತ್ತಿದ್ದಂತೆ ಕಿಟಕಿಗಳು ಮತ್ತು ಬಾಗಿಲುಗಳು ತಾನಾಗಿಯೇ ತೆರೆಯುವುದು ಮುಚ್ಚುವುದು ಶುರುವಾಗುತ್ತದೆ. ಈ ಸ್ಥಳ ಹಗಲಿನಲ್ಲಿ ಸಾಮಾನ್ಯವಾಗಿರುತ್ತದೆ ಆದರೆ ರಾತ್ರಿ ಸಮಯದಲ್ಲಿ ಚಿಕ್ಕದಾಗಿ ಚೀರುತ್ತಿರುವ ಶಬ್ದ ಇಲ್ಲಿ ಕೇಳಿಸುತ್ತದಂತೆ.
 
ಜಂಕಿ ಬಾಂದ್‌
ಈ ಪ್ರದೇಶವು ಗೋವಾದ ಮತ್ತೊಂದು ಭಯಾನಕ ಪ್ರದೇಶವಾಗಿದ್ದು ಇದು ನವೆಲಿಮ್ ಮತ್ತು ಡ್ರಾಂಪುರ ಸಂಪರ್ಕಿಸುವ ತಾತ್ಕಾಲಿಕ ಸೇತುವೆ ಆಗಿದೆ. ಒಮ್ಮೆ ಚಾಲಕನ ತಪ್ಪಿನಿಂದ ಘೋರ ಅಪಘಾತ ಸಂಭವಿಸಿ ವಾಹನದಲ್ಲಿರುವ ಎಲ್ಲರೂ ಮೃತಪಟ್ಟಿದ್ದು ಇದರಲ್ಲಿ ಹೆಚ್ಚಿನವರು ಚಿಕ್ಕ ಮಕ್ಕಳಾಗಿದ್ದರಂತೆ ಹಾಗಾಗಿ ರಾತ್ರಿ ಹೊತ್ತು ಈ ಪ್ರದೇಶದಲ್ಲಿ ಮಕ್ಕಳು ಅಳುತ್ತಿರುವ ಶಬ್ದ ಕೇಳಿಸುತ್ತದೆಯಂತೆ ರಾತ್ರಿ ಹೊತ್ತು ಈ ಸ್ಥಳದಲ್ಲಿ ಹೆಚ್ಚಾಗಿ ಓಡಾಡುವುದು ವಿರಳ.
 
ಸಲಿಗವೊ ಹಳ್ಳಿ
ಸಲಿಗವೊ ಈ ಪ್ರದೇಶ ಚರ್ಚುಗಳಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ಕ್ರಿಸ್ಟಲಿನಾ ಎಂಬ ಹೆಂಗಸಿನ ಕೋಪಗೊಂಡ ಅತೃಪ್ತ ಆತ್ಮ ಇಲ್ಲಿನ ಗ್ರಾಮಸ್ಥರನ್ನು ಕಾಡಿಸುತ್ತಿದೆಯಂತೆ. ಈ ಪ್ರದೇಶದಲ್ಲಿರುವ ಒಂದು ದೊಡ್ಡ ಆಲದ ಮರವು ಅದರ ವಾಸಸ್ಧಾನವಾಗಿದ್ದು, ಒಮ್ಮೆ ಒಬ್ಬ ಪೋರ್ಚುಗಿಸ್ ಪ್ರಜೆ ಈ ಸ್ಥಳದಲ್ಲಿಂದ ನಾಪತ್ತೆಯಾಗಿ ನಂತರ ಅವನು ಪತ್ತೆಯಾದಾಗ ಅವನ ಮೈ ತುಂಬಾ ಗಾಯಗೊಂಡಿದ್ದ ಜನರು ಆತನನ್ನು ವಿಚಾರಿಸಿದಾಗ ಆತ ತನ್ನನ್ನು ಕ್ರಿಸ್ಟಲಿನಾ ಆತ್ಮ ಎಳೆದೊಯ್ದಿತ್ತು ಎಂದು ಹೇಳಿದ. ಅಷ್ಟೇ ಅಲ್ಲ ಇಲ್ಲಿ ರಾತ್ರಿಯಾದರೆ ಸಾಕು ಈ ಮರದ ಸುತ್ತ ಯಾರೋ ಓಡಾಡಿದಂತೆ ಆಗುತ್ತದೆ ಮತ್ತು ಯಾರೋ ಚೀರಿದ ಶಬ್ದ ಕೇಳಿಸುತ್ತದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ಅದಾದ ನಂತರ ಆ ಸ್ಥಳವು ಇಂದಿಗೂ ಹಲವಾರು ನಿಗೂಢತೆಯೊಂದಿಗೆ ಜನರನ್ನು ಭಯ ಭೀತಗೊಳಿಸುತ್ತಿದೆ.
 
 
ಮೂರು ರಾಜರ ಚರ್ಚ್
ಈ ಚರ್ಚ್ ತುಂಬಾ ಪುರಾತನವಾಗಿದ್ದು ಇದು ಕ್ಯಾಶುವಾಲಿಮ್ ಗ್ರಾಮದಲ್ಲಿದೆ ಇದು ತುಂಬಾ ಭಯನಕತೆಯನ್ನು ಸೃಷ್ಟಿಸುವ ಗೋವಾದ ಸ್ಥಳಗಳಲ್ಲಿ ಇದು ಕೂಡಾ ಒಂದು. ಈ ಪ್ರದೇಶದ ಇತಿಹಾಸವನ್ನು ಹುಡುಕಿದಾಗ ಈ ಪ್ರದೇಶವನ್ನು 3 ಪೋರ್ಚುಗಿಸ್ ರಾಜರು ಆಳುತ್ತಿದ್ದರು. ಅವರು ಈ ಸ್ಥಳಕ್ಕಾಗಿ ಯಾವಾಗಲೂ ಹೊಡೆದಾಡುತ್ತಿದ್ದರು. ಒಂದು ದಿನ 3 ರಾಜರಲ್ಲಿ ಒಬ್ಬ ರಾಜನು ಇನ್ನಿಬ್ಬರವನ್ನು ಆಸ್ಥಾನಕ್ಕೆ ಊಟಕ್ಕೆ ಕರೆದು ಅವರ ಊಟದಲ್ಲಿ ವಿಷವನ್ನು ಹಾಕಿ ಸಾಯಿಸಿದನು. ಸತ್ತಿರುವ ರಾಜನ ಬೆಂಬಲಿಗರು ಆಸ್ಥಾನದ ಹೊರಗೆ ಮತ್ತು ಚರ್ಚ್‌ನ ಹೊರಗೆ ಕಾಯುತ್ತಿದ್ದರು ಅವರು ಈ ಘಟನೆಯಿಂದ ಕೋಪಗೊಂಡಿದ್ದರು ಇದರಿಂದ ಭಯಗೊಂಡ ರಾಜನು ತಾನು ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡನು. ಇಂದಿಗೂ ಅವರ ಆತ್ಮಗಳು ಜೀವಂತವಾಗಿದೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಚರ್ಚ್‌ನ ಅಡಿಯಲ್ಲಿ ಅವರ ದೇಹವನ್ನು ಸಮಾಧಿ ಮಾಡಲಾಗಿದೆ ಎಂದು ಹೇಳುತ್ತಾರೆ. ಅಲ್ಲದೇ ರಾತ್ರಿ ಹೊತ್ತು ಈ ಚರ್ಚ್ ಸುತ್ತಮುತ್ತ ಹಾಗೂ ಆ ಗ್ರಾಮದ ಸುತ್ತಮುತ್ತ ಭಯಾನಕತೆಯಿಂದ ಕೂಡಿರುತ್ತದೆ ಎನ್ನುವುದು ಹಲವಾರ ವಾದ.
 
ಒಟ್ಟಿನಲ್ಲಿ ಹಲವಾರು ಕೌತುಕಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡು ಪಕೃತಿಯ ನಡುವೆ ಹಲವು ವಿಸ್ಮಯಗಳನ್ನು ನಿರ್ಮಿಸುತ್ತಾ ಇರುವಂತಹ ಪ್ರದೇಶಗಳು ನಿಜಕ್ಕೂ ಜನರನ್ನು ಅಚ್ಚರಿ ಮೂಡಿಸಿ ಚಕಿತಗೊಳಿಸುವಲ್ಲಿ ಎರಡು ಮಾತಿಲ್ಲ ನೀವೇನಾದರೂ ಈ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದುಕೊಂಡರೆ ಕಾಳಜಿ ವಹಿಸುವುದು ಸೂಕ್ತ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments