ಕುರುಕ್ಷೇತ್ರ ಚಿತ್ರದ ವಿವಾದದ ಬಗ್ಗೆ ಚಿತ್ರದ ನಿರ್ಮಾಪಕ ಮುನಿರತ್ನ ಹೇಳಿದ್ದೇನು?

Webdunia
ಸೋಮವಾರ, 16 ಜುಲೈ 2018 (09:08 IST)
ಬೆಂಗಳೂರು : ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕುರುಕ್ಷೇತ್ರ’ದ ಫಸ್ಟ್​ ಲುಕ್​ ಟೀಸರ್ ​​ನಿಂದ ಕಿರಿಕ್ ವೊಂದು ಶುರುವಾಗಿದ್ದು, ಇದೀಗ ಈ ವಿವಾದದ ಬಗ್ಗೆ ಚಿತ್ರದ ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ.


ಕುರುಕ್ಷೇತ್ರ ಫಸ್ಟ್ ಲುಕ್​​​ ಟೀಸರ್​ ರಿಲೀಸ್​ ಆಗಿ, ಒಳ್ಳೆ ರೆಸ್ಪಾನ್ಸ್​ ಕೂಡ ಸಿಕ್ಕಿತ್ತು. ಆದ್ರೆ ಕುರುಕ್ಷೇತ್ರದಲ್ಲಿ ನಿಖಿಲ್​ ಕುಮಾರಸ್ವಾಮಿ ಟೀಸರ್​ ದರ್ಶನ್​​​ ಟೀಸರ್ ಗಿಂತ ಹೆಚ್ಚು ಪಾಪ್ಯುಲರ್​ ಆಗಿತ್ತು. ಕುರುಕ್ಷೇತ್ರ ಸಿನಿಮಾದಲ್ಲಿ ಅಷ್ಟು ಪ್ರಾಮುಖ್ಯತೆ​​​ ಇಲ್ಲದ ಅಭಿಮಾನ್ಯು ಪಾತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ  ನಿಖಿಲ್​​ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಕುಮಾರ ಸ್ವಾಮಿ ಅವರನ್ನ ಓಲೈಸೋ ಸಲುವಾಗಿ ನಿಖಿಲ್​ ಪಾತ್ರವನ್ನ ಹೆಚ್ಚಾಗಿ ಬಿಂಬಿಸಲಾಗಿದೆ. ಈ ಕಾರಣದಿಂದ ನಟ ದರ್ಶನ್ ಚಿತ್ರದ ಮೇಲೆ ಮುನಿಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.


ಆದರೆ, ಈ ವಿವಾದದ ಸುದ್ದಿ ಬಗ್ಗೆ ಇದೀಗ ಚಿತ್ರದ ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಪ್ರತಿಕ್ರಿಯೆ ನೀಡಿದ್ದು, ''ಕುರುಕ್ಷೇತ್ರ' ಸಿನಿಮಾ ಕಾಲ್ಪನಿಕ ಕಥೆ ಅಲ್ಲ, ಇದು ಮಹಾಭಾರತದ ಕಥೆ. ಹೀಗಿದ್ದ ಮೇಲೆ ಇಲ್ಲಿ ಯಾರ ಪಾತ್ರವನ್ನು ಹೆಚ್ಚಿಸಲು, ಯಾರ ಪಾತ್ರವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ವಿವಾದ ಆಗಿರುವ ಸುದ್ದಿ ಸುಳ್ಳು. ದರ್ಶನ್ ಚಿತ್ರದ ಬಗ್ಗೆ ಮುನಿಸಿಕೊಂಡಿಲ್ಲ. ಇದು ಅವರ 50ನೇ ಸಿನಿಮಾ’ ಎಂದು ಸ್ಪಷ್ಟನೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವಿದೇಶಿ ಹುಡುಗಿ ಜೊತೆ ವಿಜಯ್ ದೇವರಕೊಂಡ ಲವ್ವಿ-ಡುವ್ವಿ!

ಬೇಬಿ ಮೂನ್ ನಲ್ಲಿದ್ದಾರಂತೆ ಯಶ್ – ರಾಧಿಕಾ

ಕ್ರೈಸ್ತ ಸಂನ್ಯಾಸಿಯರ ಬಗ್ಗೆ ನಿಮ್ಮ ನಿಲುವೇನು? ಎಂದು ಕೇಳಿದ್ದಕ್ಕೆ ಪತ್ರಕರ್ತರ ಮೇಲೆ ಕಿಡಿಕಾರಿದ ಮೋಹನ್‌ ಲಾಲ್

ಕೋಚ್ ರವಿಶಾಸ್ತ್ರಿಯನ್ನು ಕಿತ್ತೊಗೆಯಲು ಒತ್ತಾಯಿಸಿದ ಟೀಂ ಇಂಡಿಯಾ ಕ್ರಿಕೆಟಿಗ!

ಬಸ್ ದರ ಹೆಚ್ಚಳ ಮಾಡಿ ಕ್ಷಣದಲ್ಲೇ ಸಿಎಂ ಕುಮಾರಸ್ವಾಮಿ ಆದೇಶ ಹಿಂಪಡೆದಿದ್ದರ ಕಾರಣವೇನು ಗೊತ್ತಾ?!

ಸಂಬಂಧಿಸಿದ ಸುದ್ದಿ

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ತನ್ನ ತಲೆಗೆ ವೈನ್‍ಗ್ಲಾಸ್‍ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ - ವೈರಲ್ ವಿಡಿಯೋ

ಮುಂದಿನ ಸುದ್ದಿ