ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಪುತ್ರಿ ಮರಿಯಂ ಅರೆಸ್ಟ್

Webdunia
ಶನಿವಾರ, 14 ಜುಲೈ 2018 (10:39 IST)
ಲಾಹೋರ್ : ಪನಾಮ ಪೇಪರ್ ಹಗರಣದಲ್ಲಿ ದೋಷಿ ಎಂದು ಸಾಬೀತಾದ ಕಾರಣ ಪಾಕಿಸ್ತಾನ ಸುಪ್ರಿಂ ಕೋರ್ಟ್ ಮಾಜಿ ಪ್ರಧಾನಿ ನವಾಜ್ ಷರೀಫ್ 10 ವರ್ಷ ಹಾಗೂ ಅವರ ಪುತ್ರಿ ಮರಿಯಂಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ಹಿನ್ನಲೆಯಲ್ಲಿ ಇದೀಗ  ಇವರಿಬ್ಬರನ್ನು ಬಂಧಿಸಲಾಗಿದೆ.


ಅಬುಧಾಬಿಯಿಂದ ಎತಿಹಾದ್‌ ವಿಮಾನದಲ್ಲಿ ಶುಕ್ರವಾರ ರಾತ್ರಿ 9.15ಕ್ಕೆ ಅಲ್ಲಮ ಇಕ್ಬಾಲ್‌ ವಿಮಾನ ನಿಲ್ದಾಣಕ್ಕೆ  ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಪುತ್ರಿ ಮರಿಯಂ ಬಂದಿಳಿಯುತ್ತಿದ್ದಂತೆ ಪಾಕಿಸ್ತಾನದ ನ್ಯಾಬ್ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ಇಬ್ಬರೂ ಯಾವುದೇ ವಿರೋಧ ವ್ಯಕ್ತಪಡಿಸದೆ, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಶರಣಾದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.


ಏರ್ ಪೋರ್ಟ್ ಹೊರಗಡೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು ಶರೀಫ್ ಪರ ಘೋಷಣೆ ಕೂಗುತ್ತಿದ್ದಾರೆ. ಏರ್ ಪೋರ್ಟ್ ಸುತ್ತಲೂ ಬಿಗಿ ಬಂದೋ ಬಸ್ತ್ ಕಲ್ಪಿಸಲಾಗಿದೆ., ಶರೀಫ್ ತಾಯಿ ಬೇಗಂ ಶಮೀಮ್ ಅಖ್ತರ್ ಹಾಗೂ ಶೆಬಾಝ್ ಶರೀಫ್‍ಗೆ ಮಾತ್ರ ಏರ್ ಪೋರ್ಟ್ ಗೆ ಒಳಗೆ ಹೋಗಲು ಅನುಮತಿ ನೀಡಲಾಗಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಲಾಹೋರ್‍‍ನಲ್ಲಿ ಇಂಟರ್‍‍ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಕಾಮತೃಷೆಯನ್ನು ತೀರಿಸಿಕೊಳ್ಳಲು ಮಗಳನ್ನೇ ಬಳಸಿಕೊಳ್ಳುತ್ತಿದ್ದ ಅಪ್ಪ

ರಾತ್ರಿ ಪತ್ನಿ ಮಲಗಿದಾಗ ಪತಿ ಮಾಡುತ್ತಿದ್ದ ಆ ನೀಚ ಕೃತ್ಯ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ?

ನನ್ನಿಂದಾಗಿ ಪಾಪ ಆಸ್ಪತ್ರೆಯವರಿಗೆ ತೊಂದರೆಯಾಯಿತು: ಸಚಿವ ಡಿಕೆಶಿ

ವಿರಾಟ್ ಕೊಹ್ಲಿ ಮೇಲಿನ ರೋಹಿತ್ ಶರ್ಮಾ ಅಸಮಾಧಾನಕ್ಕೆ ಕೆಎಲ್ ರಾಹುಲ್ ಬಲಿಯಾದರೇ?!

ಟೀಂ ಇಂಡಿಯಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ಪಾಕಿಸ್ತಾನ ನಾಯಕ ಸರ್ಫ್ರಾಜ್ ಅಹ್ಮದ್

ಸಂಬಂಧಿಸಿದ ಸುದ್ದಿ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಸಮ್ಮಿಶ್ರ ಸರಕಾರ ಉರುಳೋದಿಲ್ಲ ಎಂದ ಸಚಿವ

ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಬಿಗಿ ಭದ್ರತೆ

ಮುಂದಿನ ಸುದ್ದಿ