Webdunia - Bharat's app for daily news and videos

Install App

ಈ ಹಣ್ಣುಗಳನ್ನು ತಿಂದರೆ ನಿಮ್ಮ ರೋಗನಿರೋಧಕ ಶಕ್ತಿ ಜಾಸ್ತಿಯಾಗುತ್ತೆ!

Webdunia
ಶನಿವಾರ, 14 ಜುಲೈ 2018 (06:39 IST)
ಬೆಂಗಳೂರು : ಇತ್ತೀಚೆಗೆ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಬರುತ್ತಿದೆ. ಇದಕ್ಕೆ ಮೊದಲು ತುತ್ತಾಗುವವರು ಎಂದರೆ ವಯಸ್ಸಾದವರು, ಮಕ್ಕಳು ಮತ್ತು ಮಹಿಳೆಯರು. ವ್ಯಾಯಾಮ, ಉತ್ತಮ ಆರೋಗ್ಯ ಪದ್ಧತಿ, ಆಹಾರಗಳನ್ನು ಸೇವಿಸುವುದರ ಜೊತೆಗೆ ಒಂದಷ್ಟು ಹಣ್ಣುಗಳನ್ನು ತಿಂದರೂ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗಿದ್ದರೆ ಆ ಹಣ್ಣುಗಳು ಯಾವುದು ಎಂಬುದನ್ನು ಈಗ ನೋಡೋಣ.

* ಪಪ್ಪಾಯಿಯಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿದೆ. ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಲು ಇದು ಬೇಕು. ಈ ಹಣ್ಣಿನಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಗೆ ನೆರವಾಗುತ್ತದೆ.

*ಪೀಚ್‌ ಹಣ್ಣಿನಲ್ಲಿ ಕ್ಯಾಲೊರಿ ಕಡಿಮೆಯಿದ್ದು ನಾರಿನಾಂಶ ಹೆಚ್ಚಿದೆ. ಇದು ತೂಕ ಕಡಿಮೆಯಾಗಲು ನೆರವಾಗುವುದು. ಇದರಲ್ಲಿರುವ ವಿಟಮಿನ್‌ ಸಿ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ಪ್ಲಮ್‌ ಹಣ್ಣು ಶೀತ ಮತ್ತು ಜ್ವರ ಮುಂತಾದ ಅನಾರೋಗ್ಯಗಳಿಂದ ದೇಹವನ್ನು ರಕ್ಷಿಸುತ್ತದೆ.

* ದಾಳಿಂಬೆಯಲ್ಲಿ ಹಲವಾರು ಪೋಷಕಾಂಶಗಳಿವೆ. ಇದು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಬೀಜಗಳಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ.

* ಸೇಬು ಹಣ್ಣಿನ ಸೇವನೆ ತುಂಬಾ ಒಳ್ಳೆಯದು. ಇದು ಅನೇಕ ರೋಗಗಳಿಂದ ನಮ್ಮನ್ನು ದೂರವಿಡುತ್ತದೆ.

* ಪಿಯರ್‌ ಹಣ್ಣಿನಲ್ಲೂ ಸೋಂಕು ರೋಗಗಳ ವಿರುದ್ಧ ಹೋರಾಡುವ ಗುಣವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಈ ಕಾಲದಲ್ಲಿ ಹೃದ್ರೋಗದ ಅಪಾಯ ಹೆಚ್ಚು ಯಾಕೆ ತಿಳಿಯಿರಿ

ಉದ್ದನೆಯ ಉಗುರು ಬೇಕಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ಪದೇ ಪದೇ ಕಿವಿ ತುರಿಸುತ್ತಿದ್ದರೆ ನೆಗ್ಲೆಕ್ಟ್ ಮಾಡಬೇಡಿ

ಕಾಡು ಮಾವಿನ ಹಣ್ಣಿನಿಂದ ಈ ಸಿಂಪಲ್ ರೆಸಿಪಿ ಮಾಡಿ

ಖಾರದ ವಸ್ತು ಮುಟ್ಟಿದರೆ ಕೈ ಉರಿಯದಂತೆ ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

ಮುಂದಿನ ಸುದ್ದಿ
Show comments