ಆರೋಗ್ಯಕರ ಮೊಸರನ್ನದ ಲಾಭಗಳು

Webdunia
ಗುರುವಾರ, 12 ಜುಲೈ 2018 (14:53 IST)
ಆಹಾರ ಕ್ರಮದಲ್ಲಿ ಮೊಸರನ್ನಕ್ಕೆ ವಿಶೇಷ ಸ್ಥಾನವಿದೆ. ಕೆಲವರು ಇದನ್ನು ಇಷ್ಟುಟ್ಟಿ ತಿಂದರೆ ಇನ್ನೂ ಕೆಲವರು ಮೂಗು ಮುರಿಯುತ್ತಾರೆ. ಪ್ರತಿನಿತ್ಯ ಮೊಸರಾನ್ನ ಸೇವನೆ ಮಾಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಸರಾಗವಾಗಿ ಕೆಲಸ ಮಾಡುವುದು ಮಾತ್ರವಲ್ಲದೆ ಸಂಪೂರ್ಣ ಆರೋಗ್ಯಕ್ಕೆ ಇದು ಒಳ್ಳೆಯದು. 
- ಇದರ ಸೇವನೆಯಿಂದ ಹೊಟ್ಟೆಯ ಸಮಸ್ಯೆ ಅಥವಾ ಅಜೀರ್ಣ ಕಡಿಮೆಯಾಗುತ್ತದೆ.
 
- ಮೊಸರನ್ನದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಇರುವುದರಿಂದ ಇದರ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಮತ್ತು ನೋವು ನಿವಾರಣೆಯಾಗಲು ಸಹ ಸಹಕಾರಿ. 
 
- ಮೊಸರು ಸೇವನೆ ಮಾಡಿದರಿಂದ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
 
- ಮೊಸರಿನಲ್ಲಿ ಇಮ್ಯೂನಿಟಿಯನ್ನು ಬೂಸ್ಟ್‌ ಮಾಡುವ ಅಂಶಗಳು ಹಾಗೂ ಆಂಟಿಆಕ್ಸಿಡೆಂಟ್‌ಗಳಿರುವುದರಿಂದ ಜ್ಚರ ಬಂದಾಗ ಇದರ ಸೇವನೆ ಮಾಡಿದರೆ ಒಳ್ಳೆಯದು.
 
- ಮೊಸರಿನಲ್ಲಿ ಆ್ಯಂಟಿಆಕ್ಸಿಡೆಂಟ್, ಪ್ರೋಬಯಾಟಿಕ್‌ಗಳು ಮತ್ತು ಒಳ್ಳೆಯ ಗುಣಮಟ್ಟದ ಕೊಬ್ಬು ಇರುವುದರಿಂದ ತೂಕ ಇಳಿಕೆಗೆ ಒಳ್ಳೆಯದು.
 
- ಇದು ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ನೆರವಾಗುತ್ತದೆ.
 
- ಇದರಲ್ಲಿ ಉನ್ನತ ಮಟ್ಟದ ಕಾರ್ಬ್ರೋಹೈಡ್ರೇಟ್ಸ್ ಮತ್ತು ಪ್ರೋಟೀನ್ ಇರುವದರಿಂದ ಇದು ಆರೋಗ್ಯಕ್ಕೆ ತುಂಬ ಒಳ್ಳೆಯದು.
 
- ಅತಿ ಖಾರದ ಆಹಾರ ತಿಂದಾಗ ಉಂಟಾಗುವಂತಹ ಉರಿ ಮತ್ತು ಕಿರಿಕಿರಿಯನ್ನು ಒಂದು ಚಮಚ ಮೊಸರಿನ ಸೇವನೆಯಿಂದ ಕಡಿಮೆ ಮಾಡಬಹುದು.
 
- ಮೊಸರನ್ನ ಜೀರ್ಣಿಸಿಕೊಳ್ಳಲು ಸುಲಭವಾಗಿರುವ ಕಾರಣ ಎಲ್ಲಾ ವಯಸ್ಸಿನವರೂ ಇದನ್ನು ಯಾವುದೇ ಅಳುಕಿಲ್ಲದೇ ಸೇವಿಸಬಹುದು.
 
- ಮೊಸರನ್ನ ನಿಮ್ಮ ದೇಹದ ಉಷ್ಣವನ್ನು ಕಡಿಮೆ ಮಾಡುತ್ತದೆ.
 
- ಇದರಲ್ಲಿ ಹೆಚ್ಚು ಕ್ಯಾಲ್ಸಿಯಂ, ಉತ್ತಮ ಕೊಬ್ಬು ಮತ್ತು ಹೆಚ್ಚಿನ ಪ್ರೋಟೀನ್ ಇರುವದರಿಂದ ಇದು ಆರೋಗ್ಯಕ್ಕೆ ತುಂಬ ಒಳ್ಳೆಯದು.
 
* ಮೊಸರನ್ನ ತಯಾರಿಸುವುದು ಹೇಗೆ?
 
ಬೇಕಾಗುವ ಸಾಮಗ್ರಿಗಳು
 
ಅನ್ನ 1 ಕಪ್
ದಾಳಿಂಬೆ ಬೀಜ 1/2 ಕಪ್
ಗೇರು ಬೀಜ 2 ಚಮಚ
ಎಣ್ಣೆ 2 ಚಮಚ
ಹಸಿಮೆಣಸಿನ ಕಾಯಿ 3-4
ಕರಿಬೇವಿನ ಎಲೆ
ಗಟ್ಟಿ ಮೊಸರು 2 ಕಪ್
ಸಾಸಿವೆ 1 ಚಮಚ
ಜೀರಿಗೆ 1 ಚಮಚ
ಉದ್ದಿನಬೇಳೆ 1 ಚಮಚ
ಉಪ್ಪು
 
ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಜೀರಿಗೆ, ಸಾಸಿವೆ ,ಉದ್ದಿನಬೇಳೆ, ಕಡಲೇಬೇಳೆ ಹಾಕಿ ಬಿಸಿ ಮಾಡಿ.
ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ ಅದನ್ನು ಅನ್ನದ ಮೇಲೆ ಹಾಕಿ ಹಸಿ ಮೆಣಸು ಹಾಕಿ ಗೇರುಬೀಜಗಳನ್ನು ಸೇರಿಸಿ . ಉಪ್ಪು ಹಾಕಿ ಕಲಸಿ ಕೊನೆಯಲ್ಲಿ ಮೊಸರು ಸೇರಿಸಿ ಕಲಸಿ ತಿನ್ನಲು ಬಡಿಸಿರಿ.
 

ತಲೆಹೊಟ್ಟಿನ ನಿವಾರಣೆಗೆ ಸರಳ ಉಪಾಯಗಳೇನು?

ಒಡೆದ ತೆಂಗಿನಕಾಯಿ 3-4 ದಿನಗಳವರೆಗೆ ಹಾಳಾಗದಂತೆ ಇಡಲು ಹೀಗೆ ಮಾಡಿ

ಶುಂಠಿ ಹಾಳಾಗದಂತೆ ಇಡಲು ಟಿಪ್ಸ್ ಇಲ್ಲಿದೆ ನೋಡಿ

ಮೇಡ್ ಇನ್ ಇಂಡಿಯಾ ಎಂದರೆ ಅಸಡ್ಡೆ ಮಾಡುವವರು ಇದನ್ನು ಓದಲೇಬೇಕು!

ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ

ಸಂಬಂಧಿಸಿದ ಸುದ್ದಿ

ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ರವೀನಾ ಟಂಡನ್..

ಮಗು ನೋಡುತ್ತಾ ಮೈಮರೆತ ರಾಕಿಂಗ್ ಸ್ಟಾರ್ ಯಶ್..!

ಮುಂದಿನ ಸುದ್ದಿ