ನಿಮ್ಮ ಥೈರಾಯ್ಡ್ ಆರೋಗ್ಯಕ್ಕೆ ಉತ್ತಮ ಆಹಾರಗಳು ಯಾವುವು ಎಂದು ನಿಮಗೆ ತಿಳಿದಿದೆಯೇ?

Webdunia
ಮಂಗಳವಾರ, 21 ಆಗಸ್ಟ್ 2018 (17:23 IST)
ದಿನನಿತ್ಯ ಮನುಷ್ಯ ಹೊಸ ಹೊಸ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಹೆಸರುಗಳೇ ಗೊತ್ತಿಲ್ಲದ ಸಾಂಕ್ರಾಮಿಕ ರೋಗಗಳು, ಭೀಕರ ಖಾಯಿಲೆಗಳು ಮನುಷ್ಯನ ದೇಹವನ್ನು ಆಕ್ರಮಿಸುತ್ತಿದೆ. ಅಂತಹ ಖಾಯಿಲೆಗಳಲ್ಲಿ ಈ ಥೈರಾಯ್ಡ್ ಕೂಡಾ ಒಂದು ಎಂದು ಹೇಳಬಹುದು.

ದೇಹದಲ್ಲಿ ಥೈರಾಯ್ಡ್ ಹಾರ್ಮೋನ್‌ನಲ್ಲಿ ವ್ಯತ್ಯಾಸವಾದಾಗ ಈ ರೋಗ ಕಂಡುಬರುತ್ತದೆ. ಈ ಹಾರ್ಮೋನ್‌ಗಳು ತುಂಬಾ ಚಟುವಟಿಕೆಯಿಂದ ಕೂಡಿದ್ದರೆ ಹೈಪರ್ ಥೈರಾಯ್ಡ್ ಮತ್ತು ಕಡಿಮೆ ಚಟುವಟಿಕೆಯಿಂದ ಇದ್ದರೆ ಹೈಪೋ ಥೈರಾಯ್ಡ್. 
 
ಈ ಥೈರಾಯ್ಡ್ ಹಾರ್ಮೋನ್‌ಗಳ ಉತ್ಪತ್ತಿಯನ್ನು ಸರಿಯಾದ ಪ್ರಮಾಣದಲ್ಲಿಡುವ ಸಾಮರ್ಥ್ಯವು ಕೆಲವು ಆಹಾರಗಳಿಗಿವೆ. ಅಂತಹ ಆಹಾರಗಳನ್ನು ಸೇವಿಸಿದರೆ ಅಧಿಕ ಪ್ರಯೋಜನಗಳನ್ನು ನಾವು ಪಡೆಯಬಹುದು.
* ಮೊಸರು: ಥೈರಾಯ್ಡ್ ಸಮಸ್ಯೆಯ ನಿಯಂತ್ರಣಕ್ಕೆ ಜೀರ್ಣಕ್ರಿಯೆಯು ಸರಾಗವಾಗಿ ನಡೆಯಬೇಕು. ಮೊಸರಿನಲ್ಲಿ ವಿಟಾಮಿನ್ ಡಿ ಇದ್ದು ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
 
* ಪಾಲಾಕ್ : ಪಾಲಾಕ್‌ನಲ್ಲಿರುವ ಕಬ್ಬಿಣದ ಅಂಶ, ವಿಟಾಮಿನ್ ಬಿ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿಗೆ ಸಹಾಯಕಾರಿಯಾಗಿದೆ.
 
* ಸ್ಟ್ರಾಬೆರಿ : ಸ್ಟ್ರಾಬೆರಿಯಲ್ಲಿ ಅಯೋಡಿನ್ ಅಂಶವಿರುವುದರಿಂದ ಥೈರಾಯ್ಡ್ ಸಮಸ್ಯೆಗೆ ಸ್ಟ್ರಾಬೆರಿ ತಿನ್ನುವುದು ಉತ್ತಮ.
 
* ಅಣಬೆ: ಸಾಮಾನ್ಯವಾಗಿ ಸೆಲೆನಿಯೊಮ್ ಕೊರತೆಯಿಂದ ಥೈರಾಯ್ಡ್ ಸಮಸ್ಯೆ ಉಂಟಾಗುವ ಸಂಭವವಿರುತ್ತದೆ. ಅಣಬೆಯಲ್ಲಿ ಸೆಲೆನಿಯೊಮ್ ಅಧಿಕವಾಗಿರುವುದರಿಂದ ಅಣಬೆಯನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.
 
* ಮೊಟ್ಟೆ: ಮೊಟ್ಟೆಯಲ್ಲಿ ಕ್ಯಾಲ್ಸಿಯಂ ಮಾತ್ರವಲ್ಲ, ಅಯೊಡೈಡ್ ಕೂಡಾ ಇರುವುದರಿಂದ ಥೈರಾಯ್ಡ್ ಸಮಸ್ಯೆಗೆ ಇದು ಪ್ರಯೋಜನಕಾರಿಯಾಗಿದೆ.
 
* ಬಾದಾಮಿ : ಬಾದಾಮಿಯಲ್ಲಿ ಕಬ್ಬಿಣದ ಅಂಶ, ಪ್ರೋಟೀನ್ ಮತ್ತು ಸತುವಿನ ಅಂಶವಿರುವುದರಿಂದ ಇದು ಥೈರಾಯ್ಡ್ ಸಮಸ್ಯೆಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.
 
* ಸೇಬು : ಸೇಬಿನಲ್ಲಿರುವ ಪೆಕ್ವಿನ್ ನಾರಿನಂಶವು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ಇದು ಥೈರಾಯ್ಡ್ ಸಮಸ್ಯೆಗೆ ಬಹಳ ಒಳ್ಳೆಯದು.
 
* ಟೊಮೆಟೊ : ಟೊಮಟೊದಲ್ಲಿ ವಿಟಾಮಿನ್ ಸಿ ಇದೆ. ವಿಟಾಮಿನ್ ಸಿ ಇರುವ ಆಹಾರಗಳು ದೇಹದಲ್ಲಿ ಕಬ್ಬಿಣದಂಶವನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಇದು ಥೈರಾಯ್ಡ್ ಸಮಸ್ಯೆಗೆ ಪ್ರಯೋಜನಕಾರಿಯಾಗಿದೆ.
 
* ಮೀನು : ಮೀನಿನಲ್ಲಿ ಐಯೋಡಿನ್ ಅಂಶವಿರುವುದರಿಂದ ಥೈರಾಯ್ಡ್ ಸಮಸ್ಯೆಗೆ ರಾಮಬಾಣವಾಗಿದೆ. ಪ್ರತಿದಿನ ಮೀನು ತಿಂದರೆ ಥೈರಾಯ್ಡ್ ಮಾತ್ರೆ ತೆಗೆದುಕೊಳ್ಳದಿದ್ದರೂ ಥೈರಾಯ್ಡ್ ಹಾರ್ಮೋನುಗಳನ್ನು ನಿಯಂತ್ರಣದಲ್ಲಿಡುತ್ತದೆ.
 
* ಧಾನ್ಯಗಳು : ಬಾರ್ಲೆ, ಓಟ್ಸ್, ಕೆಂಪಕ್ಕಿ ಅನ್ನ ಇವುಗಳಲ್ಲಿ ವಿಟಾಮಿನ್ ಬಿ ಅಧಿಕವಾಗಿರುತ್ತದೆ ಇದು ಕುತ್ತಿಗೆ ದಪ್ಪವಾಗುವುದನ್ನು ತಡೆಯುತ್ತದೆ. ಇಂತಹ ಆಹಾರ ಪದಾರ್ಥಗಳನ್ನು ನಮ್ಮ ದಿನನಿತ್ಯದ ಅಡಿಗೆಗಳಲ್ಲಿ ಬಳಸುವುದರಿಂದ ಥೈರಾಯ್ಡ್ ಸಮಸ್ಯೆಯನ್ನು ತಡೆಗಟ್ಟಬಹುದು. ಆದರೆ ಯಾವುದೇ ಆಹಾರದ ಸಮಸ್ಯೆಗಳಿಗೆ ಏಕಾಏಕಿ ನಾವೇ ವೈದ್ಯರಾಗುವ ಬದಲು ತಜ್ಞವೈದ್ಯರನ್ನು ಒಮ್ಮೆ ಸಂಪರ್ಕ ಮಾಡಿ ಆರೋಗ್ಯದ ಕುರಿತು ಪರೀಕ್ಷಿಸುವುದು ಒಳಿತು. ಆದರೆ ಥೈರಾಯ್ಡ ಸಮಸ್ಯೆಯನ್ನು ಕಡೆಗಾಣಿಸದೇ ವೈದ್ಯರನ್ನು ಸಂಪರ್ಕಿಸಿ ಅವರು ಸೂಚಿಸುವ ಔಷಧಿಗಳನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ. ಸ್ವಾಸ್ಥ್ಯ ಬದುಕನ್ನು ನಡೆಸೋಣ.

ಮಕ್ಕಳನ್ನು ಕಾಡುವ ಜಂತುಹುಳುವಿನ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ತುರಿಕೆ ಕಜ್ಜಿಗೆ ಬೆಸ್ಟ್ ಔಷಧಿ ಈ ಎಣ್ಣೆ!

ಹಿಮೋಗ್ಲೋಬಿನ್ ಅಂಶ ಹೆಚ್ಚಿಸಲು ಈ ಆಹಾರ ಸೇವಿಸಿ

ಕೇವಲ ಮೂರೂವರೆ ಸಾವಿರ ದುಡ್ಡಿಗಾಗಿ ನೀಚ ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?

ತನ್ನ ಬಾಯ್ ಫ್ರೆಂಡ್ ಜೊತೆ ಮಗಳಿಗೂ ಮಲಗು ಎಂದ ನೀಚ ತಾಯಿ

ಸಂಬಂಧಿಸಿದ ಸುದ್ದಿ

ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ರವೀನಾ ಟಂಡನ್..

ಮಗು ನೋಡುತ್ತಾ ಮೈಮರೆತ ರಾಕಿಂಗ್ ಸ್ಟಾರ್ ಯಶ್..!

ಮುಂದಿನ ಸುದ್ದಿ