ಪ್ರೇಮಿ ಕೈಕೊಟ್ಟಿದ್ದರಿಂದ ಆಕ್ರೋಶದಿಂದ ಅವನ ಮನೆ ಮುಂದೆ ನೃತ್ಯ ಮಾಡಿದ ಪ್ರಿಯತಮೆ

ನಾಗಶ್ರೀ ಭಟ್
ಸೋಮವಾರ, 5 ಫೆಬ್ರವರಿ 2018 (16:55 IST)
ಪ್ರೀತಿಯಲ್ಲಿ ಸೋತು ನೊಂದ ಜನರು ಸೂರ್ಯನ ಕೆಳಗೆ ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡುತ್ತಾರೆ ಹಾಗೂ ಪ್ರೀತಿಯಲ್ಲಿ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯವೇ ಎನ್ನುವ ಮಾತುಗಳಿವೆ. ಈ ತರ್ಕದ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವೀಡಿಯೊವನ್ನು ನೋಡಿದರೆ ಅದು ಅಕ್ಷರಶಃ ನಿಜ ಎಂದೆನಿಸುತ್ತದೆ.
ಹಿಂದಿ ಸಿನೆಮಾ ಹಾಡೊಂದಕ್ಕೆ ಹುಡುಗಿಯೊಬ್ಬಳು ನೃತ್ಯ ಮಾಡಿರುವ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೋಡಿದವರಲ್ಲಿ ಆಶ್ಚರ್ಯ ಮೂಡಿಸಿದೆ. ಹಲವು ಮೂಲಗಳ ಪ್ರಕಾರ ಆ ಹುಡುಗಿಯನ್ನು ಹುಡುಗನೊಬ್ಬ ಪ್ರೀತಿಸಿ ಡಂಪ್ ಮಾಡಿದ್ದು ಹುಡುಗಿ ಸೇಡು ತೀರಿಸಿಕೊಳ್ಳಲು ಅವನ ಮನೆಯ ಮುಂದೆ ಡ್ಯಾನ್ಸ್ ಮಾಡಿದ್ದಾಳೆ ಎನ್ನಲಾಗುತ್ತಿದೆ.
 
ಮೂಲವೊಂದರ ಪ್ರಕಾರ ಆ ಹುಡುಗಿ ಕಂಠ ಪೂರ್ತಿ ಕುಡಿದಿದ್ದು ಆಮೀರ್ ಖಾನ್ ಅವರ ರಾಜಾ ಹಿಂದೂಸ್ತಾನಿ ಚಿತ್ರದ ಹಾಡುಗಳಿಗೆ ಡ್ಯಾನ್ಸ್ ಮಾಡಿರುವುದನ್ನು ನೋಡಬಹುದು. ಆನ್‌ಲೈನ್‌ನಲ್ಲಿ ಆ ಹುಡುಗಿಯ ನಾಲ್ಕು ವೀಡಿಯೊಗಳು ಲಭ್ಯವಿದ್ದು ಅವಳು 'ತೇರೆ ಇಷ್ಕ್ ಮೇ ನಾಚೇಂಗೆ' ಹಾಡಿಗೆ ಡ್ಯಾನ್ಸ್ ಮಾಡಿರುವುದನ್ನು ನೋಡಬಹುದು.
 
ಹುಡುಗಿ ಪಟೌಡಿಯಲ್ಲಿರುವ ಡಂಪ್ ಮಾಡಿದ ಹುಡುಗನ ಮನೆಯ ಮುಂದೆ ತನ್ನ ಸ್ವಂತ ಡಿಜೆಯನ್ನು ತೆಗೆದುಕೊಂಡು ಹೋಗಿ ಡ್ಯಾನ್ಸ್ ಮಾಡಿದಾಗ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಅದೇನೇಇದ್ದರೂ ಹುಡುಗಿ ನಿಜವಾಗಿ ಕುಡಿದಿದ್ದಳೇ ಅನ್ನುವುದು ಇನ್ನೂ ಖಚಿತವಾಗಿಲ್ಲ.
 

ಈ ಬ್ರಾ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಿ!

ಆಂಬಿಡೆಂಟ್ ಹಗರಣ: ಜನಾರ್ಧನ ರೆಡ್ಡಿ ಜಾಮೀನು ತೀರ್ಪು ಇಂದು

ಅನುಚಿತ ವರ್ತನೆಯ ಆರೋಪ ; ಫ್ಲಿಪ್‌ಕಾರ್ಟ್ ಸಿಇಓ ಬಿನ್ನಿ ಬನ್ಸಲ್ ರಾಜೀನಾಮೆ

ನಿರ್ದೇಶಕ ಆರ್‌ಜಿವಿ ಹೇಳಿಕೆಗೆ ಖಡಕ್ ಆಗಿ ಟಾಂಗ್ ಕೊಟ್ಟ ನಟ ರಿತೇಶ್ ದೇಶ್‌ಮುಖ್

ಆಪರೇಷನ್ ಮಾಡಿದ ವೈದ್ಯರಿಗೆ ಮಹಿಳೆಯ ಹೊಟ್ಟೆಯಲ್ಲಿ ಸಿಕ್ಕಿದ್ದೇನು ಗೊತ್ತಾ?!

ಸಂಬಂಧಿಸಿದ ಸುದ್ದಿ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಶಬರಿಮಲೆ ವಿವಾದ ಹಾಗೂ ಟಿಪ್ಪು ಜಯಂತಿ ಆಚರಣೆ ಬಗ್ಗೆ ರಾಜಮಾತೆ ಪ್ರಮೋದಾ ದೇವಿ ಹೇಳಿದ್ದೇನು?

ಕೊಡಗು ಬಂದ್: ಕಾರಣ ಏನು ಗೊತ್ತಾ?

ಮುಂದಿನ ಸುದ್ದಿ