ಅಂತಿಮ ಟೆಸ್ಟ್ ಆಡುತ್ತಿರುವ ಅಲೆಸ್ಟರ್ ಕುಕ್ ಗೆ ವಿಶಿಷ್ಟ ಸ್ವಾಗತ ಕೋರಿದ ಟೀಂ ಇಂಡಿಯಾ

Webdunia
ಶುಕ್ರವಾರ, 7 ಸೆಪ್ಟಂಬರ್ 2018 (17:40 IST)
ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 1 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿದೆ.

ಜೆನ್ನಿಂಗ್ಸ್  ವಿಕೆಟ್ ರವೀಂದ್ರ ಜಡೇಜಾ ಪಾಲಾಗಿದೆ. ಆದರೆ ಈ ಪಂದ್ಯದಲ್ಲಿ ಅಂತಿಮ ಟೆಸ್ಟ್ ಪಂದ್ಯವಾಡುತ್ತಿರುವ ಇಂಗ್ಲೆಂಡ್ ಆರಂಭಿಕ ಅಲೆಸ್ಟರ್ ಕುಕ್ ಗೆ ಟೀಂ ಇಂಡಿಯಾ ಆಟಗಾರರು ಆನರ್ ಆಫ್ ಗಾರ್ಡ್ ನೀಡುವ ಮೂಲಕ ಗೌರವ ಸಮರ್ಪಿಸಿದ್ದಾರೆ.

ಮೊನ್ನೆಯಷ್ಟೇ ತಮ್ಮ ಕನಸಿನ ವಿಶ್ವ ಇಲೆವೆನ್ ತಂಡವನ್ನು ಆಯ್ಕೆ ಮಾಡಿದ್ದ ಕುಕ್ ಒಬ್ಬನೇ ಒಬ್ಬ ಭಾರತೀಯ ಆಟಗಾರನಿಗೆ ಸ್ಥಾನ ನೀಡಿರಲಿಲ್ಲ. ಆದರೆ ಟೀಂ ಇಂಡಿಯಾ ಆಟಗಾರರು ಇದ್ಯಾವುದೇ ಕಹಿಯನ್ನು ಮನಸ್ಸಲ್ಲಿಟ್ಟುಕೊಳ್ಳದೇ ಹಿರಿಯ ಆಟಗಾರನಿಗೆ ಗೌರವ ತೋರಿದ್ದಾರೆ. ಇದೇ ವೇಳೆ ದಿ ಓವಲ್ ಮೈದಾನದಲ್ಲಿ ಕುಕ್ 1000 ರನ್ ಪೂರೈಸಿದ ದಾಖಲೆಯನ್ನೂ ಮಾಡಿದರು.

ಉಳಿದಂತೆ ಇಂದು ಟೀಂ ಇಂಡಿಯಾ ವೇಗಿಗಳು ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳ ಮೇಲೆ ನಿರೀಕ್ಷಿತ ಪರಿಣಾಮ ಬೀರಲಿಲ್ಲ. ರವೀಂದ್ರ ಜಡೇಜಾ ಮಾತ್ರ ಏಕೈಕ ಯಶಸ್ವೀ ಬೌಲರ್ ಎನಿಸಿದರು. ಇದೀಗ 37 ರನ್ ಗಳಿಸಿರುವ ಕುಕ್ ಮತ್ತು 2 ರನ್ ಗಳಿಸಿರುವ ಮೊಯಿನ್ ಅಲಿ ಕ್ರೀಸ್ ನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಯುದ್ಧ ಮಾಡೋಣ ಎಂದ ಕ್ರಿಕೆಟಿಗ ಗೌತಮ್ ಗಂಭೀರ್ ಗೆ ಶಾಹಿದ್ ಅಫ್ರಿದಿ ಪ್ರತಿಕ್ರಿಯೆ ಏನು ಗೊತ್ತಾ?

ಭಾರತ ವಿಶ್ವಕಪ್ ನಲ್ಲಿ ತಮ್ಮ ಜತೆ ಆಡದು ಎಂಬ ಭಯಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಮಾಡಿದ್ದೇನು ಗೊತ್ತಾ?!

ಅನಿಲ್ ಕುಂಬ್ಳೆಗಾಗಿ ಆಯ್ಕೆಗಾರರ ಜತೆ ಜಗಳವಾಡಿದ್ದರಂತೆ ಸೌರವ್ ಗಂಗೂಲಿ!

ತನ್ನ ಬಾಯ್ ಫ್ರೆಂಡ್ ಜೊತೆ ಮಗಳಿಗೂ ಮಲಗು ಎಂದ ನೀಚ ತಾಯಿ

ಸೇವಾ ಪುಸ್ತಕ ಕದ್ದ ಶಿಕ್ಷಕ ಸೆರೆಯಾಗಿದ್ದು ಹೇಗೆ ಗೊತ್ತಾ?

ಸಂಬಂಧಿಸಿದ ಸುದ್ದಿ

ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ : ಜೈರಾಮ್ ರಮೇಶ್

ಮೋದಿ ವಾಜಪೇಯಿಯವರನ್ನು ಕೂಡ ಹೊರ ಹಾಕುತ್ತಿದ್ದರು : ರಾಹುಲ್ ಗಾಂಧಿ

ಮುಂದಿನ ಸುದ್ದಿ