ಹಿಂದಿನವರು ಏನು ಕಡಿದು ಕಟ್ಟೆ ಹಾಕಿದ್ರು ಅಂತ ನಮ್ಮ ಬಗ್ಗೆ ಮಾತಾಡ್ತಾರೆ? ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಪ್ರಶ್ನೆ

Webdunia
ಗುರುವಾರ, 6 ಸೆಪ್ಟಂಬರ್ 2018 (09:36 IST)
ಸೌಥಾಂಪ್ಟನ್: ಇಂಗ್ಲೆಂಡ್ ಮತ್ತು ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತಿದ್ದಕ್ಕೇ ಈಗಿನ ಟೀಂ ಇಂಡಿಯಾ ಆಟಗಾರರು ಮತ್ತು ಕೋಚ್ ಮೇಲೆ ಟೀಕೆ ಮಾಡುತ್ತಿರುವವರ ಮೇಲೆ ರವಿಶಾಸ್ತ್ರಿ ಸಿಡಿದೆದ್ದಿದ್ದಾರೆ.

ಕಳೆದ 10-15 ವರ್ಷಗಳಲ್ಲಿ ಯಾವುದೇ ಕ್ರಿಕೆಟಿಗರು ಮಾಡದಷ್ಟು ಸಾಧನೆ, ರನ್ ಈ ತಂಡ ಮಾಡಿದೆ. ಹಿಂದೆಯೂ ಸಚಿನ್, ದ್ರಾವಿಡ್ ರಂತಹ ಶ್ರೇಷ್ಠ ಕ್ರಿಕೆಟಿಗರು ತಂಡದಲ್ಲಿದ್ದಾಗಲೂ ಭಾರತ ವಿದೇಶದಲ್ಲಿ ಸರಣಿ ಸೋತಿದೆ. ಹೀಗಿರುವಾಗ ನಾವು ಎರಡು ಸರಣಿ ಸೋತಿದ್ದಕ್ಕೇ ಇಷ್ಟೊಂದು ಟೀಕೆ ಮಾಡುತ್ತಿರುವುದೇಕೆ?

ಹಾಗೆ ನೋಡಿದರೆ ಕಳೆದ ಎರಡು ಮೂರು ವರ್ಷಗಳಲ್ಲಿ ನಾವು ವಿದೇಶದಲ್ಲಿ 9 ಪಂದ್ಯಗಳನ್ನು ಮತ್ತು ಮೂರು ಸರಣಿಗಳನ್ನು ಗೆದ್ದಿದ್ದೇವೆ ಎಂದು ಕೋಚ್ ಶಾಸ್ತ್ರಿ ತಮ್ಮ ತಂಡವನ್ನು ಸಮರ್ಥಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಸರಣಿ ಸೋತ ಬಳಿಕ ರವಿಶಾಸ್ತ್ರಿ ಹಾಗೂ ಇತರ ಕ್ರಿಕೆಟಿಗರ ಮೇಲೆ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಟೀಕಾ ಪ್ರಹಾರವನ್ನೇ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರವಿಶಾಸ್ತ್ರಿ ತಿರುಗೇಟು ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವಿರಾಟ್ ಕೊಹ್ಲಿ ದಾಖಲೆ ಮುರಿಯಲು ತಂಡವನ್ನೇ ಪಣಕ್ಕಿಟ್ಟು ಸ್ವಾರ್ಥಿಯಾದ ಹಶೀಮ್ ಆಮ್ಲಾ?!

ಒಂದು ಬಾಲ್ ನಲ್ಲಿ ಜೀವದಾನ, ಮರುಕ್ಷಣವೇ ಐತಿಹಾಸಿಕ ಶಾಟ್: ಇದು ಧೋನಿ ಮ್ಯಾಜಿಕ್!

14 ವರ್ಷ ಆಯ್ತು ಕ್ರಿಕೆಟ್ ಗೆ ಬಂದು, ಇನ್ನೂ ಹೀಗೆಲ್ಲಾ ಹೇಳಕ್ಕಾಗುತ್ತಾ? ಧೋನಿ ಪ್ರಶ್ನೆ

ಸಿಎಂ ಕುಮಾರಸ್ವಾಮಿ ಬಗ್ಗೆ ಅಸಮಾಧಾನಗೊಂಡ ಕೈ ಶಾಸಕರು; ಸಿಎಂ ರಾಜೀನಾಮೆ ನೀಡುವಂತೆ ಒತ್ತಾಯ

ಫೋನ್ ಪಾಸ್‍ ವರ್ಡ್ ಕೊಡಲ್ಲ ಎಂದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ?

ಸಂಬಂಧಿಸಿದ ಸುದ್ದಿ

ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ : ಜೈರಾಮ್ ರಮೇಶ್

ಮೋದಿ ವಾಜಪೇಯಿಯವರನ್ನು ಕೂಡ ಹೊರ ಹಾಕುತ್ತಿದ್ದರು : ರಾಹುಲ್ ಗಾಂಧಿ

ಮುಂದಿನ ಸುದ್ದಿ