Webdunia - Bharat's app for daily news and videos

Install App

ನಿಮ್ಮ ರಾಶಿಗನುಗುಣವಾಗಿ ಬಟ್ಟೆಗಳನ್ನು ಧರಿಸಿ!

Webdunia
ಗುರುವಾರ, 6 ಮಾರ್ಚ್ 2014 (11:34 IST)
PR
ಸಿಂಹ ರಾಶಿಯ ಮಂದಿಗೆ ಬಣ್ಣಬಣ್ಣದ ಕಾಟನ್ ವಸ್ತ್ರಗಳು, ಕನ್ಯಾ ರಾಶಿಯವರಿಗಾಗಿ ತರಹೇವಾರಿ ಲಿನೆನ್ ಬಟ್ಟೆಗಳು, ವಜ್ರದ ತರಹೇವಾರಿ ಆಭರಣಗಳು ಮೇಷ ರಾಶಿಯವರಿಗಾಗಿ!

ಇದೆಂಥ ಹೊಸ ಥಿಯರಿ ಅಂತ ಆಶ್ಚರ್ಯ ಪಡಬೇಡಿ. ಬಟ್ಟೆಗಳಿಗೂ ರಾಶಿಗೂ ಸಂಬಂಧವಿದೆ. ಕಣ್ಣಿಗೆ ಚೆನ್ನಾಗಿ ಕಂಡಿದ್ದನ್ನು ನೀವು ಧರಿಸಬಹುದು. ಆದರೆ ಅದು ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳಲಾರದು ಎಂಬುದು ನಿಮಗೆ ಗೊತ್ತಾ? ಹೌದು. ನೀವು ಧರಿಸುವ ಬಟ್ಟೆಗೂ, ಆಭರಣಕ್ಕೂ, ಹಾಕಿಕೊಳ್ಳುವ ವಸ್ತುವಿಗೂ ನಿಮ್ಮ ರಾಶಿಗೂ ಸಂಬಂಧವಿದೆ.

ಫ್ಯಾಷನ್ ಜ್ಯೋತಿಷ್ಯರ ಅಭಿಪ್ರಾಯದ ಪ್ರಕಾರ, ನಾವು ಯಾವುದು ಧರಿಸಿದರೆ, ಚೆಂದ ಕಾಣುತ್ತದೆ ಎಂಬುದು ಮುಖ್ಯವಲ್ಲ. ಯಾವ ಮಾದರಿಯ ಬಟ್ಟೆ ಧರಿಸಿದರೆ ನಮ್ಮತನ ಪ್ರಜ್ವಲಿಸುತ್ತದೆ ಎಂಬುದು ಮುಖ್ಯ. ಎಲ್ಲ ರಾಶಿಗಳೂ ಅಗ್ನಿ ವಾಯು, ನೆಲ, ಜಲ ಹಾಗೂ ಆಕಾಶ ಈ ತತ್ವಗಳನ್ನು ಆಧರಿಸಿ ಇರುವುದರಿಂದ ಈ ಎಲ್ಲ ತತ್ವಗಳು ಪಾಸಿಟಿವ್ ಹಾಗೂ ನೆಗೆಟಿವ್ ಎನರ್ಜಿಯನ್ನು ಸ್ಫುರಿಸುತ್ತವೆ. ಆದರೆ ಬಹುತೇಕರು ತಮ್ಮ ರಾಶಿಗೆ ಹೊಂದುವ ಬಟ್ಟೆಯನ್ನು ಆರಿಸುವ ಗೋಜಿಗೆ ಹೋಗುವುದಿಲ್ಲ. ಆದರೆ, ಇಂಥ ಆಯ್ಕೆಗಳೇ ಎಡವಟ್ಟಾಗುತ್ತದೆ. ನಾವು ಇಷ್ಟಪಟ್ಟು ಖರೀದಿಸುವ ಬಟ್ಟೆ ನಮ್ಮ ಒಳಗಿನ ವೆಬ್ರೇಷನ್‌ಗಳಿಗೆ ಇದು ಸೂಟ್ ಆಗೋದಿಲ್ಲ ಎಂಬುದೂ ಕೂಡಾ ಸತ್ಯ.

ಉದಾಹರಣೆಗೆ ಸಿಂಹ ರಾಶಿಯ ಮಂದಿಗೆ ಪ್ಯೂರ್ ಲೆದರ್‌ನಿಂದ ಮಾಡಿದ ವಸ್ತುಗಳನ್ನು ಬಳಸುವುದು ಸರಿಹೊಂದಲಾರದು. ಕಾರಣ. ಸಿಂಹ ರಾಶಿಯ ಮೃಗೀಯ ಗುಣಕ್ಕೂ ಚರ್ಮದ ವಸ್ತುಗಳಿಗೂ ಸರಿ ಹೊಂದುವುದಿಲ್ಲ. ಜೊತೆಗೆ ಎಲ್ಲಾ ರಾಶಿಯವರಿಗೂ ಚಿನ್ನ ಹೊಂದಿಕೊಳ್ಳುವುದಿಲ್ಲ. ಹೀಗೆ ಒಂದೊಂದು ರಾಶಿಯ ಮಂದಿಗೂ ಹೊಂದಿಕೊಳ್ಳುವ ಹೊಂದಿಕೊಳ್ಳದ ವಸ್ತ್ರ ವೈವಿಧ್ಯಗಳಿವೆ.
ಮೇಷ: ಮೇಷ ರಾಶಿಯ ಮಂದಿಗೆ ಮಂಗಳನು ಅಧಿಪತಿಯಾಗಿರುವುದರಿಂದ ಅವರಿಗೆ ಪ್ಯೂರ್ ಹಾಗೂ ಸಿಂಥೆಟಿಕ್ ಮಾದರಿಯ ವಸ್ತ್ರಗಳಷ್ಟೇ ಸರಿ ಹೊಂದುತ್ತವೆ. ಮೇಷ ರಾಶಿಯವರಿಗೆ ಲೆದರ್, ಬೆಳ್ಳಿ, ಕಬ್ಬಿಣದ ವಸ್ತುಗಳು ಸರಿ ಹೊಂದುವುದಿಲ್ಲ. ನೀಲಿ, ಕೆಂಪು, ಕೇಸರಿ ಬಣ್ಣದ ಬಟ್ಟೆಗಳು ಇವರಿಗೆ ಉತ್ತಮ.

ವೃಷಭ- ಹಸಿರು, ಬಿಳಿ, ಕಂದು ಮತ್ತಿತರ ದಟ್ಟ ಬಣ್ಣದ ಸಿಲ್ಕ್ ಬಟ್ಟೆಗಳು ಇವರಿಗೆ ಸರಿಯಾಗಿ ಹೊಂದುತ್ತವೆ. ಈ ಬಣ್ಣದ ಬಟ್ಟೆಗಳು ಸಾದಾ ಅರ್ಥಾತ್ ಡಿಸೈನ್ ರಹಿತ ಹಾಗೂ ಬಹುಬಣ್ಣದ ಲೇಯರ್‌ಗಳುಳ್ಳ ಈಗಿದ್ದರೆ ಇನ್ನೂ ಉತ್ತಮ.

ಮಿಥುನ- ಪರಿಶುದ್ಧ ಕಾಟನ್, ಹಾಗೂ ಲಿನೆನ್ ಬಟ್ಟೆಗಳು ಇವರಿಗೆ ಹೊಂದುತ್ತವೆ. ಹಸಿರು, ಬಿಳಿ ಇವರಿಗೆ ಅತ್ಯುತ್ತಮ. ಪ್ಲಾಟಿನಂ, ಚಿನ್ನ ಹಾಗೂ ಬೆಳ್ಳಿ ಇವರಿಗೆ ಹೊಂದಿಕೊಳ್ಳುತ್ತದೆ.

ಕರ್ಕ: ಕರ್ಕ ರಾಶಿಯ ಮಂದಿಗೆ ಸಿಲ್ಕ್, ಕಾಟನ್ ಹಾಗೂ ಲೆನಿನ್ ಬಟ್ಟೆಗಳು ಅತ್ಯುತ್ತಮ. ಬಿಳಿ ಬಣ್ಣದ ಬಟ್ಟೆಗಳು ಅಥವಾ ತುಂಬ ಸರಳವಾದ ಡಿಸೈನ್ ಹೊಂದಿದ ಬಟ್ಟೆಗಳು ಇವರಿಗೆ ಒಳ್ಳೆಯದು.

ಸಿಂಹ- ಸಿಂಹ ರಾಶಿಯ ಮಂದಿಗೆ ಕೆಂಪು, ಹಳದಿ ಹಾಗೂ ಕೇಸರಿ ಬಣ್ಣದ ಕಾಟನ್ ಬಟ್ಟೆಗಳು ಉತ್ತಮ. ಲೆದರ್, ಫೆದರ್, ಬೆಳ್ಳಿ ಹಾಗೂ ಕಬ್ಬಿಣ ಇವರಿಗೆ ಒಳ್ಳೆಯದಲ್ಲ.

ಕನ್ಯಾ - ಕಾಟನ್ ಹಾಗೂ ಲಿನೆನ್ ಬಟ್ಟೆ ಇವರಿಗೆ ಒಳ್ಳೆಯದು. ಅಗಲವಾದ ಕಟ್‌ಗಳು ಅಥವಾ ಶೇಡ್‌ಗಳಿರುವ ಬಟ್ಟೆ ಅಷ್ಟು ಒಳ್ಳೆಯದಲ್ಲ. ಬೆಳ್ಳಿ, ಪ್ಲಾಟಿನಂ ಚಿನ್ನ ಇವರಿಗೆ ಒಪ್ಪುತ್ತದೆ. ಎಮರಾಲ್ಡ್ ಒಳ್ಳೆಯದು.

ತುಲಾ- ತುಲಾ ರಾಶಿಯ ಮಂದಿಗೆ ಸಿಂಥೆಟಿಕ್ ಸಿಲ್ಕ್ ಬಟ್ಟೆಗಳು ಒಳ್ಳೆಯದು. ಕೆಂಪು, ಕೇಸರಿ ಬಣ್ಣದ ಬಟ್ಟೆಗಳು ಹೊಂದಿಕೆಯಾಗುವುದಿಲ್ಲ. ಬೆಳ್ಳಿ ಹಾಗೂ ಪ್ಲಾಟಿನಂ ಆಭರಣ ಕೂಡಾ ಉತ್ತಮವಲ್ಲ.

ವೃಶ್ಚಿಕ: ವೃಶ್ಚಿಕ ರಾಶಿಯ ಮಂದಿಗೆ ಕಾಟನ್ ಜೊತೆ ಲೇಸ್‌ಗಳುಳ್ಳ ಬಟ್ಟೆ ಒಳ್ಳೆಯದು. ಕೆಂಪು, ಹಳದಿ ಹಾಗೂ ಕೇಸರಿ ಬಣ್ಣದ ಬಟ್ಟೆಗಳು ಉತ್ತಮ. ಬೆಳ್ಳಿ ಹಾಗೂ ಪ್ಲಾಟಿನಂ ಆಭರಣಗಳಿಂದ ದೂರವಿದ್ದರೆ ಉತ್ತಮ.

ಧನು: ಈ ರಾಶಿಯ ಮಂದಿಗೆ ಹಳದಿ, ತೆಳು ಕೇಸರಿ, ಕಿತ್ತಳೆ ಬಣ್ಣಗಳು ಹೊಂದುತ್ತವೆ. ಚಿನ್ನದ ಆಭರಣಗಳು ಚೆನ್ನಾಗಿ ಹೊಂದುತ್ತವೆ.

ಮಕರ: ಈ ರಾಶಿಯ ಮಂದಿಗೆ ಕಾಟನ್, ಸಿಲ್ಕ್, ಲಿನೆನ್ ಮಾದರಿಗಳ ಬಟ್ಟೆ ಉತ್ತಮ. ಕಪ್ಪು, ನೀಲಿ, ಕಂದು ಉತ್ತಮ. ತಾಮ್ರ ಹಾಗೂ ಚಿನ್ನದ ಬಳಕೆಯಿಂದ ದೂರವಿದ್ದರೆ ಉತ್ತಮ.

ಕುಂಭ- ಈ ರಾಶಿಯ ಮಂದಿಗೆ ದಟ್ಟ ಬಣ್ಣದ ಬಟ್ಟೆಗಳು ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ.

ಮೀನ- ಈ ರಾಶಿಯವರು ಹಳದಿ, ಕಿತ್ತಳೆ, ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಇವರಿಗೆ ಸಾಮಾನ್ಯವಾಗಿ ಎಲ್ಲಾ ಮಾದರಿಯ ಬಟ್ಟೆ ಹೊಂದುತ್ತವೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶ್ರಾದ್ಧ ಮಾಡಿ ಪಿಂಡ ಪ್ರಧಾನ ಮಾಡಿದಾಗ ಪಿತೃಗಳಿಗೆ ಆಹಾರ ಸಿಗುವುದು ಹೇಗೆ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಅಭಿವೃದ್ಧಿಯಾಗಬೇಕಾದರೆ ಮನೆಯ ಈ ಜಾಗದಲ್ಲಿ ಹಣವಿಡಬೇಕು

Show comments