ದೀಪಿಕಾ- ರಣವೀರ್ ಮದುವೆ ರಹಸ್ಯ ನಟ ಕಬೀರ್ ಬೇಡಿ ಟ್ವೀಟ್ ನಿಂದ ಬಯಲು

Webdunia
ಬುಧವಾರ, 15 ಆಗಸ್ಟ್ 2018 (11:58 IST)
ಮುಂಬೈ : ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಮದುವೆ ಇದೇ ನವೆಂಬರ್ 20 ರಂದು ಇಟಲಿಯಲ್ಲಿ ನಡೆಯಲಿದೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.


ಈ ಜೋಡಿ ಈಗಾಗಲೇ ಸ್ನೇಹಿತರಿಗೆ ಹಾಗೂ ಹತ್ತಿರದ ಸಂಬಂಧಿಕರಿಗೆ ಸೇವ್ ದಿ ಡೇಟ್ ಅಂತ ಸಂದೇಶ ಕಳಿಸಿದ್ದಾರೆ ಎಂದು ಈಗಾಗಲೇ ಪತ್ರಿಕೆಯೊಂದು ವರದಿ ಮಾಡಿತ್ತು. ಈ ಜೋಡಿಯ ಮದುವೆ ಇಟಲಿಯ ಕೋಮೋ ಸಿಟಿಯಲ್ಲಿ ನಡೆಯಲಿದ್ದು, ನಂತರ ಬೆಂಗಳೂರು ಅಥವಾ ದೆಹಲಿ, ಮುಂಬೈನಲ್ಲಿ ಆರತಕ್ಷತೆ ನಡೆಸಲು ಕುಟುಂಬ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.


ಈ ಸುದ್ದಿಗೆ ಇಂಬು  ನೀಡುವಂತಹ ವಿಚಾರವೊಂದನ್ನು ಅಂತಾರಾಷ್ಟ್ರೀಯ ನಟ ಕಬೀರ್ ಬೇಡಿ ಟ್ವಿಟ್ಟರ್ ​​ನಲ್ಲಿ ಬಹಿರಂಗಪಡಿಸಿದ್ದಾರೆ. ಗ್ರೇಟ್ ಕಪಲ್! ಗ್ರೇಟ್ ಲೋಕಾಲೆ ಇನ್ ಇಟಲಿ! ಗ್ರೇಟ್ ಇವೆಂಟ್ ಎಂದು ಹೇಳಿ, ರಣ್ವೀರ್-ದೀಪಿಕಾಗೆ ಮದುವೆ ಶುಭಕೋರಿದ್ದಾರೆ. ಜೀವನ ಸುಖಮಯವಾಗಿರಲಿ ಎಂದು ಹಾರೈಸಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಮೂಲಕ ಈ ಸ್ಟಾರ್​ ಜೋಡಿ ಮದುವೆ ಇಟಲಿಯಲ್ಲೇ ಅನ್ನೋದು ಪಕ್ಕಾ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಬೇಬಿ ಮೂನ್ ನಲ್ಲಿದ್ದಾರಂತೆ ಯಶ್ – ರಾಧಿಕಾ

ವಿದೇಶಿ ಹುಡುಗಿ ಜೊತೆ ವಿಜಯ್ ದೇವರಕೊಂಡ ಲವ್ವಿ-ಡುವ್ವಿ!

ಕ್ರೈಸ್ತ ಸಂನ್ಯಾಸಿಯರ ಬಗ್ಗೆ ನಿಮ್ಮ ನಿಲುವೇನು? ಎಂದು ಕೇಳಿದ್ದಕ್ಕೆ ಪತ್ರಕರ್ತರ ಮೇಲೆ ಕಿಡಿಕಾರಿದ ಮೋಹನ್‌ ಲಾಲ್

ಪ್ರಧಾನಿ ಮೋದಿಗೆ ಒಬ್ಬ ಹೈಕಮಾಂಡ್ ಇದ್ದಾರೆ! ಅವರು ಯಾರು ಗೊತ್ತಾ?

ಮಗ ಮಾಡಿದ ತಪ್ಪಿಗೆ ಕೆಲಸ ಕಳೆದುಕೊಂಡ ಪೊಲೀಸ್ ಅಧಿಕಾರಿ

ಸಂಬಂಧಿಸಿದ ಸುದ್ದಿ

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ತನ್ನ ತಲೆಗೆ ವೈನ್‍ಗ್ಲಾಸ್‍ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ - ವೈರಲ್ ವಿಡಿಯೋ

ಮುಂದಿನ ಸುದ್ದಿ