ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ರವೀನಾ ಟಂಡನ್..

ಅತಿಥಾ
ಶನಿವಾರ, 24 ಫೆಬ್ರವರಿ 2018 (18:14 IST)
ಬಾಲಿವುಡ್‌ನ ಜನಪ್ರಿಯ ನಟಿ ರವೀನಾ ಟಂಡನ್ ನಿನ್ನೆ ತಮ್ಮ ಮದುವೆಯ ವಾರ್ಷಿಕೋತ್ಸವದಂದು ತಮ್ಮ ನೆನಪಿನಾಳಕ್ಕೆ ಇಳಿಯುತ್ತಾ ತಾವು ಮತ್ತು ಚಲನಚಿತ್ರ ವಿತರಕರಾಗಿರುವ ಅವರ ಪತಿ ಅನಿಲ್ ತದಾನಿಯವರೊಂದಿಗೆ ಇನ್ನಷ್ಟು ಸಂತೋಶದ ನೆನಪುಗಳನ್ನು ಸೃಷ್ಟಿಸಲು ಎದುರುನೋಡುತ್ತಿದ್ದೇನೆ ಎಂದು ಹೇಳಿದರು.
"ಪ್ರೀತಿ ಮತ್ತು ನಗು, ನಂಬಿಕೆ, ವಿಶ್ವಾಸ, ಸಮಾನತೆ, ಸಂತೋಷದ ಒಡನಾಟದ ಒಟ್ಟಿಗಿನ ಜೀವನ ಕಳೆದು 14 ವರ್ಷಗಳಾದರೂ ನಿನ್ನೆ ಒಂದಾದಂತಿದೆ" ಎಂದು ರವೀನಾ ಟಂಡನ್ ನಿನ್ನೆ ಟ್ವೀಟ್ ಮಾಡಿದ್ದಾರೆ. ತಮ್ಮ 14 ವರ್ಷದ ದಾಂಪತ್ಯದ ಸಂತೋಷದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ಅವರ ಮದುವೆಯ ಫೋಟೋಗಳು ಮತ್ತು ಪತಿ ಅನಿಲ್ ಅವರೊಂದಿಗೆ ತೆಗೆದಿರುವ ಫೋಟೋಗಳನ್ನು ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
 
ರವೀನಾ 2004 ರಲ್ಲಿ ಅನಿಲ್ ತದಾನಿ ಅವರನ್ನು ವಿವಾಹವಾಗಿದ್ದರು. ಇವರಿಬ್ಬರಿಗೆ ಮಗಳು ರಾಶಾ ಮತ್ತು ಮಗ ರಣಬೀರ್ ಎಂಬ ಹೆಸರಿನ ಎರಡು ಮುದ್ದಾದ ಮಕ್ಕಳಿದ್ದಾರೆ. ರವೀನಾ 1995 ರಲ್ಲಿ ಪೂಜಾ ಮತ್ತು ಛಾಯಾ ಎಂಬ ಇಬ್ಬರು ಮಕ್ಕಳನ್ನು ಸಿಂಗಲ್ ಮದರ್ ಆಗಿ ದತ್ತು ತೆಗೆದುಕೊಂಡಿದ್ದರು. 1991 ರಲ್ಲಿ 'ಪತ್ತರ್ ಕೆ ಫೂಲ್' ಎಂಬ ತಮ್ಮ ಮೊದಲ ಚಿತ್ರದಲ್ಲಿ ನಟಿಸಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದರು. 'ದಿಲ್ವಾಲೆ', 'ಮೊಹ್ರಾ', 'ಶೂಲ್' ಮತ್ತು 'ಶಾಬ್' ಚಿತ್ರದಲ್ಲಿನ ನಟನೆಗೆ ರವೀನಾ ಜನಪ್ರಿಯರಾಗಿದ್ದಾರೆ.

ಅರ್ಜುನ್ ಕಪೂರ್ ಗೆ ಅಜ್ಜಿ ಹುಡುಕಿದ ಹುಡುಗಿ ಯಾರು ಗೊತ್ತಾ?

ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ನಟಿ ಐಂದ್ರಿತಾ ರೇ

ಸಡಕ್-2 ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳುತ್ತಿರುವ ಮಹೇಶ್ ಭಟ್..

ಕಾಮತೃಷೆಯನ್ನು ತೀರಿಸಿಕೊಳ್ಳಲು ಮಗಳನ್ನೇ ಬಳಸಿಕೊಳ್ಳುತ್ತಿದ್ದ ಅಪ್ಪ

ಬಿಜೆಪಿ ವಿರುದ್ಧ ದಂಗೆ ಏಳಿ ಎಂದು ಕರೆ ನೀಡಿ ತೊಂದರೆಗೆ ಸಿಲುಕಿದ ಸಿಎಂ ಎಚ್ ಡಿಕೆಗೆ ದೇವೇಗೌಡರ ಅಭಯ

ಸಂಬಂಧಿಸಿದ ಸುದ್ದಿ

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ತನ್ನ ತಲೆಗೆ ವೈನ್‍ಗ್ಲಾಸ್‍ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ - ವೈರಲ್ ವಿಡಿಯೋ

ಮುಂದಿನ ಸುದ್ದಿ