Webdunia - Bharat's app for daily news and videos

Install App

ಮುಖದ ಸೌಂದರ್ಯಕ್ಕೆ ನಿಮ್ಮ ಅಡುಗೆ ಮನೆಯಲ್ಲೇ ಪರಿಹಾರ!

Webdunia
IFM
ಅಂದದ ಮುಖದ ಕನಸು ಕಾಣದವರಿಲ್ಲ. ಆದರೂ, ಏನೇ ಮಾಡಿದರೂ, ಮೊಡವೆ, ಕಪ್ಪು ಕಲೆ, ಕಳಾಹೀನ ಮುಖ... ಹೀಗೆ ಒಂದೇ, ಎರಡೇ? ಯುವಕ ಯುವತಿಯರಿಗೆ ನೂರೆಂಟು ಸಮಸ್ಯೆಗಳು. ಆದರೆ, ಇದಕ್ಕೆ ಪರಿಹಾರ ಕಾಣದೆ ಹಾಗೇ ದಿನದೂಡುವುದು ಇದ್ದೇ ಇದೆ. ಆದರೆ ಇವಕ್ಕೆಲ್ಲ ನಿಮ್ಮ ಅಡುಗೆ ಮನೆಯಲ್ಲಿ ಪರಿಹಾರ ಇದೆ ಎಂಬುದು ಗೊತ್ತೇ?

ಹೌದು. ದಿನನಿತ್ಯ ಆಹಾರವಾಗಿ ಬಳಸುವ ಹಲವು ಪದಾರ್ಥಗಳ ಸೌಂದರ್ಯ ವರ್ಧಕಗಳು. ಅವಗಳ ಬಳಕೆ ಎಲ್ಲಿ, ಹೇಗೆ ಸೂಕ್ತ ಎಂಬ ವಿವರ ಇಲ್ಲಿದೆ.

ಮೊಡವೆಗೆ

1. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಪೇಸ್ ಮಾಡಿ ಮುಖಕ್ಕೆ ಹಚ್ಚಿದರೆ ಮೊಡವೆಗಳಿಗೆ ತುಂಬಾ ಒಳ್ಳೆಯದು.
2. ನಿಂಬೆರಸವನ್ನು ದಿನವೂ ಆಗಾಗ ಹಚ್ಚುತ್ತಲೇ ಬಂದರೆ ಮೊಡವೆ ಕ್ರಮೇಣ ಕಡಿಮೆಯಾಗುತ್ತದೆ.
3. ಹಸಿ ಬೆಳ್ಳುಳ್ಳಿ ಮೊಡವೆಯನ್ನು ಗುಣಪಡಿಸುವ ಇನ್ನೊಂದು ಮನೆಯ ಐಷಧಿ. ಬೆಳ್ಳುಳ್ಳಿಯಿಂದ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡುತ್ತಲೇ ಬಂದರೆ ತುಂಬ ಮೊಡವೆಗಳಿರುವ ಚರ್ಮಕ್ಕೆ ಅತ್ಯುತ್ತಮ ಪರಿಣಾಮ ಬೀರುತ್ತದೆ. ಮುಖದ ಮೇಲಿರುವ ಚುಕ್ಕೆಗಳು, ಮೊಡವೆಗಳನ್ನು ಇದು ಬೇಗನೆ ಕಡಿಮೆಗೊಳಿಸುತ್ತದೆ.
4. ಮೂರು ಹಸಿ ಬೆಳ್ಳುಳ್ಳಿಯನ್ನು ದಿನವೂ ತಿನ್ನುತ್ತಾ ಬಂದರೂ ಚರ್ಮಕ್ಕೆ ಒಳ್ಳೆಯದು. ಅದು ರಕ್ತವನ್ನು ಶುದ್ಧೀಕರಿಸುವ ಮೂಲಕ ಚರ್ಮವನ್ನು ನಯವಾಗಿಸುತ್ತದೆ.
5. ಕೊತ್ತಂಬರಿ ಸೊಪ್ಪು ಹಾಗೂ ಪುದಿನ ಸೊಪ್ಪ್ನು ಪೇಸ್ಟ್ ಮಾಡಿ ಅದಕ್ಕೆ ಚಿಟಿಕೆಯಷ್ಟು ಅರಿಶಿನ ಸೇರಿಸಿ ಮುಖಕ್ಕೆ ಪ್ರತಿ ರಾತ್ರಿ ಹಚ್ಚುತ್ತಾ ಬಂದಲ್ಲಿ ಮೊಡವೆಯ ತೊಂದರೆಯಿರುವವರಿಗೆ ಉತ್ತಮ ಪರಿಹಾರ ಕಾಣುತ್ತದೆ.
6. ಮೆಂತ್ಯ ಸೊಪ್ಪನ್ನು ಪೇಸ್ಟ್ ಮಾಡಿ ಪ್ರತಿ ರಾತ್ರಿ ಮಲಗುವ ಮುನ್ನ ಹಚ್ಚಿ ಬೆಳ್ಗಗೆ ಎದ್ದು ಉಗುರು ಬೆಚ್ಚಗಿ ನೀರಿನಲ್ಲಿ ತೊಳೆದರೆ ಮೊಡವೆ, ಬ್ಲ್ಯಾಕ್‌ಹೆಡ್ಸ್ ಮತ್ತಿತರ ತೊಂದರೆಗಳಿಂದ ಮುಕ್ತಿ ದೊರೆಯುತ್ತದೆ.
7. ಸೌತೆಕಾಯಿ ರಸವನ್ನು ಮುಖ, ಕತ್ತು, ಕುತ್ತಿಗೆ ಹಾಗ ಕಣ್ಣಿನ ಸುತ್ತಲೂ ಹಚ್ಚುವುದರಿಂದ ಮುಖಕ್ಕೆ ಕಾಂತಿ ಬರುತ್ತದೆ. ಸುಸ್ತಾದ ಚರ್ಮವನ್ನು ತೇಜೋಭರಿತವನ್ನಾಗಿ ಮಾಡುವುದಲ್ಲದೆ, ಮೊಡವೆ, ಕಲೆಗಳನ್ನು ಕಡಿಮೆ ಮಾಡುತ್ತದೆ.
8. 20 ರಿಂದ 25 ದಿನಗಳ ಕಾಲ ನಿಂಬೆರಸ, ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಂದೆರಡು ಗಂಟೆ ಕಾಲ ಬಿಟ್ಟು ತೊಳೆದರೆ ಮೊಡವೆ ಕಡಿಮೆಯಾಗುತ್ತದೆ.
9. ಮೊಟ್ಟೆಯ ಲೋಳೆಯನ್ನು ಹಾಗೆಯೇ ಮುಖಕ್ಕೆ ಹತ್ತಿಯ ಸಹಾಯದಿಂದ ಹಚ್ಚಿ ಸ್ವಲ್ಪ ಕಾಲ ಬಿಟ್ಟು ತೊಳೆದರೆ ಇದು ಮುಖದ ಹೆಚ್ಚಿ ಎಣ್ಣೆಯಂಶವನ್ನು ತೆಗೆಹಾಕಿ, ರಂಧ್ರಗಳ ವರೆಗೂ ಇಳಿದು ಮೊಡವೆಯನ್ನು ಕಡಿಮೆ ಮಾಡುತ್ತದೆ.
10. ನೆಲಗಡಲೆ ಎಣ್ಣೆಗೆ ಸ್ವಲ್ಪ ನಿಂಬೆ ರಸ ಸೇರಿಸಿ ಹಚ್ಚುವ ಮೂಲಕವೂ ಮೊಡವೆಯನ್ನು ತಡೆಗಟ್ಟಬಹುದು.
11. ಬಾದಾಮಿಯನ್ನು ಜೇನಿನೊಂದಿಗೆ ಅರೆದು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ನಂತರ ಅದೇ ಪ್ಸ್ಟ್‌ನಲ್ಲಿ ಮಸಾಜ್ ಮಾಡಿ ತೊಳೆದರೆ ಮೊಡವೆಗೆ ಉತ್ತಮ ಪರಿಹಾರ.
IFM

12. ಸ್ವಲ್ಪ ತುರಿದ ಆಪಲ್, ಬೇಯಿಸಿದ ಓಟ್‌ಮೀಲ್, ಮೊಟ್ಟೆಯ ಲೋಳೆ ಹಾಗೂ ಸ್ವಲ್ಪ ನಿಂಬೆರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಕಾಲ ಬಿಟ್ಟು ತೊಳೆಯಿರಿ.
13. ದಾಲ್ಚಿನ್ನಿ (ಚಕ್ಕೆ) ಪುಡಿಯನ್ನು ಜೇನಿನಲ್ಲಿ ಕಲಸಿ ಮಲಗುವ ಮುನ್ನ ಹಚ್ಚಿ ಬೆಳಗ್ಗೆ ಎದ್ದ ಮೇಲೆ ತೊಳೆಯುತ್ತಾ ಬಂದಲ್ಲಿ ಎರಡು ಮೂರು ವಾರಗಳಲ್ಲೇ ಮೊಡವೆ ಸಂಪೂರ್ಣವಾಗಿ ಗುಣವಾಗುತ್ತದೆ.
14. ಕಹಿಬೇವಿನ ಎಲೆಯನ್ನು ಅರಿಶಿನದೊಂದಿಗೆ ಅರೆದು ದಿನವೂ ಹಚ್ಚಿ 20-25 ನಿಮಿಷದ ಮೇಲೆ ತೊಳೆದರೆ ಮೊಡವೆ ಸಮಸ್ಯೆಗೆ ಉತ್ತಮ ಪರಿಹಾರ ಕಾಣುತ್ತದೆ.

ಮೊಡವೆಯ ಕಲೆಗೆ

1. ಗಾಯಗಳ ಕಲೆ ಮುಖದಲ್ಲಿ ಉಳಿಯದಂತೆ ಮಾಡಲು ಗಂಧದ ಪೇಸ್ಟ್‌ಗೆ ರೋಸ್ ವಾಟರ್ ಸೇರಿಸಿ ಕಲೆಯಿರುವಲ್ಲಿ ಹಚ್ಚಬೇಕು.
ನಿಂಬೆರಸ ನ್ಯಾಚುರಲ್ ಬ್ಲೀಚ್ ಆಗಿ ಕೆಲಸ ಮಾಡುತ್ತದೆ. ಹಾಗಾಗಿ ನಿಂಬೆ ರಸವನ್ನು ದಿನವೂ ಹಚ್ಚುತ್ತಿದ್ದರೆ, ಮುಖದ ಮೇಲೆನ ಮೊಡವೆ ಕಲೆಗಳು ಕಡಿಮೆಯಾಗುತ್ತಾ ಬರುತ್ತದೆ.
2. ಲ್ಯಾವೆಂಡರ್ ಎಣ್ಣೆಯನ್ನು ಹತ್ತಿಯಲ್ಲಿ ಅದ್ದಿ ದಿನಕ್ಕೆರಡು ಬಾರಿ ಮುಖಕ್ಕೆ ಹಚ್ಚಿದರೆ ಮುಖದ ಮೇಲಿನ ಕಲೆಗಳು ಮಾಯವಾಗುತ್ತದೆ.
3. ಜೇನುತುಪ್ಪವನ್ನು ದಿನಕ್ಕೆ ಹಲವು ಸಾರಿ ಪ್ರತಿದಿನವೂ ಮುಖಕ್ಕೆ ಹಚ್ಚುತ್ತಾ ಬಂದಲ್ಲಿ ಮುಖಕ್ಕೆ ಹೊಳಪು ಬರುತ್ತದಲ್ಲದೆ, ಹಳೆಯ ಕಲೆಗಳನ್ನು ತೆಗೆದುಹಾಕುತ್ತದೆ.
4. ಪ್ರತಿದಿನ ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆದರೆ ಮಉಕದ ಮೇಲಿನ ಕಲೆಗಳು ಕಡಿಮೆಯಾಗುತ್ತಾ ಬರುತ್ತದೆ.
5. ತೆಂಗಿನೆಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿದರೂ ಕೂಡಾ ಹಳೆಯ ಕಲೆಗಳನ್ನು ಕಡಿಮೆ ಮಾಡಬಹುದು.
6. ಆಲಿವ್ ಎಣ್ಣೆಯನ್ನು ಮುಖಕ್ಕೆ ಪ್ರತಿದಿನ ಹಚ್ಚುತ್ತಾ ಬಂದಲ್ಲಿ ಎಲ್ಲ ತರಹದ ಕಲೆಗಳನ್ನೂ ಇದು ತೆಗೆದುಹಾಕುತ್ತದೆ.
7. ವಿಟಮಿನ್ ಇ ಎಣ್ಣೆ ಅಥವಾ ಕ್ಯಾಪ್ಸೂಲನ್ನು ಮುಖಕ್ಕೆ ಹಚ್ಚಿದರೆ ಕೆಲವೇ ವಾರಗಳಲ್ಲಿ ಮುಖಕ್ಕೆ ಕಾಂತಿ ಬರುತ್ತದಲ್ಲದೆ, ಮುಖದ ಎಲ್ಲ ಕಲೆಗಳೂ ಮಾಯವಾಗುತ್ತದೆ.
8. ಟೀ ಟ್ರೀ ಆಯಿಲ್‌ನ್ನು ಹಚ್ಚುತ್ತಾ ಬಂದಲ್ಲಿ ಮೊಡವೆಯಿಂದಾದ ಕಲೆಯನ್ನು ತೆಗೆದುಹಾಕಬಹುದು.
9. ಮುಖಕ್ಕೆ ಗಾಯವಾಗಿದ್ದರೆ ತಕ್ಷಣ ಅಲ್ವಿರಾ ಜೆಲ್‌ನ್ನು ಹಚ್ಚುತ್ತಾ ಬಂದಲ್ಲಿ ಶಾಶ್ವತ ಕಲೆಯಾಗಿ ಉಳಿಯುವುದು ತಪ್ಪುತ್ತದೆ.
IFM


ಬಿಸಿಲಿನ ಝಳಕ್ಕೆ ಸನ್‌ಬರ್ನ್ ಆಗಿದ್ದರೆ

1. ಬಿಸಿಲಿನ ಝಳಕ್ಕೆ ಮುಖ ಕೆಂಪಗಾಗಿ ಬಿಳಿಚಿಕೊಂಡು ಸನ್‌ಬರ್ನ್ ಆಗುತ್ತದೆ. ಅಲ್ವಿರಾ ಹಾಗೂ ವಿನೆಗರ್ ಮಿಕ್ಸ್ ಮಾಡಿ ಹಚ್ಚಿದರೆ ಮುಖದ ಮೇಲಾದ ಸನ್ ಬರ್ನ್ ಹೋಗೋತ್ತದೆ.
2. ಸಾಸಿವೆ ಎಣ್ಣೆಯನ್ನು ಮುಖಕ್ಕೆ ಹಚ್ಚಿದರೆ ಅದು ಮುಖದಲ್ಲಿನ ಹೆಚ್ಚಿನ ಉಷ್ಣತೆಯನ್ನು ಹೀರಿ ಸನ್‌ಬರ್ನ್ ಮಾಯವಾಗಿಸುತ್ತದೆ.
3. ಸೌತೇಕಾಯಿಯ ಹೋಳನ್ನು ಮುಖಕ್ಕೆ ಉಜ್ಜುತ್ತಾ ಇದ್ದರೆ ಸನ್‌ಬರ್ನ್ ಕಡಿಮೆಯಾಗುತ್ತದೆ.
4. ಆಲೂಗಡ್ಡೆಯನ್ನು ತುರಿದು ಮುಖಕ್ಕೆ ಹಚ್ಚಿದರೂ ಅದು ಮುಖದ ಉಷ್ಣವನ್ನು ತಂಪಾಗಿಸುತ್ತದೆ.

ಒಣ ಚರ್ಮಕ್ಕೆ

1. ಚರ್ಮ ಒಣಗಿದಂತೆಯೇ ಯಾವಾಗಲು ಇದ್ದು ಕಳಾಹೀನವಾಗಿದ್ದರೆ ಬಾಳೆಹಣ್ಣು, ಪಪ್ಪಾಯಿ ಹಾಗೂ ಬೆಣ್ಣೆಹಣ್ಣನ್ನು ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷದ ನಂತಹ ತೊಳೆಯಿರಿ.
2. ಜೇನುತುಪ್ಪ, ಮೊಟ್ಟೆಯ ಲೋಳೆ ಹಾಗೂ ಹಾಲಿನ ಪುಡಿಯನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 25 ನಿಮಿಷದ ನಂತರ ತೊಳೆಯಿರಿ. ಇದು ಒಣಚರ್ಮಕ್ಕೆ ಅತ್ಯುತ್ತಮ.
3. ತುರಿದ ಸೌತೆಕಾಯಿಯನ್ನು ಕಣ್ಣಿನ ಸುತ್ತಲೂ ಸೇರಿದಂತೆ ಮುಖಕ್ಕೆ ಹಚ್ಚಿ. ಇದು ಒಣಗಿದಂತಿದ್ದ ಚರ್ಮಕ್ಕೆ ಮತ್ತೆ ತಾಜಾತನ ತರುತ್ತದೆ.
4. ಪಪ್ಪಾಯಿಯನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಇದು ಕಳಾಹೀನ ಮುಖಕ್ಕೆ ತೇಜಸ್ಸು ನೀಡುತ್ತದಲ್ಲದೆ, ಮುಖವನ್ನು ಕ್ಲೀನ್ ಮಾಡಿ ಸತ್ತ ಚರ್ಮದ ಪದರವನ್ನು ತೆಗೆದುಹಾಕುತ್ತದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಬೇಸಿಗೆಯಲ್ಲಿ ಈ ಐದು ಹಣ್ಣುಗಳನ್ನು ಸೇವಿಸಿ: ಅಚ್ಚರಿ ಬದಲಾವಣೆ ಕಾಣುತ್ತೀರಿ

ಬೆಳ್ಳುಳ್ಳಿಯನ್ನು ತಿನ್ನುವ ಸರಿಯಾದ ಕ್ರಮ ಹೀಗಿರಲಿ

ಸಿಹಿ ಕುಂಬಳಕಾಯಿ ಬಳಸಿ ಫೇಸ್ ಪ್ಯಾಕ್ ತಯಾರಿಸಿ

ತೂಕ ಕಡಿಮೆಯಾಗಬೇಕಾದರೆ ಈ ಯೋಗ ಮಾಡಿ

ಹಲ್ಲಿನ ವಸಡಿನಲ್ಲಿ ರಕ್ತ ಬರಲು ಕಾರಣಗಳು