Webdunia - Bharat's app for daily news and videos

Install App

ಈ ಐದು ಸಂದರ್ಭದಲ್ಲಿ ಹಿರಿಯರಿಗೆ ನಮಸ್ಕಾರ ಮಾಡಬಾರದಂತೆ

Webdunia
ಶನಿವಾರ, 18 ಆಗಸ್ಟ್ 2018 (06:21 IST)
ಬೆಂಗಳೂರು : ಹಿರಿಯರಿಗೆ ನಮಸ್ಕಾರ ಮಾಡುವುದು ನಮ್ಮ ಭಾರತೀಯ ಹಿಂದೂ ಸಂಸ್ಕೃತಿ. ಅದನ್ನು ಈಗಿನವರು ಸಹ ಪರಿಪಾಲಿಸುತ್ತ ಬಂದಿದ್ದಾರೆ. ಆದರೆ ಗರುಡ ಪುರಾಣದಲ್ಲಿ ಉಲ್ಲೇಖವಾಗಿರುವಂತೆ ಕೆಲವೊಂದು ಜನರಿಗೆ ಕೈ ಮುಗಿದು ನಮಸ್ಕಾರ ಮಾಡಬಾರದಂತೆ. ಇದ್ರಿಂದ ಅಂತಹ ವ್ಯಕ್ತಿಗಳಿಗೆ ನಮಸ್ಕಾರ ಮಾಡಿದ ವ್ಯಕ್ತಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಹೇಳಲಾಗಿದೆ.


1.ಗರುಡ ಪುರಾಣದಲ್ಲಿ ಹೇಳಿರುವಂತೆ ಶವ ಸಂಸ್ಕಾರಕ್ಕೆ ಹೋಗುವ ಸಂಧರ್ಭದಲ್ಲಿ ಬೇರೆಯವರಿಗೆ ನಮಸ್ಕಾರ ಮಾಡಬಾರದಂತೆ. ಈ ವೇಳೆ ಹಲವಾರು ಜನ ಹಿಂದೆ ಮುಂದೆ ಹೋಗುತ್ತಿರುತ್ತಾರೆ. ಶವ ಸಂಸ್ಕಾರಕ್ಕೆ ಹೋಗುವಾಗ ಮೌನವಾಗಿ ಹೋಗಬೇಕಂತೆ. ಈ ವೇಳೆ ಬೇರೆಯವರಿಗೆ ನಮಸ್ಕಾರ ಮಾಡುವುದರಿಂದ, ಮೌನಕ್ಕೆ ಧಕ್ಕೆ ಯಾಗುವುದಲ್ಲದೆ, ದುಃಖದ ಸಂದರ್ಭದಲ್ಲಿ ಮಾತನಾಡುವುದು ಅಶುಭ ಎಂದು ಹೇಳಲಾಗಿದೆ.

2. ಎರಡನೆಯದಾಗಿ ಸ್ನಾನ ಮಾಡುವ ವೇಳೆ ನಮಸ್ಕಾರ ಮಾಡಬಾರದು. ಒಂದು ವೇಳೆ ಈ ಸಮಯದಲ್ಲಿ ಸಮಸ್ಕಾರ ಮಾಡಿದ್ರೆ, ಗ್ರಹ ಗತಿಗಳಲ್ಲಿ ದೋಷವಾಗಿ, ಮುಂದೆ ಬರುವ ದಿನಗಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಲಾಗಿದೆ.

3.ಪುರಾಣದ ಪ್ರಕಾರ ಕಪಟ ವ್ಯಕ್ತಿಗೆ ಎಂದೂ ಕೈ ಮುಗಿಯಬಾರದಂತೆ. ಇಂಥ ವ್ಯಕ್ತಿಗಳಿಗೆ ನಮಸ್ಕಾರ ಮಾಡಿದ್ರೆ ನಮ್ಮ ಗೌರವಕ್ಕೆ ಧಕ್ಕೆ ಬರುತ್ತದೆಯಂತೆ. ಜಾತಕದಲ್ಲಿ ಗ್ರಹ ದೋಷ ಹೆಚ್ಚಾಗುತ್ತದೆಯಂತೆ.

4. ಪೂಜೆ ಮಾಡುವ ವೇಳೆ ಬೇರೆಯವರಿಗೆ ನಮಸ್ಕಾರ ಮಾಡಬಾರದಂತೆ.ಇದಕ್ಕೆ ಪ್ರಮುಖ ಕಾರಣ, ನಾವು ದೇವರ ಪೂಜೆ ಮಾಡುವ ವೇಳೆ ಏಕಾಗ್ರ ಚಿತ್ತರಾಗಿ ಪೂಜೆ ಮಾಡಬೇಕು. ಆದರೆ ಈ ವೇಳೆಯಲ್ಲಿ ಯಾರದ್ರೂ ನಮಸ್ಕಾರ ಮಾಡಿದಾಗ ನಮ್ಮ ಧ್ಯಾನ ಬೇರೆ ಕಡೆ ಹೋಗುತ್ತದೆ.ಇದರಿಂದ   ದೇವತೆಗಳು ಪ್ರಸನ್ನರಾಗುವುದಿಲ್ಲ ಎಂದು ಹೇಳಲಾಗಿದೆ.

5. ಓಡುತ್ತಿರುವ ವ್ಯಕ್ತಿಗೆ ಎಂದೂ ನಮಸ್ಕಾರ ಮಾಡಬಾರದು. ಇದು ಜಾತಕದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಅವಿವಾಹಿತ ಮಹಿಳೆಯರು ಮದುವೆಗೆ ಮೊದಲು ಈ ತಪ್ಪು ಮಾಡಲೇಬೇಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಹಣ ನಿಲ್ಲಲ್ಲ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments