ಈ ಕಾರಣಕ್ಕೆ ಮದುವೆಯಾಗಲು ಅರ್ಜೆಂಟ್ ಮಾಡಬೇಡಿ!

ಗುರುವಾರ, 8 ನವೆಂಬರ್ 2018 (07:54 IST)
ಬೆಂಗಳೂರು: ಓರಗೆಯವರಿಗೆಲ್ಲಾ ಮದುವೆಯಾಯಿತು. ನಿಮ್ಮದು ಯಾವಾಗ? ಹೀಗಂತ ಎಲ್ಲರೂ ಕೇಳುತ್ತಿದ್ದರಾರೆಂದು ಗಡಿಬಿಡಿಯಲ್ಲಿ ಮದುವೆಯಾಗಲು ಒಪ್ಪಿಕೊಳ್ಳಬೇಡಿ. ಅದರಲ್ಲೂ ಕೆಳಗೆ ಹೇಳಿದ ಕಾರಣಗಳಿಗಂತೂ ಮದುವೆಯಾಗಲು ಒಪ್ಪಬೇಡಿ.

ಶ್ರೀಮಂತಿಕೆ
ಮದುವೆಯಾಗುವ ವರ ಅಥವಾ ವಧುವಿನ ಕುಟುಂಬದವರು ಶ್ರೀಮಂತರು ಎಂಬ ಕಾರಣಕ್ಕೆ ಮದುವೆಯಾಗಬೇಡಿ. ಶ್ರೀಮಂತಿಕೆ ಇದ್ದರೆ ಒಳ್ಳೆಯದೇ. ಆದರೆ ಅದುವೇ ಜೀವನ ಸಂಗಾತಿ ಇರಬೇಕಾದ ಮಾನದಂಡವಲ್ಲ.

ಸ್ನೇಹಿತರದ್ದಾಯ್ತು, ನಿಂದು ಯಾವಾಗ?
ಮದುವೆ ವಯಸ್ಸಿಗೆ ಬಂದ ಮೇಲೆ ಸ್ನೇಹಿತರು ಮದುವೆಯಾಯಿತೆಂದು ನೀವೂ ಮದುವೆಯಾಗಲು ಅರ್ಜೆಂಟ್ ಮಾಡಬೇಡಿ. ಅವರ ಮನಸ್ಥಿತಿಯಂತೇ ನಿಮ್ಮದೂ ಇರಬೇಕೆಂದಿಲ್ಲ. ನಿಮ್ಮ ಮನಸ್ಸಿಗೆ ನಿಜವಾಗಿಯೂ ಮದುವೆಯಾಗಬೇಕೆಂದು ಅನಿಸಿದರೆ ಮಾತ್ರ ಸಿದ್ಧರಾಗಿ.

ಪೋಷಕರ ಒತ್ತಾಯ
ವಯಸ್ಸಾಯ್ತು, ಇನ್ನಾದರೂ ಮದುವೆ ಆಗು ಎಂಬ ಪೋಷಕರ ಒತ್ತಾಯಕ್ಕೆ ಅವರಿಗೆ ಇಷ್ಟವಾದ ಹುಡುಗ/ಹುಡುಗಿಗೆ ಕೊರಳೊಡ್ಡಬೇಡಿ. ಪೋಷಕರ ಜತೆಗೆ ನಿಮ್ಮ ಸಂಗಾತಿ ನಿಮಗೂ ಇಷ್ಟವಾಗಬೇಕು. ಯಾಕೆಂದರೆ ಜತೆಯಾಗಿ ಎಲ್ಲವನ್ನೂ ಹಂಚಿಕೊಂಡು ಜೀವನ ನಡೆಸಬೇಕಾದವರು ನೀವೇ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಅದರ ಮಾತ್ರೆ ಸೇವಿಸಿದ ತಕ್ಷಣ ಹೀಗೆ ಮಾಡಿ!