Select Your Language

Notifications

webdunia
webdunia
webdunia
webdunia

ಅತಿಥಿಗಳನ್ನು ಆದರಿಸುವ ಮನೆಯ ಮುಖ್ಯದ್ವಾರ.....

ಅತಿಥಿಗಳನ್ನು ಆದರಿಸುವ ಮನೆಯ ಮುಖ್ಯದ್ವಾರ.....
, ಬುಧವಾರ, 30 ಸೆಪ್ಟಂಬರ್ 2015 (19:26 IST)
ಸಾರ ಕಲ್ಲಕಟ್ಟ
 
ಮನೆಯ ಮುಖ್ಯದ್ವಾರವು ಮನೆಗೆ ಅತಿಥಿಗಳನ್ನು ಆದರದಿಂದ ಬರಮಾಡಿಕೊಳ್ಳುವ ಪ್ರತೀಕವಾದುದರಿಂದ ಮನೆಯ ಮುಖ್ಯದ್ವಾರಕ್ಕೆ ವಾಸ್ತುಶಾಸ್ತ್ರದಲ್ಲಿ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ.ಮುಖ್ಯದ್ವಾರವು ಯಾವ ದಿಕ್ಕಿನಲ್ಲಿರಬೇಕು? ಬಾಗಿಲು ನಿರ್ಮಿಸಲು ಯಾವ ಮರವನ್ನು ಆಯ್ಕೆ ಮಾಡಬೇಕು? ಮನೆಯ ಮುಂದಿನ ಗೇಟು ಯಾವ ರೀತಿ ಇರಿಸಬೇಕು?ಎಂಬುದನ್ನು ಶಾಸ್ತ್ರೀಯ ರೀತಿಯಲ್ಲಿ ವಾಸ್ತುಶಾಸ್ತ್ರವು ವಿವರಿಸುತ್ತದೆ.
 
ಮನೆಯ ಬಾಗಿಲು ತೆರೆದು ಪ್ರಸನ್ನವದನರರಾಗಿ ಅತಿಥಿಗಳನ್ನು ಬರಮಾಡಿಕೊಳ್ಳುವ ರೀತಿಯು ಅತಿಥಿಗಳ ಮನದಣಿಯುವಂತಿದ್ದರೆ ಮುಖ್ಯದ್ವಾರಕ್ಕೆ ಅಲಂಕಾರಗಳು ಯಾಕೆ ಬೇಕು ಹೇಳಿ? ಆದರೂ ಮುಖ್ಯದ್ವಾರವನ್ನು ಆದಷ್ಟು ಶೃಂಗರಿಸಲು ಪ್ರತಿಯೊಬ್ಬರೂ ಶ್ರಮಿಸುತ್ತಾರೆ ಯಾಕೆಂದರೆ ಮುಖ್ಯದ್ವಾರವು ಪ್ರತೀಮನೆಯ ಆಕರ್ಷಣಾ ಬಿಂದು ಆದುದರಿಂದಲೇ ಪ್ರತಿಯೊಬ್ಬರೂ ಅದಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲು ಬಯಸುತ್ತಾರೆ.ಮನೆಯ ಪ್ರಮುಖ ದ್ವಾರವನ್ನು ಶೃಂಗರಿಸುವುದು ಐಶ್ವ್ಯರ್ಯದ ಸಂಕೇತ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.ಮುಖ್ಯದ್ವಾರದ ಬಾಗಿಲುಗಳಲ್ಲಿ ಲಕ್ಷ್ಮಿ,ಸರಸ್ವತಿ,ಗಜಲಕ್ಷ್ಮಿ ಮೊದಲಾದ ಕೆತ್ತನೆಗಳಿದ್ದರೆ ಉತ್ತಮ, ಜೊತೆಗೆ ಇವು ಬಾಗಿಲಿನ ಸೌಂದರ್ಯವನ್ನು ವರ್ಧಿಸುತ್ತವೆ.
 
ಮನೆಯ ಮಧ್ಯಭಾಗದಲ್ಲಿ ಬರುವಂತೆ ಮುಖ್ಯದ್ವಾರ ನಿರ್ಮಿಸಿದರೆ ಉತ್ತಮ.ಈ ಬಾಗಿಲಿನ ನೇರ ರೇಖೆಯಲ್ಲಿ ಇನ್ನ್ಯಾವುದೇ ಬಾಗಿಲುಗಳು ಇರಬಾರದು.ಮುಖ್ಯದ್ವಾರದ ನೇರವಾಗಿ ಮನೆಯ ಗೇಟನ್ನು ಇರಿಸಬಾರದು.ಈ ಬಾಗಿಲಿನ ನೇರ ಮುಂಭಾಗದಲ್ಲಿ ಯಾವುದೇ ಕಂಬಗಳು ಅಥವಾ ಯಾವುದೇ ಮನೆಗಳೋ ಇರಬಾರದು.ಒಂದು ವೇಳೆ ನಿಮ್ಮ ಮನೆಯ ನೇರ ಮುಂಭಾ-ಗದಲ್ಲಿ ಇನ್ನೊಂದು ಮನೆಯಿದ್ದರೆ ಆ ಮನೆಯ ಬಾಗಿಲಿನ ನೇರವಾಗಿ ನಿಮ್ಮ ಮನೆಯ ಬಾಗಿಲು ಇರದಂತೆ ಶ್ರದ್ಧೆವಹಿಸಿ.

Share this Story:

Follow Webdunia kannada