ವಿಪತ್ತು ನಿರ್ವಹಣೆ ತರಬೇತಿ ನೀಡಲು ವಿದ್ಯಾರ್ಥಿಯನ್ನು ಕಟ್ಟಡದಿಂದ ತಳ್ಳಿದ ತರಬೇತುದಾರ. ಆಮೇಲೆ ಆಗಿದ್ದೇನು?

Webdunia
ಶುಕ್ರವಾರ, 13 ಜುಲೈ 2018 (11:46 IST)
ಕೊಯಮತ್ತೂರು : ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಜಾಗೃತಿ ಕ್ರಮಗಳನ್ನು  ತಿಳಿಸಲು ಹೋಗಿ ತರಬೇತುದಾರ ವಿದ್ಯಾರ್ಥಿಯೊಬ್ಬಳನ್ನು ಕಟ್ಟಡದ ಎರಡನೇ ಮಹಡಿಯಿಂದ ಬಲವಂತವಾಗಿ ತಳ್ಳಿದ ಕಾರಣ ಆಕೆ ಸಾವಿಗೀಡಾದ ಘಟನೆ ತಮಿಳುನಾಡಿದ ಕೊಯಮತ್ತೂರಿನಲ್ಲಿ ಸಂಭವಿಸಿದೆ.


ಲೋಕೇಶ್ವರಿ ದಾರಣವಾಗಿ ಸಾವನ್ನಪ್ಪಿದ ವಿದ್ಯಾರ್ಥಿನಿ. ಕೊವಯ್ ಕಲೈಮಗಳ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಜಾಗೃತಿ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಇತ್ತು. ಈ ವೇಳೆ ಲೋಕೇಶ್ವರಿ ಮತ್ತು ತರಬೇತುದಾರ ಎರಡನೇ ಮಹಡಿಯಲ್ಲಿ ಡೆಮೊಗಾಗಿ ನಿಂತಿದ್ದರು. ಸುರಕ್ಷತೆಗಾಗಿ ಒಂದು ಹಗ್ಗ ಕಟ್ಟಲಾಗಿತ್ತು. ಕೆಳಗೆ ವಿದ್ಯಾರ್ಥಿಗಳು ಬಲೆಯನ್ನು ಹಿಡಿದುಕೊಂಡಿದ್ದು, ಆಕೆ ಕೆಳಗೆ ಬೀಳುವಾಗ ಆಕೆಯನ್ನು ಬಲೆಯಲ್ಲಿ ರಕ್ಷಿಸುವುದು ಇದರ ಉದ್ದೇಶವಾಗಿತ್ತು.


ಆದರೆ ನಡೆದಿದ್ದೇ ಬೇರೆ. ಆಕೆಯನ್ನು ತರಬೇತುದಾರ ಕೆಳಕ್ಕೆ ತಳ್ಳಿದಾಗ ಆಕೆ ಬೀಳುವ ರಭಸಕ್ಕೆ ಮೊದಲ ಮಹಡಿಯಲ್ಲಿದ್ದ ಸಜ್ಞಾಗೆ ಆಕೆಯ ತಲೆ ಬಡಿದು ದುರಂತ ಸಾವಿಗೀಡಾಗಿದ್ದಾಳೆ. ಇದನ್ನುವಿದ್ಯಾರ್ಥಿಗಳು ವಿಡಿಯೋ ಮಾಡಿದ್ದು, ಇಡೀ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ತನ್ನ ಬಾಯ್ ಫ್ರೆಂಡ್ ಜೊತೆ ಮಗಳಿಗೂ ಮಲಗು ಎಂದ ನೀಚ ತಾಯಿ

ಸೇವಾ ಪುಸ್ತಕ ಕದ್ದ ಶಿಕ್ಷಕ ಸೆರೆಯಾಗಿದ್ದು ಹೇಗೆ ಗೊತ್ತಾ?

ಪಾಕಿಸ್ತಾನವನ್ನು ಕೊಳಕು ಕಣ್ಣಿನಿಂದ ನೋಡಿದ್ರೆ ಅವ್ರ ಕಣ್ಣು ಕಿತ್ತು ಹಾಕುತ್ತೇವೆ- ರೈಲ್ವೆ ಸಚಿವರಿಂದ ಬೆದರಿಕೆ

ಯುದ್ಧ ಮಾಡೋಣ ಎಂದ ಕ್ರಿಕೆಟಿಗ ಗೌತಮ್ ಗಂಭೀರ್ ಗೆ ಶಾಹಿದ್ ಅಫ್ರಿದಿ ಪ್ರತಿಕ್ರಿಯೆ ಏನು ಗೊತ್ತಾ?

ಪ್ರಭಾಸ್ ಬೇಡವೆಂದು ರಾಣಾಗೆ ಮಣೆ ಹಾಕಿದ ಅನುಷ್ಕಾ ಶೆಟ್ಟಿ

ಸಂಬಂಧಿಸಿದ ಸುದ್ದಿ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಕಾರ್ ಗ್ಲಾಸ್ ಒಡೆದು ದೋಚಿದ್ದು ಲಕ್ಷ ಲಕ್ಷ ಹಣ!

ಎಂಪಿ ಚುನನಾವಣೆ ಟಿಕೆಟ್: ಹೈಕಮಾಂಡ್ ನಿರ್ಣಯವೇ ಅಂತಿಮ?

ಮುಂದಿನ ಸುದ್ದಿ