Select Your Language

Notifications

webdunia
webdunia
webdunia
webdunia

ಮುಂದಿನ 24 ಗಂಟೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಕಾದಿದೆಯಾ ಆಪತ್ತು?!

ಮುಂದಿನ 24 ಗಂಟೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಕಾದಿದೆಯಾ ಆಪತ್ತು?!
ಬೆಳಗಾವಿ , ಸೋಮವಾರ, 17 ಸೆಪ್ಟಂಬರ್ 2018 (09:22 IST)
ಬೆಳಗಾವಿ: ಮುಂದಿನ 24 ಗಂಟೆಯಲ್ಲಿ ಏನು ಬೇಕಾದರೂ ಆಗಬಹುದು. ಸರ್ಕಾರ ಬಿದ್ದು ಹೋದರೆ ನಾವು ಅದಕ್ಕೆ ಜವಾಬ್ಧಾರರಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಕಾಂಗ್ರೆಸ್ ನ ಕೆಲವು ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆದಿರಬಹುದು. ಆದರೆ ನಮ್ಮಿಂದ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ನಮಗೆ ಆ ಬಗ್ಗೆ ಮಾಹಿತಿಯೂ ಇಲ್ಲ ಎಂದು ಸತೀಶ್ ಜಾರಕಿಹೊಳಿ ಅಪಾಯದ ಸೂಚನೆ ನೀಡಿದ್ದಾರೆ.

ಇದೇ ವೇಳೆ ಜಾರಕಿಹೊಳಿ ಸಹೋದರರ ಅಸಮಾಧಾನ ಶಮನ ಮಾಡುವ ಹೊಣೆಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮಾಜಿ ಸಿಎಂ ಸಿದ್ದರಾಮಯ್ಯ ಹೆಗಲಿಗೇರಿಸಿದ್ದಾರೆ. ಆದರೆ ಅವರ ಜತೆ ಮಾತನಾಡಲು ನಮಗೆ ಯಾವುದೇ ವಿಷಯಗಳಿಲ್ಲ. ಒಂದು ವೇಳೆ ಮಾತುಕತೆಗೆ ಕರೆದರೆ ಹೋಗುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಿಚ್ಚೇದನ ಸಂದರ್ಭದಲ್ಲಿ ಪತಿಯಿಂದ ಶೀನಾ ಬೋರಾ ಕೊಲೆ ಆರೋಪಿ ಇಂದ್ರಾಣಿ ಮುಖರ್ಜಿ ಬೇಡಿಕೆ ಇಟ್ಟಿದ್ದು ಏನು ಗೊತ್ತಾ?