Select Your Language

Notifications

webdunia
webdunia
webdunia
webdunia

ಭಾರತೀಯ ಯೋಧನ ಕತ್ತು ಸೀಳಿದ ಪಾಕ್: ಗಡಿಯಲ್ಲಿ ಉದ್ವಿಗ್ನ

ಭಾರತೀಯ ಯೋಧನ ಕತ್ತು ಸೀಳಿದ ಪಾಕ್: ಗಡಿಯಲ್ಲಿ ಉದ್ವಿಗ್ನ
ನವದೆಹಲಿ , ಗುರುವಾರ, 20 ಸೆಪ್ಟಂಬರ್ 2018 (08:51 IST)
ನವದೆಹಲಿ: ಪಾಕಿಸ್ತಾನ ಮತ್ತೊಮ್ಮೆ ಭಾರತೀಯ ಯೋಧನ ಮೇಲೆ ಪೈಶಾಚಿಕ ಕೃತ್ಯ ಮೆರೆದಿದ್ದು, ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಬಿಎಸ್ ಎಫ್ ಯೋಧ ನರೇಂದ್ರ ಕುಮಾರ್ ಅವರ ಕತ್ತು ಸೀಳಿ, ಕಣ್ಣುಗಳನ್ನು ಚುಚ್ಚಿ ತೆಗೆದಿದ್ದು, 3 ಬಾರಿ ಗುಂಡು ಹಾರಿಸಿ ಪೈಶಾಚಿಕವಾಗಿ ಹಿಂಸಿಸಿ ಹತ್ಯೆ ಮಾಡಲಾಗಿದೆ.

ಜಮ್ಮು ಕಾಶ್ಮೀರದ ರಾಮಗಢ ಪ್ರದೇಶದ ಗಡಿ ಭಾಗದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಿಂದ ಸಿಟ್ಟಿಗೆದ್ದಿರುವ ಭಾರತ, ಪಾಕ್ ಸರ್ಕಾರದ ಜತೆಗೆ ಈ ವಿಷಯವನ್ನು ಪ್ರಸ್ತಾಪಿಸಲಿದೆ. ಗಡಿ ಭಾಗದಲ್ಲಿ ತಲೆಯೆತ್ತರಕ್ಕೆ ಬೆಳೆದಿದ್ದ ಹುಲ್ಲು ತೆಗೆಯಲು ಬಿಎಸ್ ಎಫ್ ಯೋಧರ ತಂಡ ಹೋಗಿದ್ದಾಗ ಪಾಕ್ ಪಡೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಈ ಪೈಶಾಚಿಕತೆ ಮೆರೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ವಾಟರ್ ಪೈಪ್ ಹಾಕಿ ಕಿರುಕುಳ ನೀಡಿದ ಕಾಮುಕ