Select Your Language

Notifications

webdunia
webdunia
webdunia
webdunia

ವ್ಯಾಟ್ಸಪ್ ಹಾದಿಯಲ್ಲೇ ಫೇಸ್ ಬುಕ್ ಮಾಡಲಿದೆ ಈ ಬದಲಾವಣೆ

ವ್ಯಾಟ್ಸಪ್ ಹಾದಿಯಲ್ಲೇ ಫೇಸ್ ಬುಕ್ ಮಾಡಲಿದೆ ಈ ಬದಲಾವಣೆ
ನವದೆಹಲಿ , ಶುಕ್ರವಾರ, 13 ಜುಲೈ 2018 (09:11 IST)
ನವದೆಹಲಿ: ಇತ್ತೀಚೆಗಷ್ಟೇ ಸುಳ್ಳು ಸುದ್ದಿ ತಡೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ ಹಿನ್ನಲೆಯಲ್ಲಿ ವ್ಯಾಟ್ಸಪ್ ಹೊಸ ಫೀಚ್ ಅಳವಡಿಸಿತ್ತು. ಇದೀಗ ಅದರ ಮಾತೃ ಸಂಸ್ಥೆ ಫೇಸ್ ಬುಕ್ ಕೂಡಾ ಅದೇ ಕ್ರಮ ಕೈಗೊಳ್ಳಲಿದೆ.

ಸುಳ್ಳು ಸುದ್ದಿ ಪತ್ತೆಗೆ ವ್ಯಾಟ್ಸಪ್ ನಲ್ಲಿ ಇನ್ನು ಮುಂದೆ ಫಾರ್ವರ್ಡ್ ಸಂದೇಶಗಳು, ಫಾರ್ವರ್ಡ್ ಎಂಬ ಸೂಚನೆಯೊಂದಿಗೆ ಹರಿದಾಡಲಿದೆ. ಇದೇ ರೀತಿ ಫೇಸ್ ಬುಕ್ ಕೂಡಾ ಇದೀಗ ತನ್ನ ಮೆಸೆಂಜರ್ ಆಪ್ ನಲ್ಲಿ ಸುಳ್ಳು ಸುದ್ದಿ ತಡೆಗೆ ಬದಲಾವಣೆ ತರಲು ಉದ್ದೇಶಿಸಿದೆ.

ಇದಕ್ಕಾಗಿ ಹೊಸ ಫೀಚರ್ ಗಳನ್ನು ಅಳವಡಿಸುವ ಪ್ರಯತ್ನದಲ್ಲಿದೆ. ಈಗಾಗಲೇ ಫೇಸ್ ಬುಕ್ ಫಾರ್ವರ್ಡ್ ಸಂದೇಶಗಳನ್ನು ಟ್ಯಾಗ್ ಮಾಡುವ ಪದ್ಧತಿ ಅಳವಡಿಸಿಕೊಂಡಿದೆ. ಅದರ ಜತೆಗೆ ನಕಲಿ ಖಾತೆಯನ್ನೂ ಪತ್ತೆ ಹಚ್ಚಬಹುದಾದ ತಂತ್ರಜ್ಞಾನ ಅಳವಡಿಸಲು ಪ್ರಯತ್ನ ನಡೆಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮದೇ ಸರ್ಕಾರದವರನ್ನು ತೃಪ್ತಿಪಡಿಸದವರು ಜನರಿಗೆ ಹೇಗೆ ನಮ್ಮದಿ ಕೊಡುತ್ತಾರೆ? ಬಿಎಸ್ ವೈ ಟಾಂಗ್