Webdunia - Bharat's app for daily news and videos

Install App

ಏಕಾಂಗಿ ಯುವತಿಯರೆ ಚಿಂತಿಸಬೇಡಿ; ಇಲ್ಲಿ ಬಾಯ್ ಫ್ರೆಂಡ್ ಬಾಡಿಗೆಗೆ ಸಿಗಲಿದ್ದಾರೆ!

Webdunia
ಗುರುವಾರ, 30 ಆಗಸ್ಟ್ 2018 (14:53 IST)
ಬೆಂಗಳೂರು : ಬಾಯ್ ಫ್ರೆಂಡ್ ಇಲ್ದೆ ಒಂಟಿತನದಿಂದ ಖಿನ್ನತೆಗೆ ಒಳಗಾಗಿರುವ ಹುಡುಗಿಯರು ಇನ್ನುಮುಂದೆ ಚಿಂತಿಸುವ ಅಗ್ಯವಿಲ್ಲ. ಯಾಕೆಂದರೆ ಇನ್ಮುಂದೆ ಬಾಯ್ ಫ್ರೆಂಡ್ಸ್ ಬಾಡಿಗೆಗೆ ಸಿಗುವ ಹೊಸ ಆ್ಯಪ್ ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.


ಇತ್ತೀಚೆಗೆ ಭಾರತದ ಕೌಶಲ್ ಪ್ರಕಾಶ್ ಎಂಬಾತ ರೆಂಟ್ ಎ ಬಾಯ್ ಫ್ರೆಂಡ್ (RABF) ಹೆಸರಿನ ಆ್ಯಪ್ ನ್ನು ಸಿದ್ದಪಡಿಸಿ ಬಿಡುಗಡೆ ಮಾಡಿದ್ದಾರೆ. ಸದ್ಯಕ್ಕೆ ಮುಂಬೈ ಹಾಗೂ ಪುಣೆಯಲ್ಲಿ ಈ ಆ್ಯಪ್ ಕಾರ್ಯನಿರ್ವಹಿಸುತ್ತಿದ್ದು, ಹುಡುಗಿಯರಲ್ಲಿ ಒಂಟಿತನ ಹಾಗೂ ಖಿನ್ನತೆ ಕಡಿಮೆ ಮಾಡುವುದು ಈ ಆ್ಯಪ್ ಉದ್ದೇಶವಾಗಿದೆ.


ಬಾಯ್ ಫ್ರೆಂಡ್ ಇಲ್ದೆ ಇರುವ ಹುಡುಗಿಯರು ಈ ಆ್ಯಪ್ ನಲ್ಲಿ ಸೇರಿಕೊಂಡು ಉಪಹಾರ, ಊಟ, ಪಾರ್ಟಿಗಳಿಗೆ ಬಾಡಿಗೆ ಬಾಯ್ ಫ್ರೆಂಡ್ ಕರೆದುಕೊಂಡು ಹೋಗಬಹುದು. ಹುಡುಗಿಯರ ಜೊತೆ ಬರುವ ಬಾಡಿಗೆ ಹುಡುಗ್ರು ಯಾವುದೇ ಖಾಸಗಿ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಹಾಗೆ ಶಾರೀರಿಕ ಸಂಬಂಧ ಬೆಳೆಸುವುದಿಲ್ಲ. ಹುಡುಗಿಯರ ಖಿನ್ನತೆ ದೂರ ಮಾಡುವುದು ಮಾತ್ರ ಅವ್ರ ಉದ್ದೇಶವಾಗಿರುತ್ತದೆ. 22-25 ವರ್ಷದೊಳಗಿನ ಹುಡುಗ್ರು ಇದ್ರಲ್ಲಿ ಕೆಲಸ ಮಾಡಲಿದ್ದಾರೆ. ಹುಡುಗಿಯರು ಮನೋವೈದ್ಯರ ಜೊತೆಯೂ ಮಾತನಾಡಬಹುದು. 15-20 ನಿಮಿಷದ ಮಾತಿಗೆ 500 ರೂಪಾಯಿ ನೀಡಬೇಕಾಗುತ್ತದೆ.


ದೇಶದಲ್ಲಿ ಹೆಚ್ಚಿನ ಪ್ರಮಾಣದ ಹುಡುಗಿಯರು ಬಾಯ್ ಫ್ರೆಂಡ್ ಇಲ್ಲದೇ ಏಕಾಂಗಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ 'ರೆಟ್ ಎ ಬಾಯ್ ಫ್ರೆಂಡ್' (RABF) ಆಪ್‌ ಮೂಲಕ ಅವರಿಗೆ ಸಂಗತಿಯನ್ನು ಹುಡುಕಿಕೊಡುವ ಪ್ರಯತ್ನವಾಗುತ್ತಿದೆ. ಈ ಆಪ್ ಲಾಂಚ್ ಆಗಿ ಕೆಲವೇ ಗಂಟೆಗಳು ಕಳೆದಿದ್ದು, ಆಗಲೇ ವೈರಲ್ ಆಗಿದೆ. ನೀವು ಬಾಯ್ ಫ್ರೆಂಡ್ ಹುಡುಕುತ್ತಿದ್ದರೇ ಇದೊಂದು ಉತ್ತಮ ಆಪ್ ಎನ್ನಬಹುದಾಗಿದೆ. ಅಲ್ಲದೇ  ಸೆಕ್ಯೂರ್, ಸೇಪ್ಟಿ, ಸೆಕ್ಯೂರಿಟಿ ಮತ್ತು ಸಾಟಿಸಿಫಾಷನ್ ಎಂಬ ನಾಲ್ಕು ಪದಗಳಿಗೆ ಈ ಆ್ಯಪ್ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಇದರಿಂದಾಗಿ ಸುಲಭವಾಗಿ ಆಪ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
 


ಈ ಆ್ಯಪ್ ಲಾಗಿನ್ ಆಗುವುದು ಹೇಗೆ?
ಮೊದಲು ಪ್ಲೇ ಸ್ಟೋರಿನಲ್ಲಿ ಆಪ್ ಅನ್ನು ಡೌನ್‌ ಲೋಡ್ ಮಾಡಿಕೊಳ್ಳಬೇಕು. ನಂತರ ಬಾಯ್ ಫ್ರೆಂಡ್ ನಲ್ಲಿ ರಿಜಿಸ್ಟರ್ ಆಗಬೇಕು . ಇದಾದನಂತರ ಫೋಟೋ ಆಪ್ ಲೋಡ್ ಮಾಡಬೇಕು. ನಂತರದಲ್ಲಿ ನಿಮ್ಮ ಫೊಟೋ ಲೀಕ್ ಮಾಡಿದ ಮೇಲೆ ಮ್ಯಾಚಿಂಗ್ ಆಗಲಿದೆ. ಆದ ನಂತರ ಮಿಟ್ ಮಾಡಲು ಒಂದು ಲೋಕೇಷನ್ ಫಿಕ್ಸ್ ಮಾಡಿ ಆಮೇಲೆ ಮಿಟ್ ಆಗಬೇಕು.


ಈ ಆ್ಯಪ್ ನಲ್ಲಿರುವ ಬಾಯ್ ಫ್ರೆಂಡ್ಸ್ ಯಾರು?
ನೀವು ಬಾಡಿಗೆಗೆ ಪಡೆಯುವ ಬಾಯ್ ಫ್ರೆಂಡ್ ಗಳಲ್ಲಿ ಮಾಡಲ್‌ಗಳು, ಸೆಲೆಬ್ರಿಟಿಗಳು ಹಾಗೂ ಆಮ್ ಆದ್ಮಿಯನ್ನು ಇರುತ್ತಾರೆ. ಅವರಲ್ಲಿ  ನಿಮಗೆ ಬೇಕಾದವರನ್ನು ನೀವೇ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.
ಅಲ್ಲದೇ ಬಾಯ್‌ ಫ್ರೆಂಡ್ ಅನ್ನು ಬಾಡಿಗೆಗೆ ಪಡೆದವರು ಹೊರಗೆ ಸುತ್ತಾಡಿಸುವುದಲ್ಲದೇ, ಇದಕಾಗಿ ಹಣವನ್ನು ನೀಡುತ್ತಾರೆ ಎನ್ನಲಾಗಿದೆ. ಆದ್ದರಿಂದ  ಪಾರ್ಟ್ ಟೈಮ್‌ನಲ್ಲಿ ಹಣಗಳಿಸಬೇಕು ಎನ್ನುವ ಹುಡುಗರಿಗೆ ಇದು  ಭರ್ಜರಿ ಆಫರ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments