Select Your Language

Notifications

webdunia
webdunia
webdunia
webdunia

ಈಗಿರುವ ನಿಯಮ ಸೂಕ್ತವಾಗಿದೆ. ಇದನ್ನು ಬದಲಿಸುವ ಅಗತ್ಯವೇನಿದೆ?- ವಿಕ್ಟರ್‌ ಆ್ಯಕ್ಸಲ್‌ಸನ್‌

ಈಗಿರುವ ನಿಯಮ ಸೂಕ್ತವಾಗಿದೆ. ಇದನ್ನು ಬದಲಿಸುವ ಅಗತ್ಯವೇನಿದೆ?- ವಿಕ್ಟರ್‌ ಆ್ಯಕ್ಸಲ್‌ಸನ್‌
ಬ್ಯಾಂಕಾಕ್ , ಭಾನುವಾರ, 20 ಮೇ 2018 (16:38 IST)
ಬ್ಯಾಂಕಾಕ್‌: ಆಟಗಾರರು ಮತ್ತು ಬ್ಯಾಡ್ಮಿಂಟನ್‌ ಸಂಸ್ಥೆಗಳ ವಿರೋಧದ ಕಾರಣದಿಂದಾಗಿ ವಿಶ್ವ ಬ್ಯಾಡ್ಮಿಂಟನ್‌ ಸಂಸ್ಥೆ ಹೊಸ ಸ್ಕೋರಿಂಗ್‌ ಯೋಜನೆಯನ್ನು ಕೈಬಿಟ್ಟಿದೆ.


ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಕ್ರೀಡಾಂಗಣದತ್ತ ಸೆಳೆಯುವ ಉದ್ದೇಶದಿಂದ ಬಿಡಬ್ಲ್ಯುಎಫ್‌, ಈಗಿರುವ 21 ಪಾಯಿಂಟ್ಸ್‌ಗಳ ಮೂರು ಸೆಟ್‌ಗಳ ನಿಯಮದ ಬದಲಾಗಿ 11 ಪಾಯಿಂಟ್ಸ್‌ಗಳ ಐದು ಸೆಟ್‌ಗಳ ನಿಯಮ ಜಾರಿಗೆ ತರಲು ನಿರ್ಧರಿಸಿತ್ತು.
‘ಹೊಸ ಯೋಜನೆಯ ಅನ್ವಯ 11 ಪಾಯಿಂಟ್ಸ್‌ಗಳ ಐದು ಸೆಟ್‌ಗಳನ್ನು ಆಡಬೇಕಾಗುತ್ತದೆ. ಇದರಿಂದ ಆಟಗಾರರು ಸುಸ್ತಾಗುತ್ತರೆ. ಪ್ರೇಕ್ಷಕರಲ್ಲೂ ಇದು ನಿರಾಸಕ್ತಿ ಮೂಡಿಸುತ್ತದೆ. ಈಗಿರುವ ನಿಯಮ ಸೂಕ್ತವಾಗಿದೆ. ಇದನ್ನು ಬದಲಿಸುವ ಅಗತ್ಯವೇನಿದೆ’ ಎಂದು ಡೆನ್ಮಾರ್ಕ್‌ನ ಆಟಗಾರ ವಿಕ್ಟರ್‌ ಆ್ಯಕ್ಸಲ್‌ಸನ್‌ ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಕ್ರಿಕೆಟಿಗರ ವಿರುದ್ಧ ಮಾರ್ಕ್ ವಾ ಗರಂ