ಸಾನಿಯಾ ಮಿರ್ಜಾ ಮಗುವಿನ ಹೆಸರಿನ ಹಿಂದಿದೆ ಜಾಣ್ಮೆಯ ಲೆಕ್ಕಾಚಾರ!

ಬುಧವಾರ, 31 ಅಕ್ಟೋಬರ್ 2018 (09:36 IST)
ಹೈದರಾಬಾದ್: ನಿನ್ನೆಯಷ್ಟೇ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ
ಗಂಡು ಮಗುವಿಗೆ ಜನ್ಮ ನೀಡಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕ್ ಕ್ರಿಕೆಟಿಗ ಸೊಯೇಬ್ ಮಲಿಕ್ ದಂಪತಿ ತಮ್ಮ ಮಗುವಿಗೆ ಇಜಾನ್ ಎಂದು ಹೆಸರಿಟ್ಟಿದ್ದಾರೆ.

ಇಜಾನ್ ಎಂದರೆ ದೇವರ ಕೊಡುಗೆ ಎಂದು ಅರ್ಥ. ಆದರೆ ಈ ಮಗು ಭಾರತೀಯನೋ, ಪಾಕಿಸ್ತಾನಿಯೋ ಎಂದು ಗೊಂದಲ ಬೇಡ ಎಂದು ಸಾನಿಯಾ ದಂಪತಿ ಮಗುವಿನ ಹೆಸರಿನ ಮುಂದೆ ತಮ್ಮಿಬ್ಬರ ಸರ್ ನೇಮ್ ಗಳನ್ನೂ ಇಟ್ಟಿದ್ದಾರೆ.

ಹೀಗಾಗಿ ಇಜಾನ್ ಹೆಸರಿನ ಜತೆಗೆ ಮಿರ್ಜಾಮಲಿಕ್ ಎಂಬ ಸರ್ ನೇಮ್ ಬರಲಿದೆ. ಇದೊಂದು ಜಾಣ್ಮೆಯ ನಡೆಯಾಗಿದ್ದು, ಮಗುವಿನ ಹೆಸರಿನ ವಿಚಾರದಲ್ಲಿ ಇನ್ನು ಯಾರೂ ಅನಗತ್ಯ ವಿವಾದ ಎಬ್ಬಿಸುವಂತೆಯೇ ಇಲ್ಲ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ನಾನು ಕ್ಯಾಚಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದರೆ ಕೊಹ್ಲಿ ನಗುತ್ತಿದ್ದರು ಎಂದ ರೋಹಿತ್ ಶರ್ಮಾ