Select Your Language

Notifications

webdunia
webdunia
webdunia
webdunia

ಹುಟ್ಟಲಿರುವ ತಮ್ಮ ಮೊದಲ ಮಗುವಿಗೆ ಆಗಲೇ ಹೆಸರಿಟ್ಟಿದ್ದಾರಂತೆ ಸಾನಿಯಾ ಮಿರ್ಜಾ

ಹುಟ್ಟಲಿರುವ ತಮ್ಮ ಮೊದಲ ಮಗುವಿಗೆ ಆಗಲೇ ಹೆಸರಿಟ್ಟಿದ್ದಾರಂತೆ ಸಾನಿಯಾ ಮಿರ್ಜಾ
ಹೈದರಾಬಾದ್ , ಬುಧವಾರ, 5 ಸೆಪ್ಟಂಬರ್ 2018 (09:18 IST)
ಹೈದರಾಬಾದ್: ಮುಂದಿನ ತಿಂಗಳ ಕೊನೆಯಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ಆ ಮಗುವಿಗೆ ಈಗಾಗಲೇ ಹೆಸರೇನೆಂದು ನಿರ್ಧರಿಸಿದ್ದಾರಂತೆ!

ಹುಟ್ಟಲಿರುವುದು ಹೆಣ್ಣೋ, ಗಂಡು ಮಗುವೋ ಗೊತ್ತಿಲ್ಲ. ಆದರೆ ಈಗಾಗಲೇ ಸಾನಿಯಾ-ಶೊಯೇಬ್ ತಮ್ಮ ಮಗುವಿಗೆ ಏನೆಂದು ಹೆಸರಿಡಬೇಕೆಂದು ನಿರ್ಧರಿಸಿದ್ದಾರಂತೆ. ಹಾಗಂತ ಅಭಿಮಾನಿಯೊಬ್ಬರು  ಸೋಷಿಯಲ್ ಮೀಡಿಯಾದಲ್ಲಿ ಕೇಳಿದ ಪ್ರಶ್ನೆಗೆ ಸಾನಿಯಾ ಉತ್ತರಿಸಿದ್ದಾರೆ.

  ಆದರೆ ನಿಮ್ಮ ಮಗುವಿಗೆ ಏನೆಂದು ಹೆಸರಿಡುತ್ತೀರಿ ಎಂದಿದ್ದಕ್ಕೆ ಅದು ಸೀಕ್ರೆಟ್ ಎಂದು ನಕ್ಕಿದ್ದಾರೆ ಸಾನಿಯಾ. ಈ ಮೂಲಕ ತಾವು ನಿರ್ಧರಿಸಿರುವ ಹೆಸರೇನೆಂದು ಬಹಿರಂಗಪಡಿಸಿಲ್ಲ. ಅಷ್ಟೇ ಅಲ್ಲ ತಮ್ಮ ತಾಯ್ತನವನ್ನು ಸಂಭ್ರಮಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ಜತೆ ಡೇಟಿಂಗ್ ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು?