ತಯಾರಿಸಿ ನೋಡಿ ಆರೋಗ್ಯಕರ ಪಾಲಕ್ ದೋಸಾ

ಸೋಮವಾರ, 15 ಅಕ್ಟೋಬರ್ 2018 (18:20 IST)
ಬೇಕಾಗುವ ಸಾಮಗ್ರಿಗಳು
 
1 ಕಟ್ಟು ಪಾಲಕ್ ಸೊಪ್ಪು (ಸ್ವಚ್ಛಗೊಳಿಸಿ, ಹೆಚ್ಚಿರಬೇಕು)
1 ಕಪ್ - ಹುರಿದ ರವಾ
3-4 ಚಮಚ ತೆಂಗಿನ ತುರಿ
1 ಕಪ್ - ಮೊಸರು
ಉಪ್ಪು
ಎಣ್ಣೆ
1/2 ಚಮಚ ಜೀರಿಗೆ
1/2 ಚಮಚ ಸಕ್ಕರೆ
 
ಮಾಡುವ ವಿಧಾನ
 
* ಒಂದು ಬೌಲ್‌ನಲ್ಲಿ ಹುರಿದ ರವಾ, ಸ್ವಚ್ಛಗೊಳಿಸಿ ಹೆಚ್ಚಿದ ಪಾಲಕ್ ಸೊಪ್ಪು, ತೆಂಗಿನ ತುರಿ, ಮೊಸರು, ಉಪ್ಪು, ಜೀರಿಗೆ ಮತ್ತು ಸಕ್ಕರೆ ಸೇರಿಸಿ ಬೇಕಾದಷ್ಟು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಚೆನ್ನಾಗಿ ಮಿಶ್ರಣ ಮಾಡಿ. 
 
* ತವಾಗೆ ಎಣ್ಣೆ ಸವರಿ ಹಿಟ್ಟನ್ನು ಸುರಿದು ಎರಡೂ ಬದಿಯಲ್ಲಿ ಹುರಿದು, ತೆಂಗಿನ ಕಾಯಿ ಚಟ್ನಿ ಜೊತೆ ಬಿಸಿಬಿಸಿಯಾಗಿ ಸವಿಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಓಟ್ಸ್ ಕಿಚಡಿ