Select Your Language

Notifications

webdunia
webdunia
webdunia
webdunia

ಮಂಡಕ್ಕಿ ಚಿತ್ರಾನ್ನ

ಮಂಡಕ್ಕಿ ಚಿತ್ರಾನ್ನ
ಬೆಂಗಳೂರು , ಶುಕ್ರವಾರ, 14 ಸೆಪ್ಟಂಬರ್ 2018 (13:56 IST)
ದಿನಾ ಮುಂಜಾನೆ ಒಂದೇ ರೀತಿಯ ಉಪಹಾರ ಮಾಡಿ ಬೇಸರವಾಗಿದ್ಯಾ, ಕಡಿಮೆ ಸಮಯದಲ್ಲಿ ರುಚಿ ರುಚಿಯಾದ ಬ್ರೇಕ್‌ಫಾಸ್ಟ್ ಮಾಡಿ ಸವಿಯಬೇಕು ಎನಿಸಿದರೆ ಮಂಡಕ್ಕಿ ಚಿತ್ರಾನ್ ಉತ್ತಮ ಆಯ್ಕೆ ಎನ್ನಬಹುದು ಇದು ತಿನ್ನಲು ತುಂಬಾ ರುಚಿಯಾಗಿದ್ದು ಸಂಜೆ ಚಹ ಸೇವನೆಯ ಸಮಯದಲ್ಲೂ ಇದು ಉತ್ತಮ ಕಾಂಬಿನೇಶ್ ಎಂದರೆ ತಪ್ಪಾಗಲಾರದು
ಬೇಕಾಗುವ ಸಾಮಗ್ರಿಗಳು:
 
ಮಂಡಕ್ಕಿ – 2 ದೊಡ್ಡ ಲೋಟ (2 ಪಾವು)
ಈರುಳ್ಳಿ – 2
ಟೊಮೊಟೊ – 1 (ದೊಡ್ಡ ಗಾತ್ರದ್ದು)
ಹಸಿಮೆಣಸು – 4-5
ಜೀರಿಗೆ – 1/4 ಚಮಚ
ಶೇಂಗಾ ಬೀಜ – 3 ಚಮಚ
ಸಾಸಿವೆ – 1/4 ಚಮಚ
ಲಿಂಬೆಹಣ್ಣು – 1/2
ಕರಿಬೇವು – 8-10 ಎಸಳು
 
ಮಾಡುವ ಬಗೆ:
 
ಒಂದು ಬಾಣಲೆಗೆ 3-4 ಚಮಚದಷ್ಟು ಎಣ್ಣೆಯನ್ನು ಹಾಕಿ ಅದು ಕಾದ ನಂತರ ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಶೇಂಗಾಬೀಜ, ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಹದವಾಗಿ ಬಾಡಿಸಿಕೊಳ್ಳಿ. ನಂತರ ಅದಕ್ಕೆ ಟೊಮೊಟೊ, ಸ್ವಲ್ಪ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬಾಡಿಸಿ, ತದನಂತರ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಮಂಡಕ್ಕಿಯನ್ನು ಅದ್ದಿ ತಕ್ಶಣ ತೆಗೆದು ಅದಕ್ಕೆ ಮೊದಲೇ ತಯಾರಿಸಿಕೊಂಡಿರುವ ವಿಶ್ರಣವನ್ನು ಹಾಕಿ ಒಗ್ಗರಣೆಗೆ ಹಾಕಿ, ನಿಂಬೆಹಣ್ಣನ್ನು ಹಿಂಡಿ ಚೆನ್ನಾಗಿ ಕಲಸಿದರೆ ಮಂಡಕ್ಕಿ ಚಿತ್ರಾನ್ನ ಸವಿಯಲು ಸಿದ್ದ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಡೆಕಾಯಿ ಕುರ್‌ಕುರೇ