Select Your Language

Notifications

webdunia
webdunia
webdunia
webdunia

ಕೋಡುಬಳೆ

ಕೋಡುಬಳೆ
ಬೆಂಗಳೂರು , ಬುಧವಾರ, 14 ನವೆಂಬರ್ 2018 (15:29 IST)
ಚಾಟ್ಸ್ ಎಂದರೆ ಎಲ್ಲಾ ವಯೋಮಾನದವರಿಗೂ ಇಷ್ಟಾನೇ. ಅದರಲ್ಲಿಯೂ ಸಂಜೆಯ ವೇಳೆ ಟೀ ಅಥವಾ ಕಾಫಿಯ ಜೊತೆಗೆ ಬಿಸಿಬಿಸಿಯಾಗಿ ತಿನ್ನಲು ಬಯಸುವವರೇ ಜಾಸ್ತಿ. ಇಂತಹ ತಿಂಡಿಗಳ ಪಟ್ಟಿಗೆ ಕೋಡುಬಳೆಯೂ ಸೇರಿಕೊಳ್ಳುತ್ತದೆ. ಕೋಡುಬಳೆಯನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು.
ತಯಾರಿಸಲು ಬೇಕಾಗುವ ಸಾಮಗ್ರಿಗಳು :
 
* ಅಕ್ಕಿ ಹಿಟ್ಟು 1/2 ಕಪ್
* ಚಿರೋಟಿ ರವೆ 1/4 ಕಪ್
* ಮೈದಾ ಹಿಟ್ಟು 1/2 ಕಪ್
* ಅಜವಾನ 1/2 ಚಮಚ
* ಚಿಟಿಕೆಯಷ್ಟು ಇಂಗು
* ಎಣ್ಣೆ 
* ಉಪ್ಪು
* ತೆಂಗಿನತುರಿ 1/4 ಕಪ್
* ಜೀರಿಗೆ 1/2 ಚಮಚ
* ಒಣಮೆಣಸಿನಕಾಯಿ
* ನೀರು 1/4 ಕಪ್
 
ತಯಾರಿಸುವ ವಿಧಾನ :
 
 ಮೊದಲು ತೆಂಗಿನತುರಿ, ಜೀರಿಗೆ, ಒಣಮೆಣಸಿನಕಾಯಿ (ಎಷ್ಚು ಬೇಕೋ ಅಷ್ಟು) ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ, ಇಂಗು, ಅಜವಾನವನ್ನು ಹಾಕಬೇಕು. ಇದಕ್ಕೆ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಈಗಾಗಲೇ ರುಬ್ಬಿಕೊಂಡ ಮಿಶ್ರಣವನ್ನು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಚೆನ್ನಾಗಿ ನಾದಬೇಕು.

ನಂತರ ಕೈಯಲ್ಲಿ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ತೆಗೆದುಕೊಂಡು ಒಂದೇ ರೀತಿಯಲ್ಲಿ ಉಜ್ಜುತ್ತಾ ಹೋಗಬೇಕು. ನಂತರ ಅದನ್ನು ಬಳೆಯ ಆಕಾರವನ್ನು ಮಾಡಬೇಕು. ನಂತರ ಎಣ್ಣೆಯನ್ನು ಬಿಸಿ ಮಾಡಿ ತಯಾರಿಸಿಕೊಂಡ ಕೋಡುಬಳೆಯನ್ನು ಎಣ್ಣೆಯಲ್ಲಿ ಹಾಕಿ ಎರಡೂ ಬದಿಯಲ್ಲಿ ಕೆಂಬಣ್ಣ ಬರುವವರೆಗೆ ಬೇಯಿಸಿದರೆ ಗರಿಗರಿಯಾದ ಕೋಡುಬಳೆಯು ಸವಿಯಲು ಸಿದ್ಧ.  

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿಗೆ ಸ್ಪೆಷಲ್ ಹಾಲುಬಾಯಿಗಳು