Select Your Language

Notifications

webdunia
webdunia
webdunia
webdunia

ಮಸಾಲ್ ಪುರಿ ಮಾಡುವುದು ಹೇಗೆ ಗೊತ್ತಾ?

ಮಸಾಲ್ ಪುರಿ ಮಾಡುವುದು ಹೇಗೆ ಗೊತ್ತಾ?
Bangalore , ಗುರುವಾರ, 15 ಡಿಸೆಂಬರ್ 2016 (11:57 IST)
ಬೆಂಗಳೂರು: ರೋಡ್ ಸೈಡ್ ಸಿಗುವ ಮಸಾಲ್ ಪುರಿ ಎಷ್ಟು ಇಷ್ಟಪಟ್ಟು ತಿನ್ನುತ್ತೇವೆ. ಅದನ್ನು ತಿಂದರೆ ಹೊಟ್ಟೆ ಹಾಳಾಗುತ್ತದೆ ಎಂದು ಕೊರಗುವವರಿಗೆ ಇಲ್ಲಿದೆ ರೆಸಿಪಿ.

ಬೇಕಾಗುವ ಸಾಮಗ್ರಿಗಳು

ಕಾಯಿ ತುರಿ
ಕಾಳು ಮೆಣಸು
ಕೆಂಪು ಮೆಣಸು
ಜೀರಿಗೆ
ಧನಿಯಾ
ಚಕ್ಕೆ
ಲವಂಗ
ಜಾಯಿಕಾಯಿ
ಆಲೂಗಡ್ಡೆ
ತೊಗರಿ ಬೇಳೆ
ಟೊಮೆಟೋ
ಈರುಳ್ಳಿ
ಸೇಮಿಗೆ
ಬಿಳಿ ಬಟಾಣಿ
ಗೋಧಿ ಹುಡಿ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:
ಬಿಳಿ ಬಟಾಣಿ ಕಾಳನ್ನು 2 ಗಂಟೆ ಕಾಲ ನೆನೆ ಹಾಕಿ. ಗೋಧಿ ಹುಡಿ ಚಪಾತಿ ಹದಕ್ಕೆ ಕಲಸಿಕೊಂಡು ತುಕ್ಕುಡಿ ತಯಾರಿಸಿಕೊಳ್ಳಿ. ಒಂದು ಕುಕ್ಕರ್ ನಲ್ಲಿ ತೊಗರಿ ಬೇಳೆ, ಆಲೂಗಡ್ಡೆ ಮತ್ತು ಬಟಾಣಿ ಕಾಳನ್ನು ಬೇಯಿಸಿಕೊಳ್ಳಿ. ಒಂದು ಬಾಣಲೆಯಲ್ಲಿ ಜೀರಿಗೆ, ಒಂದು ಕೆಂಪು ಮೆಣಸು, ಧನಿಯಾ ಕಾಳು, ಲವಂಗ, ಕಾಳು ಮೆಣಸು, ಚಕ್ಕೆ, ಜಾಯಿ ಕಾಯಿ ಎಣ್ಣೆ ಹಾಕದೆ ಹುರಿದು ಪ್ರತ್ಯೇಕವಾಗಿಟ್ಟುಕೊಳ್ಳಿ. ನಂತರ ಸ್ವಲ್ಪವೇ ಕಾಯಿತುರಿಯನ್ನೂ ಹುರಿದಿಟ್ಟುಕೊಳ್ಳಿ.

ಹುರಿದ ವಸ್ತುಗಳನ್ನು ಬೇಯಿಸಿಕೊಂಡ ಆಲೂಗಡ್ಡೆ, ತೊಗರಿಬೇಳೆ ಹಾಗೂ ಟೊಮೆಟೋ, ಈರುಳ್ಳಿ ಜತೆ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಉಪ್ಪು, ಬೇಯಿಸಿದ ಬಟಾಣಿ ಹಾಕಿ ಚೆನ್ನಾಗಿ ಕುದಿಸಿದರೆ ಮಸಾಲೆ ರೆಡಿ.

ನಂತರ ಒಂದು ತಟ್ಟೆಯಲ್ಲಿ ಮೊದಲೇ ಮಾಡಿಟ್ಟುಕೊಂಡ ತುಕ್ಕುಡಿ ಪುಡಿಮಾಡಿ ಅದರ ಮೇಲೆ ಮಸಾಲೆ ಹಾಕಿಕೊಳ್ಳಿ. ಇದರ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೋ, ಸೇಮಿಗೆ, ಕೊತ್ತಂಬರಿ ಸೊಪ್ಪು ಹಾಕಿಕೊಂಡರೆ ಮಸಾಲೆ ಪುರಿ ಸವಿಯಲು ಸಿದ್ಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸತತ 12 ದಿವಸ ಖರ್ಜೂರ ತಿಂದರೆ ದೇಹದಲ್ಲಿ ಏನೆಲ್ಲ ಬದಲಾವಣೆಯಾಗತ್ತೆ ಗೊತ್ತಾ?( ವಿಡಿಯೋ)