Select Your Language

Notifications

webdunia
webdunia
webdunia
webdunia

ರುಚಿಕರ ಅನಾನಸ್ ಹಣ್ಣಿನ ರಸಂ ಮಾಡುವುದು ಹೇಗೆ ಗೊತ್ತಾ?

ರುಚಿಕರ ಅನಾನಸ್ ಹಣ್ಣಿನ ರಸಂ ಮಾಡುವುದು ಹೇಗೆ ಗೊತ್ತಾ?
ಬೆಂಗಳೂರು , ಸೋಮವಾರ, 24 ಸೆಪ್ಟಂಬರ್ 2018 (16:07 IST)
ಬೇಕಾಗುವ ಸಾಮಗ್ರಿ: 
2 ಟೊಮೆಟೊ ಹಣ್ಣು
1/2 ಲೀಟರ್ ಅನಾನಸ್ ಹಣ್ಣಿನ ಜ್ಯೂಸ್
ಸ್ವಲ್ಪ ಕೊತ್ತಂಬರಿ ಸೊಪ್ಪು
2 ಪೇಸ್ಟ್ ಮಾಡಿದ ಹಸಿ ಮೆಣಸಿನಕಾಯಿ
ಉಪ್ಪು
1/2 ಚಮಚ ಧನಿಯಾಪುಡಿ
1 ಲೋಟ ನೀರು
2 ಚಿಟಿಕೆ ಹಿಂಗು
2-3 ಕೆಂಪು ಮೆಣಸಿನಕಾಯಿ
4 ಬೆಳ್ಳುಳ್ಳು ಎಸಳು
ಕರಿಬೇವಿನ ಎಲೆ
2 ಚಮಚ ಎಣ್ಣೆ
1/4 ಚಮಚ ಸಾಸಿವೆ ಕಾಳು
 
ಮಾಡುವ ವಿಧಾನ
* ಒಂದು ಮಿಕ್ಸಿ ಜಾರ್‌ನಲ್ಲಿ ಟೊಮೆಟೊ ಹಣ್ಣು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
 
* ಒಂದು ಬಾಣಲೆಯಲ್ಲಿ ಪೇಸ್ಟ್ ಮಾಡಿದ ಹಸಿ ಮೆಣಸಿನಕಾಯಿ, ಹಿಂಗು, ಧನಿಯಾಪುಡಿ ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ, ನಂತರ ಅದಕ್ಕೆ ಟೊಮೆಟೊ ಹಣ್ಣು, ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿದ ಮಿಶ್ರಣ, ನೀರು, ಅನಾನಸ್ ಹಣ್ಣಿನ ಜ್ಯೂಸ್ ಹಾಕಿ 10 ನಿಮಿಷ ಕುದಿಸಿ
 
* ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ ಕಾಳು, ಕರಿಬೇವಿನ ಎಲೆ, ಬೆಳ್ಳುಳ್ಳು ಎಸಳು, ಕೆಂಪು ಮೆಣಸಿನಕಾಯಿ ಹಾಕಿ ಒಗ್ಗರೆ ತಯಾರಿಸಿ, ಅದನ್ನು ರಸಂನಲ್ಲಿ ಸೇರಿಸಿದರೆ ರುಚಿಕರ ಅನಾನಸ್ ಹಣ್ಣಿನ ರಸಂ ಸವಿಯಲು ಸಿದ್ಧ.

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಕರವಾದ ಬೇಲ್ ಪುರಿ