Select Your Language

Notifications

webdunia
webdunia
webdunia
webdunia

ತಯಾರಿಸಿ ನೋಡಿ ಗೋಧಿ ಹಿಟ್ಟಿನ ಆರೋಗ್ಯಕರ ಲಡ್ಡು

ತಯಾರಿಸಿ ನೋಡಿ ಗೋಧಿ ಹಿಟ್ಟಿನ ಆರೋಗ್ಯಕರ ಲಡ್ಡು
ಬೆಂಗಳೂರು , ಗುರುವಾರ, 4 ಅಕ್ಟೋಬರ್ 2018 (14:43 IST)
ಗೋಧಿ ಹಿಟ್ಟಿನಲ್ಲಿ ಅಗತ್ಯವಾದ ವಿಟಮಿನ್‌ಗಳು​, ಮಿನರಲ್‌ಗಳು​​ ಇರುವುದರಿಂದ ಇದು ಆರೋಗ್ಯಕ್ಕೆ ಉತ್ತಮ. ಅದರಲ್ಲೂ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬನ್ನಿ ಇಂತಹ ಆರೋಗ್ಯಕರ ಗೋಧಿ ಹಿಟ್ಟಿನ ಲಡ್ಡುವನ್ನು ಸುಲಭವಾಗಿ ಮನೆಯಲ್ಲಿ ಮಾಡುವುದು ಹೇಗೆ ಎಂದು ನೋಡೋಣ
ಬೇಕಾಗುವ ಸಾಮಗ್ರಿಗಳು
 
1/2 ಕೆ.ಜಿ. - ಗೋಧಿ ಹಿಟ್ಟು
1/2 ಕೆ.ಜಿ - ಸಕ್ಕರೆ (ಮಿಕ್ಸಿಗೆ ಹಾಕಿ ಪುಡಿ ಮಾಡಿ)
200 ಗ್ರಾಂ ತುಪ್ಪ
ಬಾದಾಮಿ/ಗೋಡಂಬಿ ಚೂರು -  ಕಪ್ (ಐಚ್ಛಿಕ)
 
ಮಾಡುವ ವಿಧಾನ
 
* ಬಾಣಲೆಯಲ್ಲಿ ಗೋಧಿ ಹಿಟ್ಟು ಮತ್ತು ತುಪ್ಪವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ
* ನಂತರ ಹುರಿದ ಗೋಧಿ ಹಿಟ್ಟಿಗೆ ಸಕ್ಕರೆ ಪುಡಿ ಮತ್ತು ಬಾದಾಮಿ/ಗೋಡಂಬಿ ಚೂರು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ
* ಬಿಸಿಯಾಗಿರುವಾಗಲೇ ಉಂಡೆಯನ್ನು ಬಿಗಿಯಾಗಿ ಕಟ್ಟಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಪಾತಿ ಜಾಮೂನು