Select Your Language

Notifications

webdunia
webdunia
webdunia
webdunia

ರುಚಿ ರುಚಿಯಾದ ಖರ್ಜೂರದ ಪಾಯಸ

ರುಚಿ ರುಚಿಯಾದ ಖರ್ಜೂರದ ಪಾಯಸ
ಬೆಂಗಳೂರು , ಬುಧವಾರ, 19 ಸೆಪ್ಟಂಬರ್ 2018 (14:03 IST)
ಬೇಕಾಗುವ ಸಾಮಗ್ರಿಗಳು:
 
ಖರ್ಜೂರ 1/4 ಕಿ ಗ್ರಾಂ
ಹಾಲು 1/2 ರಿಂದ 3/4 ಲೀಟರ್
ಸಕ್ಕರೆ 1/4 ಕಪ್
ತುಪ್ಪ 2 ಚಮಚ
ಗೋಡಂಬಿ 8 ರಿಂದ 10
ದ್ರಾಕ್ಷಿ 10 ರಿಂದ 15
ಉಪ್ಪು 2 ರಿಂದ 3 ಚಿಟಿಕೆ
ಮಾಡುವ ವಿಧಾನ:
 
4 ರಿಂದ 5 ಖರ್ಜೂರವನ್ನು ಬಿಟ್ಟು ಉಳಿದವುಗಳು ಮುಳುಗುವಷ್ಚು ಹಾಲು ಹಾಕಿ 2 ಗಂಟೆಗಳ ಕಾಲ ನೆನೆಸಿಡಬೇಕು. ಎಷ್ಟು ಎಂದರೆ ಅದು ರುಬ್ಬಲು ಆಗುವಷ್ಟು ನೆನೆಯಬೇಕು. ನೆನೆದ ನಂತರ ಅದೇ ಹಾಲು ಹಾಕುತ್ತಾ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಇದನ್ನು ದಪ್ಪ ತಳದ ಪಾತ್ರೆಗೆ ಹಾಕಿ ಉಳಿದ ಹಾಲು, ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಕಲಕಿ ಕುದಿಯಲು ಇಡಬೇಕು. ತಳ ಹಿಡಿಯದಂತೆ ಆಗಾಗ ಕಲುಕುತ್ತಿರಬೇಕು. ನಂತರ ಬೇಕಾದರೆ ಗೋಡಂಬಿ, ದ್ರಾಕ್ಷಿಯನ್ನು ಹುರಿಯಲು ಕಷ್ಟವಾದರೆ ಇದು ಕುದಿಯುವಾಗಲೇ ಹಾಕಬಹುದು.

ನಂತರ ಖರ್ಜೂರವೇ ಸಿಹಿ ಇರುವುದರಿಂದ ಸಕ್ಕರೆ ಸರಿಯಾಗಿದೆಯೇ ಎಂದು ಪರೀಕ್ಷಿಸಬಹುದು. ನಂತರ ಕುದಿಯುತ್ತಿರುವುದು ಸ್ವಲ್ಪ ಗಟ್ಟಿ ಎಂದು ಎನಿಸಿದರೆ ಇನ್ನೂ ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಕುದಿಸಿ ಉರಿಯನ್ನು ಆರಿಸಬೇಕು. ನಂತರ ಮೊದಲೇ ತೆಗೆದಿಟ್ಟ 4 ರಿಂದ 5 ಖರ್ಜೂರವನ್ನು ಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಬೇಕು. ನಂತರ ಗೋಡಂಬಿ, ದ್ರಾಕ್ಷಿ, ಖರ್ಜೂರದ ಹೋಳುಗಳನ್ನು ತುಪ್ಪದಲ್ಲಿ ಹುರಿದು ಪಾಯಸಕ್ಕೆ ಹಾಕಿದರೆ ಬಿಸಿ ಬಿಸಿ ಖರ್ಜೂರದ ಪಾಯಸ ಸವಿಯಲು ಸಿದ್ಧ.

Share this Story:

Follow Webdunia kannada

ಮುಂದಿನ ಸುದ್ದಿ

ನುಗ್ಗೇಕಾಯಿಯ ಆರೋಗ್ಯ ಪ್ರಯೋಜನಗಳು