Select Your Language

Notifications

webdunia
webdunia
webdunia
webdunia

ಸ್ವಾದಿಷ್ಠವಾದ ಫ್ರುಟ್ ಕುಕೀಸ್

ಸ್ವಾದಿಷ್ಠವಾದ ಫ್ರುಟ್ ಕುಕೀಸ್
ಬೆಂಗಳೂರು , ಗುರುವಾರ, 16 ಆಗಸ್ಟ್ 2018 (18:29 IST)
ಬೇಕಾಗುವ ಪದಾರ್ಥಗಳು - 
 
ಮೈದಾ ಹಿಟ್ಟು - 1 ಕಪ್
ಬೆಣ್ಣೆ - 1/2 ಕಪ್
ಸಕ್ಕರೆ - 1/4 ಕಪ್
ಟ್ಯೂಟಿ ಫ್ರುಟಿ - 1/4 ಕಪ್
ಬೇಕಿಂಗ್ ಪುಡಿ - 1/8 ಚಮಚ
ವೆನಿಲ್ಲಾ - 3/4 ಚಮಚ
ಉಪ್ಪು - ಒಂದು ಚಿಟಿಕೆ
ಮಾಡುವ ವಿಧಾನ - 
- ಒಂದು ಬಟ್ಟಲಿನಲ್ಲಿ, ಮೃದುವಾಗುವ ತನಕ ಬೆಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ, ಪುಡಿ ಮಾಡಿದ ಸಕ್ಕರೆಯನ್ನು ಬೆಣ್ಣೆಗೆ ಸೇರಿಸಿ ಕೆನೆ ಬರುವರೆಗೆ ಬೀಟ್ ಮಾಡಿ. 
- ಅದಕ್ಕೆ ವೆನಿಲ್ಲಾ ಎಸ್ಸೇನ್ಸ್, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
- ಇದು ಆಕಾರವನ್ನು ಹೊಂದುವ ಅಂಟದ ಹಿಟ್ಟಾಗಿರ ಆಗಿರಬೇಕು.
- ಕೊನೆಯದಾಗಿ ಟ್ಯೂಟಿ ಫ್ರುಟಿ ಸೇರಿಸಿ ಮತ್ತು ಮಿಶ್ರಣ ಮಾಡಿ.
- ಹಿಟ್ಟನ್ನು ಉದ್ದಕೆ ಸುತ್ತಿಕೊಳ್ಳಿ. ಪ್ಲ್ಯಾಸ್ಟಿಕ್ ಕವರ್‌ನಲ್ಲಿ ಅದನ್ನು ಸುತ್ತಿ ಒಂದು ಘಂಟೆಯವರೆಗೆ ರೆಫ್ರಿಜಿರೇಟರ್‌ನಲ್ಲಿ ಇರಿಸಿ
- ಈಗ ಹಿಟ್ಟನ್ನು ಚಿಕ್ಕ ಚಿಕ್ಕ ಕುಕೀಸ್ ಆಕಾರಕ್ಕೆ ಕತ್ತರಿಸಿ, 
- ಕತ್ತರಿಸಿದ ಕುಕೀಗಳನ್ನು ಅಲ್ಯೂಮಿನಿಯಂ ಹಾಳೆಯಿಂದ ಮುಚ್ಚಿದ ಬೇಕಿಂಗ್ ಟ್ರೇಗೆ ವರ್ಗಾಯಿಸಿ. 180 ಡಿಗ್ರಿ ಮತ್ತು 15 ನಿಮಿಷಗಳ ಕಾಲ ಬೇಯಿಸಿ ಅಥವಾ ಕುಕೀಗಳ ಅಂಚುಗಳು ಕಂದು ಬಣ್ಣ ಬರುವ ತನಕ ಬೇಯಿಸಿ

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗಳಿಗಾಗಿ ಆರೋಗ್ಯ ಸಲಹೆಗಳು..