Select Your Language

Notifications

webdunia
webdunia
webdunia
webdunia

ದೀಪಾವಳಿ ಹಬ್ಬಕ್ಕೆ ಸುಲಭವಾಗಿ ತಯಾರಿಸಿ ಹೆಸರಿಟ್ಟಿನ ಉಂಡೆ.!

ದೀಪಾವಳಿ ಹಬ್ಬಕ್ಕೆ ಸುಲಭವಾಗಿ ತಯಾರಿಸಿ ಹೆಸರಿಟ್ಟಿನ ಉಂಡೆ.!
ಬೆಂಗಳೂರು , ಶುಕ್ರವಾರ, 2 ನವೆಂಬರ್ 2018 (16:49 IST)
ಬೇಕಾಗುವ ಸಾಮಗ್ರಿಗಳು
 
1 ಕಪ್ ಹೆಸರು ಬೆಳೆ
1/2 ಕಪ್ ಸಕ್ಕರೆ
1/4 ಕಪ್ ತುಪ್ಪ
8-10 ಗೋಡಂಬಿ
 
ಮಾಡುವ ವಿಧಾನ
 
* ಒಂದು ಚಮಚ ತುಪ್ಪದಲ್ಲಿ ಗೋಡಂಬಿಯನ್ನು ಹುರಿದಿಟ್ಟುಕೊಳ್ಳಿ.
 
* ದಪ್ಪತಳದ ಪಾತ್ರೆಯಲ್ಲಿ ಹೆಸರು ಬೆಳೆಯನ್ನು ಹಾಕಿ ಮಧ್ಯಮ ಉರಿಯಲ್ಲಿ ಕಂದು ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿದಿಟ್ಟುಕೊಳ್ಳಿ.
 
* ಹುರಿದ ಹೆಸರು ಬೆಳೆಯನ್ನು ತಣ್ಣಗಾಗಿಸಿ, ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿಮಾಡಿಕೊಳ್ಳಿ.
 
* ಸಕ್ಕರೆಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿಮಾಡಿಕೊಳ್ಳಿ.
 
* ಪುಡಿಮಾಡಿದ ಹೆಸರು ಬೆಳೆ ಮತ್ತು ಸಕ್ಕರೆಯನ್ನು ಜರಡಿಗೆ ಹಾಕಿ, ಸರಿಯಾಗಿ ಪುಡಿಯಾಗದ ಹೆಸರು ಬೆಳೆ ಮತ್ತು ಸಕ್ಕರೆಯನ್ನು ಮತ್ತೆ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿಮಾಡಿಕೊಳ್ಳಿ.
 
* ನಂತರ ಪುಡಿಮಾಡಿದ ಹೆಸರು ಬೆಳೆ ಮತ್ತು ಸಕ್ಕರೆಗೆ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು 1/4 ಕಪ್ ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಉಂಡೆಯನ್ನು ಕಟ್ಟಿ.
 
* ಸುಲಭವಾಗಿ ತಯಾರಿಸಿದ ರುಚಿಕರ ಹಾಗೂ ಆರೋಗ್ಯಕರ ಹೆಸರಿಟ್ಟಿನ ಉಂಡೆ ಸವಿಯಲು ಸಿದ್ಧ.!

Share this Story:

Follow Webdunia kannada

ಮುಂದಿನ ಸುದ್ದಿ

ಸೇಬು ಹಣ್ಣಿನ ಪಾಯಸ